ರೂ. 8,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಉತ್ತಮ ಗುಣದರ್ಜೆಯ ಸ್ಮಾರ್ಟ್ಪೋನ್ಗಳು ಆನ್ಲೈನ್ ಮಾರ್ಕೆಟ್ನಲ್ಲಿ ಲಭ್ಯ!
ಫೋನುಗಳನ್ನು ಕೊಳ್ಳವುದು ಯಾವತ್ತಿಗೂ ಒಂದು ಗೋಜಿನ ಕೆಲಸವೇ. ಹಲವಾರು ದೊಡ್ಡ ಸಂಸ್ಥೆಗಳ ಆಕರ್ಷಕ ವಿನ್ಯಾಸ ಮತ್ತು ಫೀಚರ್ಗಳ ಫೋನುಗಳು ದುಬಾರಿ ಅನಿಸದ ಬೆಲೆಯಲ್ಲಿ ಸಿಗುತ್ತಿವೆ.
ಮಕ್ಕಳ ಆಫ್ಲೈನ್ ತರಗತಿಗಳು ಆರಂಭವಾಗಿವೆಯಾದರೂ ಕೆಲ ಶಾಲೆಗಳು ಇನ್ನೂ ಆನ್ ಲೈನ್ ನಲ್ಲೇ ಮಕ್ಕಳಿಗೆ ಪಾಠ ಮಾಡುತ್ತಿವೆ. ದಸರಾ ರಜೆ ಮುಗಿದು ತರಗತಿಗಳು ಪುನರಾರಂಭವಾಗಿರುವುದರಿಂದ ಅವರಿಗೆ ಫೋನ್ ಗಳು ಬೇಕೇಬೇಕು. ಅದಕ್ಕೂ ಮಿಗಿಲಾದ ಸಂಗತಿಯೆಂದರೆ ಅವರಿಗೆ ಅಂತಿಂಥ ಪೋನ್ಗಳು ನಡೆಯುವುದಿಲ್ಲ, ಸ್ಮಾರ್ಟ್ ಫೋನ್ ಗಳೇ ಆಗಬೇಕು. ಕೆಲ ವಾರಗಳ ಹಿಂದೆ ಹಬ್ಬದ ಸೀಸನ್ ಪ್ರಯುಕ್ತ ಈ-ಕಾಮರ್ಸ್ ಫೋರ್ಟಲ್ಗಳು ರೂ. 6,000 ಗಳಿಗಿಂತ ಕಡಿಮೆ ದರದಲ್ಲಿ ಸ್ಮಾರ್ಟ್ ಫೋನ್ಗಳನ್ನು ಮಾರುತ್ತಿರುವ ಬಗ್ಗೆ ಚರ್ಚೆ ಮಾಡಿದ್ದೆವು. ಈಗ ನಿಮಗೆ ನಾವಿಲ್ಲಿ ಪರಿಚಯಿಸುತ್ತಿರೋದು ರೂ. 8,000 ಮತ್ತು ಅದಕ್ಕಿಂತ ಕಡಿಮೆ ಬೆಲೆಗೆ ಆನ್ ಲೈನ್ ಮಾರ್ಕೆಟ್ ನಲ್ಲಿ ಲಭ್ಯವಿರುವ ಉತ್ತಮ ಗುಣಮಟ್ಟದ ಮತ್ತು ಪ್ರತಿಷ್ಠಿತ ಕಂಪನಿಗಳ ಸ್ಮಾರ್ಟ್ ಪೋನ್ಗಳು.
ಫೋನುಗಳನ್ನು ಕೊಳ್ಳವುದು ಯಾವತ್ತಿಗೂ ಒಂದು ಗೋಜಿನ ಕೆಲಸವೇ. ಹಲವಾರು ದೊಡ್ಡ ಸಂಸ್ಥೆಗಳ ಆಕರ್ಷಕ ವಿನ್ಯಾಸ ಮತ್ತು ಫೀಚರ್ಗಳ ಫೋನುಗಳು ದುಬಾರಿ ಅನಿಸದ ಬೆಲೆಯಲ್ಲಿ ಸಿಗುತ್ತಿವೆ. ಗುಣಮಟ್ಟದಲ್ಲಿ ಒಂದಕ್ಕಿಂತ ಇನ್ನೊಂದು ಮೇಲು. ಅವುಗಳನ್ನು ನೋಡುತ್ತಾ ಕೂತರೆ ಯಾವುದನ್ನು ಆರಿಸಿಕೊಳ್ಳವುದು ಎಂಬ ಗೊಂದಲಕ್ಕೆ ಬಿದ್ದುಬಿಡುತ್ತೇವೆ.
ಓಕೆ, ನಿಮ್ಮ ತಲೆನೋವನ್ನು ಕೊಂಚ ಕಡಿಮೆ ಮಾಡಲು ನಾವು ಫ್ಲಿಪ್ಕಾರ್ಟ್ನಲ್ಲಿ ರೂ. 8,000 ಗಳಿಗಿಂತ ಕಡಿಮೆ ಬೆಲೆಗೆ ಲಭ್ಯವಿರುವ ಕೆಲವು ಬ್ರ್ಯಾಂಡ್ಗಳನ್ನು ನಿಮ್ಮ ಗಮನಕ್ಕೆ ತರುತ್ತೇವೆ. ಫ್ಲಿಪ್ಕಾರ್ಟ್ನಲ್ಲಿ ಲಿಟ್ಲ್ ಸಿ3 ಸ್ಮಾರ್ಟ್ ಫೋನ್ ರೂ. 7499 ಗಳಿಗೆ ಸಿಗುತ್ತಿದೆ. ಶಾಮಿ ಸಂಸ್ಥೆಯ ರೆಡ್ಮಿ ನಾರ್ಜೋ 50ಐ ಸ್ಮಾರ್ಟ್ ಪೋನ್ ಸಹ ರೂ. 7,499 ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಸ್ಯಾಮ್ಸಂಗ್ ಗೆಲ್ಯಾಕ್ಸಿ ಎಮ್ 02 ಫೋನ್ ರೂ. 7,999 ಗಳಿಗೆ ಲಭ್ಯ.
ಹಾಗೆಯೇ, ರೆಡ್ಮಿ 9ಎ ಸ್ಪೋರ್ಟ್ ಕೇವಲ ರೂ. 6,999 ಗಳಿಗೆ ಮಾರಾಟವಾಗುತ್ತಿದೆ. ರೀಯಲ್ಮಿ ಸಿ20 ಸ್ಪಾರ್ಟ್ ಪೋನಿನ ಬೆಲೆ ರೂ. 7,650.
ಈ ಎಲ್ಲ ಫೋನ್ಗಳು ಅತ್ಯುತ್ತಮ ಫೀಚರ್ ಗಳೊಂದಿಗೆ ಉತ್ತಮ ಕ್ವಾಲಿಟಿಯ ರೇರ್ ಮತ್ತು ಸೆಲ್ಫೀ ಕೆಮೆರಾಗಳನ್ನು ಹೊಂದಿದ್ದು ಸ್ಟೋರೇಜ್ ಕೆಪಾಸಿಟಿಯೂ ಚೆನ್ನಾಗಿದೆ.
ಇದನ್ನೂ ಓದಿ: ಅಮೆಜಾನ್ ಪ್ರೈಮ್ ವಿಡಿಯೊ ಮಾಸಿಕ ಸದಸ್ಯತ್ವ ವಾಪಸ್ಸು ಬಂದಿದೆ, ಆದರೆ ಷರತ್ತುಗಳು ಅನ್ವಯ!