Manvitha Kamat: ಹೇಗಿದೆ ನೋಡಿ ನಟಿ ಮಾನ್ವಿತಾ ಕಾಮತ್ ಮದುವೆ ಆಮಂತ್ರಣ
‘ಕೆಂಡಸಂಪಿಗೆ’ ಸಿನಿಮಾ ಬಣ್ಣದ ಬದುಕು ಆರಂಭಿಸಿದ ಮಾನ್ವಿತಾ ಮದುವೆ ಆಗುತ್ತಿದ್ದಾರೆ. ಮೈಸೂರು ಮೂಲದ ಅರುಣ್ ಕುಮಾರ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸಂಗೀತ ಆಧಾರಿತ ಟೆಕ್ ಕಂಪನಿಯ ಇಂಜಿನಿಯರ್ ಆಗಿ ಅವರು ಕೆಲಸ ನಿರ್ವಹಿಸುತ್ತಿದ್ದಾರೆ.
ನಟಿ ಮಾನ್ವಿತಾ ಕಾಮತ್ (Manvitha Kamat) ಅವರು ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. ‘ಕೆಂಡಸಂಪಿಗೆ’ ಸಿನಿಮಾ ಬಣ್ಣದ ಬದುಕು ಆರಂಭಿಸಿದ ಮಾನ್ವಿತಾ ಮದುವೆ ಆಗುತ್ತಿದ್ದಾರೆ. ಮೈಸೂರು ಮೂಲದ ಅರುಣ್ ಕುಮಾರ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸಂಗೀತ ಆಧಾರಿತ ಟೆಕ್ ಕಂಪನಿಯ ಇಂಜಿನಿಯರ್ ಆಗಿ ಅವರು ಕೆಲಸ ನಿರ್ವಹಿಸುತ್ತಿದ್ದಾರೆ. ಮೇ 1ರಂದು ಮಾನ್ವಿತಾ ಹಾಗೂ ಅರುಣ್ ಕುಮಾರ್ ಮದುವೆ ನಡೆಯಲಿದೆ. ಏಪ್ರಿಲ್ 29ಕ್ಕೆ ಮೆಹಂದಿ ಕಾರ್ಯಕ್ರಮ, ಏಪ್ರಿಲ್ 30 ಅರಿಶಿಣ ಶಾಸ್ತ್ರ ಜರುಗಲಿದೆ. ಏಪ್ರಿಲ್ 30ರಂದು ಸಂಗೀತ ಕಾರ್ಯಕ್ರಮ ನಡೆಯಲಿದೆ. ಚಿಕ್ಕಮಗಳೂರಿನ ಕಳಸದಲ್ಲಿ ಮದುವೆ ನಡೆಯಲಿದೆ. ಅವರ ಮದುವೆ ಆಮಂತ್ರಣದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ