ಅಮೆಜಾನ್ ಪ್ರೈಮ್ ವಿಡಿಯೊ ಮಾಸಿಕ ಸದಸ್ಯತ್ವ ವಾಪಸ್ಸು ಬಂದಿದೆ, ಆದರೆ ಷರತ್ತುಗಳು ಅನ್ವಯ!

ಇ-ಕಾಮರ್ಸ್ ದೈತ್ಯ ಸಂಸ್ಥೆಯೆನಿಸಿಕೊಂಡಿರುವ ಅಮೇಜಾನ್ ಪ್ರೈಮ್ ವಿಡಿಯೊ ಈಗ ಮೂರು ಬಗೆಯ ಚಂದಾ ಆದ್ಯತೆಗಳನ್ನು ಗ್ರಾಹಕರಿಗೆ ನೀಡುತ್ತಿದೆ. ನೀವು ಒಂದು ವರ್ಷದ ಸದಸ್ಯತ್ವ ಬಯಸಿದರೆ ರೂ. 999 ಗಳನ್ನು ಪಾವತಿಸಬೇಕು.

ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಅಮೇಜಾನ್ ಪ್ರೈಮ್ ವಿಡಿಯೊ ಕೆಲ ತಿಂಗಳ ಹಿಂದೆ ಮಾಸಿಕ ಸದಸ್ಯತ್ವವನ್ನು ರದ್ದು ಮಾಡಿತ್ತು. ಆನ್ಲೈನ್ ಪಾವತಿಗಳನ್ನು ಸ್ವೀಕಸಲು ಅಡಿಷನಲ್ ಪ್ಯಾಕ್ಟರ್ ಆಫ್ ಅಥೆಂಟಿಕೇಶನ್ (ಎ ಎಫ್ ಪಿ) ಜಾರಿಗೊಳಿಸುವಂತೆ ಆರ್ ಬಿ ಸೂಚಿಸಿದ ಹಿನ್ನೆಲೆಯಲ್ಲಿ ಮಾಸಿಕ ಸದಸ್ಯತ್ವವನ್ನು ರದ್ದು ಮಾಡಲಾಗಿತ್ತು. ಅಕ್ಟೋಬರ್ 1 ರಿಂದ ಅದನ್ನು ಈ ಒಟಿಟಿ ವಾಪಸ್ಸು ತಂದಿದೆಯಾದರೂ ಆರ್ ಬಿ ಐ ನ ಕೆಲ ನಿಬಂಧನೆಗಳನ್ನು ಪಾಲಿಸಬೇಕು. ನೀವು ಸದಸ್ಯತ್ವ ಪಡೆಯಬೇಕಾದರೆ ಅಥವಾ ಮಾಸಿಕ ಚಂದಾ ನೀಡಬೇಕಾದರೆ ಎಲೆಕ್ಟ್ರಾನಿಕ್ ಮೋಡ್​ಗಳ ಮುಖಾಂತರ ಹಣ ಪಾವತಿ ಮಾಡಿವಂತಿಲ್ಲ.

ಇ-ಕಾಮರ್ಸ್ ದೈತ್ಯ ಸಂಸ್ಥೆಯೆನಿಸಿಕೊಂಡಿರುವ ಅಮೇಜಾನ್ ಪ್ರೈಮ್ ವಿಡಿಯೊ ಈಗ ಮೂರು ಬಗೆಯ ಚಂದಾ ಆದ್ಯತೆಗಳನ್ನು ಗ್ರಾಹಕರಿಗೆ ನೀಡುತ್ತಿದೆ. ನೀವು ಒಂದು ವರ್ಷದ ಸದಸ್ಯತ್ವ ಬಯಸಿದರೆ ರೂ. 999 ಗಳನ್ನು ಪಾವತಿಸಬೇಕು. ಮೂರು ತಿಂಗಳ ಅವಧಿಗೆ ಚಂದಾ ಹಣ ರೂ. 329 ಆಗಿದೆ. ಪ್ರತಿ ತಿಂಗಳು ಹಣ ಕಟ್ಟಿ ಸದಸ್ಯತ್ವ ಪಡೆದುಕೊಳ್ಳಲಿಚ್ಛಿಸುವವರು ಮೇಲೆ ಹೇಳಿದಂತೆ ರೂ. 129 ಪಾವತಿಸಬೇಕು.

ಅಂದಹಾಗೆ, 129 ರೂಪಾಯಿಗಳ ಮಾಸಿಕ ಸದಸ್ಯತ್ವ ಕೇವಲ ಹೊಸ ಗ್ರಾಹಕರಿಗೆ ಮಾತ್ರ ಅನ್ವಯವಾಗುತ್ತದೆ. ಈ ಸದಸ್ಯತ್ವವನ್ನು ಬ್ಯಾಂಕ್ಗಳಲ್ಲಿ ಹಣ ಪಾವತಿಸಿ ಖರೀದಿಸಬಹುದು. ಆರ್ ಬಿ ಐನ ಮಾರ್ಗಸೂಚಿಗಳನ್ನು ಅನುಸರಿಸುತ್ತಿರುವ ಬ್ಯಾಂಕ್ ಗಳಲ್ಲಿ ಮಾತ್ರ ಪೇಮೆಂಟ್ ಮಾಡುವ ಅವಕಾಶವಿರುತ್ತದೆ. ಆಯ್ದ ಡೆಬಿಟ್ ಮತ್ತು ಕ್ರೆಡಿಟ್ ಮೂಲಕ ಹಣ ಪಾವತಿಸಬಹುದು ಎಂದು ಆರ್ ಬಿ ಐ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ:  ‘ಕುಟುಂಬಕ್ಕೆ ಸಮಸ್ಯೆ ಆದಾಗ ಮೊದಲು ಬರೋದು ಸಲ್ಮಾನ್’​​; ಶಾರುಖ್​ ಮಾತನಾಡಿದ್ದ ಹಳೆಯ ವಿಡಿಯೋ ವೈರಲ್​

Click on your DTH Provider to Add TV9 Kannada