ಸಂಸತ್ ಭವನದಲ್ಲಿ ರಾದ್ಧಾಂತ ಸೃಷ್ಟಿಸಿದ ಮೈಸೂರಿನ ಮನೋರಂಜನ್​ಗೆ ಅರಕಲಗೂಡು ಬಳಿ 9-ಎಕರೆ ಫಾರ್ಮ್​ಹೌಸ್ ಇದೆ!

|

Updated on: Dec 14, 2023 | 1:32 PM

ಮನೋತಂಜನ್ ತಂದೆ ಖಾಸಗಿ ಕಂಪನಿಯೊಂದರಲ್ಲಿ ನೌಕರಿ ಮಾಡುತ್ತಿದ್ದರು ಮತ್ತು ನಿವೃತ್ತರಾದ ಬಳಿಕ ಮಲ್ಲಾಪುರದಲ್ಲಿ 9 ಎಕರೆ ಜಮೀನು ಖರೀದಿಸಿ ಫಾರ್ಮ್ ಮಾಡಿದ್ದಾರೆ. ಜಮೀನು ಮನೋರಂಜನ್ ಹೆಸರಲ್ಲೇ ಇರುವಂತಿದೆ. ಮೊದಲು ಇದೇ ಜಮೀನಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದವರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಹಾಸನ: ನಿನ್ನೆ ತನ್ನ ಸಹಚರನೊಂದಿಗೆ ಸಂಸತ್ ಭವನದಲ್ಲಿ (Parliament House) ಕಲರ್ ಸ್ಮೋಕ್ ಪಟಾಕಿ (colour smoke cracker) ಸಿಡಿಸಿ ಆನಾಹುತ ಸೃಷ್ಟಿಸಿದ ಮೈಸೂರಿನ ಡಿ ಮನೋರಂಜನ್ (D Manoranjan) ಅಸಲಿಗೆ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಮಲ್ಲಾಪುರ ಗ್ರಾಮದವನು. ಇವನ ತಂದೆ ಖಾಸಗಿ ಕಂಪನಿಯೊಂದರಲ್ಲಿ ನೌಕರಿ ಮಾಡುತ್ತಿದ್ದರು ಮತ್ತು ನಿವೃತ್ತರಾದ ಬಳಿಕ ಮಲ್ಲಾಪುರದಲ್ಲಿ 9- ಎಕರೆ ಜಮೀನು ಖರೀದಿಸಿ ಫಾರ್ಮ್ ಮಾಡಿದ್ದಾರೆ. ಜಮೀನು ಮನೋರಂಜನ್ ಹೆಸರಲ್ಲೇ ಇರುವಂತಿದೆ. ಮೊದಲು ಇದೇ ಜಮೀನಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದವರು, ಸುಮಾರು ವರ್ಷಗಳ ಹಿಂದೆಯೇ ಮನೆಯನ್ನು ಕೆಡವಿ ಮೈಸೂರಲ್ಲಿ ವಾಸ ಮಾಡಲಾರಂಭಿಸಿದರೆಂದು ಸ್ಥಳೀಯರು ತಿಳಿಸಿದ್ದಾರೆ. ತೋಟದಲ್ಲಿ ತೆಂಗಿನ ಮರಗಳಿವೆ ಮತ್ತು ಮೊದಲೆಲ್ಲ ಆಡುಕುರಿಗಳನ್ನು ಸಾಕಿ ಬೆಳೆಸಿ ಮಾರಾಟ ಮಾಡುತ್ತಿದ್ದರಂತೆ. ಈಗ ಜಮೀನನ್ನು ಲೀಸ್ ಗೆ ನೀಡಿದ್ದಾರೆಂದು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ ಟಿವಿ9 ವರದಿಗಾರ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ