ಮಧುರ ಕಂಠ ಮತ್ತು ಮಾದಕ ಸೌಂದರ್ಯದ ‘ನಿಧಿ’ ಸುನಿಧಿ ಹಾಡುವುದಕ್ಕಾಗಿ ವಿದ್ಯಾಭ್ಯಾಸವನ್ನು ತೊರೆದರು

38 ವರ್ಷ ವಯಸ್ಸಿನ ಸುನಿಧಿಗೆ ಬಾಲ್ಯದಿಂದಲೇ ಹಾಡುವ ಹುಚ್ಚು. ಅದು ಅವರನ್ನು ಯಾವ ಮಟ್ಟಿಗೆ ಆವರಿಸಿಕೊಂಡಿತ್ತೆಂದರೆ ವಿದ್ಯಾಭ್ಯಾಸವನ್ನು ನಿಲ್ಲಿಸಿ ಸಂಪೂರ್ಣ ಗಮನವನ್ನು ಹಾಡುವುದರ ಮೇಲೆ ಕೇಂದ್ರೀಕರಿಸಿದರು.

‘ಆಜಾ ನಚಲೆ’ ಸಿನಿಮಾದ ಟೈಟಲ್ ಟ್ರ್ಯಾಕ್ ನೀವು ಲೆಕ್ಕವಿಲ್ಲದಷ್ಟು ಸಲ ಕೇಳಿರಬಹುದು ಮತ್ತು ವಿಡಿಯೋ ಸಹ ನೋಡಿರಬಹುದು. ವಿಡಿಯೋ ನೋಡುತ್ತಿದ್ದರೆ ನಿಮಗೆ ಮಾಧುರಿ ದೀಕ್ಷಿತ್ ಅವರ ಮೇಲಿಂದ ದೃಷ್ಟಿ ಸರಿಸಲಾಗದು. 80 ಮತ್ತು 90 ರ ದಶಕಗಳಲ್ಲಿ ಬಾಲಿವುಡ್ ಆಳಿದ ಸೌಂದರ್ಯ ಮತ್ತು ಪ್ರತಿಭೆಯ ಆಗರವಾಗಿದ್ದ ಮಾಧುರಿ ಈ ಹಾಡಿಗೆ ಅದೆಷ್ಟು ಸೊಗಸಾಗಿ ಕುಣಿದಿದ್ದಾರೆಂದರೆ, ಅದು ಬಹಳಷ್ಟು ಉದಯೋನ್ಮುಖ ಡ್ಯಾನ್ಸರ್ಗಳಿಗೆ ಸಿಗ್ನೇಚರ್ ಸ್ಟೈಲ್ ಆಗಿಬಿಟ್ಟಿತು. ಅಂದಹಾಗೆ, ಈ ಹಾಡಿಗೆ ಧ್ವನಿ ನೀಡಿರುವ ಸುಶ್ರಾವ್ಯ ಕಂಠ ಯಾರದು ಅಂತ ನಿಮಗೆ ಗೊತ್ತಾ? ಬಾಲಿವುಡ್ನ ಅತ್ಯಂತ ಜನಪ್ರಿಯ ಗಾಯಕಿಯಾಗಿರುವ ಸುನಿಧಿ ಚೌಹಾನ್. ಅವರ ‘ಓಂಕಾರ’ ಚಿತ್ರದ ‘ಬೀಡಿ ಜಲೈಲೋ..’ ಹಾಡು ಸಹ ಜನರನ್ನು ಹುಚ್ಚೆಬ್ಬಿಸಿತ್ತು. ಸುನಿಧಿಯವರ ಸ್ವರ ಮಾಧುರ್ಯಕ್ಕೆ ಮನಸೋಲದವನು ಅರಸಿಕ ಅಂದರೆ ಉತ್ಪ್ರೇಕ್ಷೆ ಅನಿಸದು.

38 ವರ್ಷ ವಯಸ್ಸಿನ ಸುನಿಧಿಗೆ ಬಾಲ್ಯದಿಂದಲೇ ಹಾಡುವ ಹುಚ್ಚು. ಅದು ಅವರನ್ನು ಯಾವ ಮಟ್ಟಿಗೆ ಆವರಿಸಿಕೊಂಡಿತ್ತೆಂದರೆ ವಿದ್ಯಾಭ್ಯಾಸವನ್ನು ನಿಲ್ಲಿಸಿ ಸಂಪೂರ್ಣ ಗಮನವನ್ನು ಹಾಡುವುದರ ಮೇಲೆ ಕೇಂದ್ರೀಕರಿಸಿದರು. ಕೇವಲ 12 ನೇ ವಯಸ್ಸಿಗೆ ಅವರು ಲಿಟ್ಲ್ ವಂಡರ್ಸ್ ಮ್ಯೂಸಿಕ್ ಟ್ರೂಪ್ ಸದಸ್ಯೆಯಾಗಿ ಹಾಡಲಾರಂಭಿಸಿದರು ಮತ್ತು 1995ರಲ್ಲಿ ಫಿಲ್ಮ್ಫೇರ್ ಅವಾರ್ಡ್ಸ್ ಕಾರ್ಯ ಕ್ರಮದಲ್ಲಿ ಹಾಡಿ ಮನೆಮಾತಾದರು.

ಮರು ವರ್ಷ ‘ಶಸ್ತ್ರ’ ಹಿಂದಿ ಚಿತ್ರದಲ್ಲಿ ಹಾಡುವ ಮೂಲಕ 13 ನೇ ವಯಸ್ಸಿಗೆ ವೃತ್ತಿಪರ ಗಾಯಕಿ ಎನಿಸಿಕೊಂಡರು. ಅಲ್ಲಿಂದೀಚೆಗೆ ಎಲ್ಲವೂ ಇತಿಹಾಸ.

ಆಗಾಗ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುವ ಸುನಿಧಿ ಮಧುರ ಕಂಠದೊಂದಿಗೆ ಆಕರ್ಷಕ ಸೌಂದರ್ಯದ ಒಡತಿಯೂ ಆಗಿದ್ದಾರೆ. ಅವರ ಡ್ರೆಸ್ ಸೆನ್ಸ್ ಅಧ್ಭುತವಾಗಿದೆ. ಸಾಂಪ್ರದಾಯಿಕ ಉಡುಗೆಗಳ ಜೊತೆ, ಮಾಡ್, ವೆಸ್ಟರ್ನ್ ಮತ್ತು ಜೀನ್ಸ್ ಗಳಲ್ಲೂ ಸುನಿಧಿ ಸೊಗಸಾಗಿ ಕಾಣುತ್ತಾರೆ.

ಕೇವಲ 18 ನೇ ವಯಸ್ಸಿಲ್ಲಿ ನಿರ್ದೇಶಕ ಮತ್ತು ಕೊರಿಯೋಗ್ರಾಫರ್ ಬಾಬ್ಬಿ ಖಾನ್ ಜೊತೆ ಮದುವೆಯಾದ ಸುನಿಧಿ ಪೋಷಕರ ವಿರೋಧ ಕಟ್ಟಿಕೊಂಡರು. ಆದರೆ ಆ ಮದುವೆ ಒಂದೇ ವರ್ಷದ ನಂತರ ಮುರಿದುಬಿತ್ತು.

ಅದಾದ ಮೇಲೆ ಅವರು, ಸಂಗೀತ ನಿರ್ದೇಶಕ ಹಿತೇಷ್ ಸೋನಿಕ್ ಅವರೊಂದಿಗೆ 2 ವರ್ಷಗಳ ಕಾಲ ಡೇಟಿಂಗ್ ನಡೆಸಿ 2012 ರಲ್ಲಿ ಅವರನ್ನು ಮದುವೆಯಾದರು. ಅವರಿಗೊಬ್ಬ ಮಗನಿದ್ದು ತೇಘ್ ಸೊನಿಕ್ ಅಂತ ಹೆಸರಿಟ್ಟಿದ್ದಾರೆ. ತಮ್ಮ ವೈಯಕ್ತಿಕ ಶೈಲಿ ಹೊರತಾಗಿ ವಿವಿಧ ಶೈಲಿಗಳಲ್ಲಿ ಹಾಡುವ ಸುನಿಧಿ, ಪ್ರತಿದಿನ ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಿದ್ದರೂ ತಮ್ಮ ಜನಪ್ರಿಯತೆಯನ್ನು ಖಾಯಂ ಆಗಿ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: Samantha: ಹಣವೇ ಬೇಡ ಎಂದ ಸಮಂತಾ; ವಿಡಿಯೋ ವೈರಲ್​

Click on your DTH Provider to Add TV9 Kannada