ಮಂಗಳೂರು: ಆಳ ಸಮುದ್ರದಲ್ಲಿ ಮೀನುಗಾರರಿಂದ ಭಾರೀ ಬೇಟೆ, 350 ಕೆಜಿ ತೂಕದ ಮುರು ಮೀನು ಬಲೆಗೆ

ಮಂಗಳೂರು: ಆಳ ಸಮುದ್ರದಲ್ಲಿ ಬೇಟೆಗೆ ತೆರಳಿದ್ದ ಮೀನುಗಾರರ ತಂಡಕ್ಕೆ ಬೃಹತ್​ ಗಾತ್ರದ ಮೀನೊಂದು ಬಲೆಗೆ ಬಿದ್ದಿದೆ. ಸುಮಾರು 350 ಕೆಜಿ ತೂಕದ ಮುರು ಮೀನು ಬಲೆಗೆ ಬಿದ್ದಿದೆ. ಮಂಗಳೂರಿನಿಂದ (Mangalore) ಆಳ ಸಮುದ್ರಕ್ಕೆ (deep sea) ಮೀನುಗಾರಿಕೆಗೆ ಹೋದಾಗ ಮೊದಲ ಬಾರಿಗೆ ದೊಡ್ಡ ಗಾತ್ರದ ಮುರು ಮೀನು ಸಿಕ್ಕಿಬಿದ್ದಿದೆ.

ಮಂಗಳೂರು, ಸೆಪ್ಟೆಂಬರ್​ 29: ಆಳ ಸಮುದ್ರದಲ್ಲಿ ಬೇಟೆಗೆ ತೆರಳಿದ್ದ ಮೀನುಗಾರರ (fishermen) ತಂಡಕ್ಕೆ ಬೃಹತ್​ ಗಾತ್ರದ ಮೀನೊಂದು ಬಲೆಗೆ ಬಿದ್ದಿದೆ. ಸುಮಾರು 350 ಕೆಜಿ ತೂಕದ ಮುರು ಮೀನು ಬಲೆಗೆ ಬಿದ್ದಿದೆ. ಮಂಗಳೂರಿನಿಂದ (Mangalore) ಆಳ ಸಮುದ್ರಕ್ಕೆ (deep sea) ಮೀನುಗಾರಿಕೆಗೆ ಹೋದಾಗ ಮೊದಲ ಬಾರಿಗೆ ದೊಡ್ಡ ಗಾತ್ರದ ಮುರು ಮೀನು ಸಿಕ್ಕಿಬಿದ್ದಿದೆ. ಒಂದು ಕೆ.ಜಿ.ಗೆ 200 ರೂಪಾಯಿ ಬೆಳೆಬಾಳುವ ಮುರು ಮೀನು ಇದಾಗಿದೆ. ಒಟ್ಟಿನಲ್ಲಿ ಮೀನುಗಾರರು ಒಂದೇ ಮೀನಿನಿಂದ ಭರ್ಜರಿ ಆದಾಯ ಗಳಿಸಿದ್ದಾರೆ. ಸಾಮಾನ್ಯವಾಗಿ ಸಣ್ಣ ಗಾತ್ರದ ಮುರು ಮೀನು ಬೇಟೆಗೆ ಸಿಗುತ್ತದೆ. ಆದರೆ ಈ ಪಾಟಿ ದೊಡ್ಡದಾದ ಮೀನು ಸಿಕ್ಕಿರುವುದು ಇದೇ ಮೊದಲು. ಕಳೆದ ಮೂರು ದಿನಗಳ ಹಿಂದೆ ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಈ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:47 pm, Fri, 29 September 23

ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
Loading...
Unable to load recommendations.
Follow Us