ಮದುವೆ ಬಗ್ಗೆ ಇರುವ ಕನಸಿನ ಬಗ್ಗೆ ಹೇಳಿಕೊಂಡ ಮಂಜು ಪಾವಗಡ 

| Updated By: ರಾಜೇಶ್ ದುಗ್ಗುಮನೆ

Updated on: Aug 16, 2021 | 7:56 PM

ಮಂಜು ಅವರನ್ನು ಕಾರಿನ ಮೇಲೆ ಕರೆದುಕೊಂಡು ಹೋಗಿ ಮೆರವಣಿಗೆ ಮಾಡಲಾಗಿದೆ. ಹೂವಿನ ಮಳೆ ಸುರಿದು ಅಭಿಮಾನಿಗಳು ಮಂಜು ಅವರನ್ನು ಸ್ವಾಗತಿಸಿದ್ದಾರೆ.

ಬಿಗ್​ ಬಾಸ್​ ಕನ್ನಡ ಸೀಸನ್​ 8ರ ವಿನ್ನರ್​​ ಮಂಜು ಅವರು ತಮ್ಮ ಹುಟ್ಟೂರು ಪಾವಗಡದ ಮೇಲೆ ಸಾಕಷ್ಟು ಅಭಿಮಾನ ಹೊಂದಿದ್ದಾರೆ. ಬಿಗ್​ ಬಾಸ್​ ಗೆದ್ದ ನಂತರದಲ್ಲಿ ಮಾಧ್ಯಮಗಳಿಗೆ ಸಂದರ್ಶನ ನೀಡುವುದು, ಸಾಮಾಜಿಕ ಜಾಲತಾಣದಲ್ಲಿ ಲೈವ್​ ಬಂದು ಅಭಿಮಾನಿಗಳ ಜತೆ ಚರ್ಚೆ ನಡೆಸುವುದರಲ್ಲಿ ಮಂಜು ಬ್ಯುಸಿಯಾಗಿದ್ದರು. ಈಗ ಅವರು ಒಂದು ವಾರದ ಬಳಿಕ ತಮ್ಮ ಹುಟ್ಟೂರಿಗೆ ತೆರಳಿದ್ದಾರೆ. ಅಲ್ಲಿ ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ.

ಮಂಜು ಅವರನ್ನು ಕಾರಿನ ಮೇಲೆ ಕರೆದುಕೊಂಡು ಹೋಗಿ ಮೆರವಣಿಗೆ ಮಾಡಲಾಗಿದೆ. ಹೂವಿನ ಮಳೆ ಸುರಿದು ಅಭಿಮಾನಿಗಳು ಮಂಜು ಅವರನ್ನು ಸ್ವಾಗತಿಸಿದ್ದಾರೆ. ಈ ವೇಳೆ ನಡೆದ ಪ್ರೆಸ್​ಮೀಟ್​ನಲ್ಲಿ ಮದುವೆ ಬಗ್ಗೆ ಮಂಜು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ನಿಮ್ಮದು ಸುದೀಪ್​ ಜಾತಿಯೇ ಆಗಿದ್ರಿಂದ ಬಿಗ್​ಬಾಸ್​ ಟ್ರೋಫಿ ಸಿಕ್ತು ಎಂದವರಿಗೆ ಖಡಕ್ ಉತ್ತರ ಕೊಟ್ಟ ಮಂಜು ಪಾವಗಡ