AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂತ್ರಾಲಯ ರಾಯರ ಮಠದಲ್ಲಿ ಸಂಭ್ರಮ: 335ನೇ ಆರಾಧನಾ ಮಹೋತ್ಸವಕ್ಕೆ ಸಕಲ ಸಿದ್ಧತೆ

ಮಂತ್ರಾಲಯ ರಾಯರ ಮಠದಲ್ಲಿ ಸಂಭ್ರಮ: 335ನೇ ಆರಾಧನಾ ಮಹೋತ್ಸವಕ್ಕೆ ಸಕಲ ಸಿದ್ಧತೆ

ಭೀಮೇಶ್​​ ಪೂಜಾರ್
| Edited By: |

Updated on: Aug 26, 2026 | 12:58 PM

Share

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ಮತ್ತು ಸಪ್ತ ರಾತ್ರೋತ್ಸವಕ್ಕೆ ಮಠ ಸಜ್ಜಾಗಿದೆ. ಆಗಸ್ಟ್ 27ರಿಂದ ಸೆಪ್ಟೆಂಬರ್ 2ರವರೆಗೆ ಏಳು ದಿನಗಳ ಕಾಲ ವಿಶೇಷ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಧ್ವಜಾರೋಹಣ, ಪೂರ್ವಾರಾಧನೆ, ಮಧ್ಯಾರಾಧನೆ, ಉತ್ತರಾರಾಧನೆ, ಮಹಾರಥೋತ್ಸವ ಸೇರಿ ಹಲವು ವಿಶಿಷ್ಟ ಪೂಜಾ ಕೈಂಕರ್ಯಗಳು ಜರುಗಲಿವೆ.

ರಾಯಚೂರು, ಆಗಸ್ಟ್ 26: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠವು 355ನೇ ಆರಾಧನಾ ಮಹೋತ್ಸವ ಹಾಗೂ ಸಪ್ತ ರಾತ್ರೋತ್ಸವಕ್ಕಾಗಿ ಮಧುವಣಗತ್ತಿಯಂತೆ ಶೃಂಗಾರಗೊಂಡಿದೆ. ಆಗಸ್ಟ್ 27ರಿಂದ ಸೆಪ್ಟೆಂಬರ್ 2ರವರೆಗೆ ಒಟ್ಟು ಏಳು ದಿನಗಳ ಕಾಲ ನಡೆಯಲಿರುವ ಈ ಮಹೋತ್ಸವಕ್ಕೆ ಮಠದ ಆಡಳಿತ ಮಂಡಳಿ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಆಗಸ್ಟ್ 27ರಂದು ಧ್ವಜಾರೋಹಣದೊಂದಿಗೆ ಸಪ್ತ ರಾತ್ರೋತ್ಸವ ಹಾಗೂ ಆರಾಧನಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಶ್ರೀಮಠದ ಶ್ರೀಗಳು ಧ್ವಜಾರೋಹಣ ನೆರವೇರಿಸಿ, ಗೋಪೂಜೆ, ಲಕ್ಷ್ಮಿ ಪೂಜೆ, ಧಾನ್ಯ ಪೂಜೆ ಹಾಗೂ ಅಶ್ವ ಪೂಜೆಗಳನ್ನು ನಡೆಸಲಿದ್ದಾರೆ.

ಆಗಸ್ಟ್ 29ರಂದು ಪೂರ್ವಾರಾಧನೆ, ಆಗಸ್ಟ್ 30ರಂದು ಮಧ್ಯಾರಾಧನೆ ಮತ್ತು ಆಗಸ್ಟ್ 31ರಂದು ಉತ್ತರಾರಾಧನೆ ನಡೆಯಲಿದೆ. ಮಧ್ಯಾರಾಧನೆಯ ದಿನ ರಾಯರು ಬೃಂದಾವನ ಪ್ರವೇಶಿಸಿದ ವಿಶೇಷ ದಿನವಾಗಿದ್ದು, ಪಂಚಾಮೃತ ಅಭಿಷೇಕ ಮತ್ತು ಸುವರ್ಣ ರಥೋತ್ಸವ ಜರುಗಲಿದೆ. ಉತ್ತರಾರಾಧನೆಯಂದು ಮಹಾರಥೋತ್ಸವ ನಡೆಯಲಿದ್ದು, ಶ್ರೀಗಳು ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ವಸಂತೋತ್ಸವ ಹಾಗೂ ಶ್ರೀಗಳ ಆಶೀರ್ವಚನವೂ ಇರಲಿದೆ. ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಸೆಪ್ಟೆಂಬರ್ 2ರಂದು ಸಪ್ತ ರಾತ್ರೋತ್ಸವಕ್ಕೆ ತೆರೆಬೀಳಲಿದೆ. ಈ ಮಹೋತ್ಸವಕ್ಕೆ ದೇಶದ ನಾನಾ ಭಾಗಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us