ರಾಜ್ಕುಮಾರ್ ಹೆಸರನ್ನು ಚಪ್ಪಾಳೆಗಾಗಿ ಮಾತ್ರ ಬಳಸಲಾಗುತ್ತಿದೆ: ಕಿಶೋರ್ ಬೇಸರ
Dr Rajkumar: ನಿನ್ನೆ ನಡೆದ ಬೆಂಗಳೂರು ಚಲನಚಿತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕಿಶೋರ್, ಚಿತ್ರೋತ್ಸವ ಬೆಳಕು ಚೆಲ್ಲಿದ ಅಂಶಗಳ ಬಗ್ಗೆ ಮಾತನಾಡುತ್ತಾ, ನಮ್ಮ ಹಿರಿಯರು ನಮಗೆ ನೀಡಿದ ಆದರ್ಶನವನ್ನು ಅವರ ಸಾಧನೆಯನ್ನು ನಾವು ಸ್ಥಾವರಗೊಳಿಸುವುದು ಬೇಡ ಜಂಗಮಗೊಳಿಸೋಣ ಎಂದರು. ಈ ವೇಳೆ ನಮ್ಮಲ್ಲಿ ಹಲವರು ರಾಜ್ಕುಮಾರ್ ಅವರ ಹೆಸರನ್ನು ಕೇವಲ ಚಪ್ಪಾಳೆ ಗಿಟ್ಟಿಸಲು ಬಳಸುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಬಹುಭಾಷಾ ನಟ ಕಿಶೋರ್, ಸಾಹಿತ್ಯ ಮತ್ತು ಸಾಮಾಜಿಕ ಹೋರಾಟಗಳಲ್ಲಿ ಆಸಕ್ತಿ ಉಳ್ಳವರು. ನಿನ್ನೆ ಮುಕ್ತಾಯವಾದ 16ನೇ ಬೆಂಗಳೂರು ಅಂತರಾಷ್ಟ್ರೀ ಚಲನಚಿತ್ರೋತ್ಸವದ ರಾಯಭಾರಿ ಆಗಿದ್ದರು ಕಿಶೋರ್. ನಿನ್ನೆ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕಿಶೋರ್, ಚಿತ್ರೋತ್ಸವ ಬೆಳಕು ಚೆಲ್ಲಿದ ಅಂಶಗಳ ಬಗ್ಗೆ ಮಾತನಾಡುತ್ತಾ, ನಮ್ಮ ಹಿರಿಯರು ನಮಗೆ ನೀಡಿದ ಆದರ್ಶನವನ್ನು ಅವರ ಸಾಧನೆಯನ್ನು ನಾವು ಸ್ಥಾವರಗೊಳಿಸುವುದು ಬೇಡ ಜಂಗಮಗೊಳಿಸೋಣ ಎಂದರು. ಈ ವೇಳೆ ನಮ್ಮಲ್ಲಿ ಹಲವರು ರಾಜ್ಕುಮಾರ್ ಅವರ ಹೆಸರನ್ನು ಕೇವಲ ಚಪ್ಪಾಳೆ ಗಿಟ್ಟಿಸಲು ಬಳಸುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 09, 2025 11:29 AM