ಮಂಗಳೂರು: ತಾಯಿಯನ್ನೇ ಯದ್ವಾತದ್ವ ಥಳಿಸಿ ಚಪ್ಪಲಿಯಿಂದ ಹೊಡೆದ ಯುವತಿ, ವಿಡಿಯೋ ವೈರಲ್

Edited By:

Updated on: Nov 29, 2025 | 9:11 AM

ಉತ್ತರ ಕರ್ನಾಟಕ ಮೂಲದ ಕುಟುಂಬವೊಂದರ ತಾಯಿ ಮತ್ತು ಮಗಳು ಹೊಡೆದಾಡಿಕೊಂಡ ಘಟನೆ ಮಂಗಳೂರು ನಗರದ ಮೂಡುಶೆಡ್ಡೆ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆದಿದೆ. ಮಗಳೇ ತಾಯಿಯನ್ನು ಅಮಾನುಷವಾಗಿ ಥಳಿಸಿ, ಚಪ್ಪಲಿಯಿಂದ ಹೊಡೆಯುತ್ತಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ವೈರಲ್ ವಿಡಿಯೋ ಇಲ್ಲಿದೆ.

ಮಂಗಳೂರು, ನವೆಂಬರ್ 29: ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಶೆಡ್ಡೆ ಗ್ರಾಮ ಪಂಚಾಯತ್ ಆವರಣದಲ್ಲಿ ಮಗಳೇ ತಾಯಿಗೆ ಹಿಗ್ಗಾಮುಗ್ಗಾ ಥಳಿಸಿ, ಚಪ್ಪಲಿಯಿಂದ ಹೊಡೆದ ವಿಡಿಯೋ ವೈರಲ್ ಆಗಿದೆ. ಮಗಳ ವರ್ತನೆಯ ಬಗ್ಗೆ ಪದೇಪದೇ ದೂರು ನೀಡಲು ತಾಯಿ ಪೊಲೀಸ್ ಠಾಣೆಗೂ, ಪಂಚಾಯತ್ ಕಚೇರಿಗೂ ಹೋಗುತ್ತಿದ್ದಳು. ಉತ್ತರ ಕರ್ನಾಟಕ ಮೂಲದ ಈ ತಾಯಿ–ಮಗಳು ನಡುವೆ ಈ ಹಿಂದೆಯೇ ಹಲವು ಬಾರಿ ಜಗಳಗಳು ನಡೆದಿದ್ದು, ಕೆಲ ದಿನಗಳ ಹಿಂದೆ ಸಹ 112 ಕಂಟ್ರೋಲ್ ರೂಂಗೆ ಕರೆ ಮಾಡಲಾಗಿತ್ತು. ಕುಟುಂಬ ಕಲಹದ ವೇಳೆ “ನೀನು ನನ್ನ ಮಗಳೇ ಅಲ್ಲ” ಎಂದು ತಾಯಿ ಹೇಳಿಕೊಂಡಿದ್ದಳು. ಅಲ್ಲದೆ, ತಾಯಿ ತನ್ನ ವಂಶವೃಕ್ಷದ ದಾಖಲೆಗಳಲ್ಲಿ ಮಗಳ ಹೆಸರನ್ನು ತೆಗೆದುಹಾಕುವಂತೆ ಪಂಚಾಯತ್‌ಗೆ ಪದೇಪದೇ ಮನವಿ ಸಲ್ಲಿಸಿದ್ದರು ಎನ್ನಲಾಗಿದೆ. ಇದರಿಂದಾಗಿ ಇಬ್ಬರ ನಡುವೆ ಹಲವು ಬಾರಿ ಗಲಾಟೆಗಳು ನಡೆದಿದ್ದವು ಎಂಬುದು ತಿಳಿದುಬಂದಿದೆ. ಮೂರು ದಿನಗಳ ಹಿಂದೆ ನಡೆದ ಘಟನೆಯ ವಿಡಿಯ ಈಗ ವೈರಲ್ ಆಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ