13 ಭಾಷೆಗಳಲ್ಲಿ ‘ಮಾರ್ಟಿನ್’ ಟ್ರೇಲರ್; ಅಂತಾರಾಷ್ಟ್ರೀಯ ಸುದ್ದಿಗೋಷ್ಠಿಗೆ ಬರಲಿದ್ದಾರೆ ವಿದೇಶಿ ವರದಿಗಾರರು

|

Updated on: Jul 31, 2024 | 8:23 AM

ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಸೆಟ್ಟೇರಿ ವರ್ಷಗಳೇ ಕಳೆದು ಹೋಗಿವೆ. ನಾ-ನಾ ಅಡೆತಡೆಗಳ ಬಳಿಕ ಕೊನೆಗೂ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ವಿಶೇಷ ಎಂದರೆ ಆಗಸ್ಟ್ ​5ರಂದು ಮುಂಬೈನಲ್ಲಿ ಅಂತಾರಾಷ್ಟ್ರೀಯ ಪ್ರೆಸ್​ಮೀಟ್ ನಡೆಯಲಿದೆ. ಈ ಬಗ್ಗೆ ಧ್ರುವ ಸರ್ಜಾ ಮಾತನಾಡಿದ್ದಾರೆ.

‘ಮಾರ್ಟಿನ್’ ಸಿನಿಮಾ ಅಕ್ಟೋಬರ್​ 11ರಂದು ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ವಿಶೇಷ ಎಂದರೆ ಆಗಸ್ಟ್ ​5ರಂದು ಮುಂಬೈನಲ್ಲಿ ಅಂತಾರಾಷ್ಟ್ರೀಯ ಪ್ರೆಸ್​ಮೀಟ್ ನಡೆಯಲಿದೆ. ಈ ಬಗ್ಗೆ ಧ್ರುವ ಸರ್ಜಾ ಮಾತನಾಡಿದ್ದಾರೆ. ‘21 ದೇಶಗಳಿಂದ 27 ರಿಪೋರ್ಟ್​ಗಳು ಬರುತ್ತಿದ್ದಾರೆ. ವಿಸಾ ಪ್ರಕ್ರಿಯೆ ಸ್ವಲ್ಪ ವಿಳಂಬ ಆಯಿತು. ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಯಲಿದೆ. ಕನ್ನಡ ಜೊತೆಗೆ ಅರೆಬಿಕ್, ಕೊರಿಯನ್, ಬೆಂಗಾಲಿ ಸೇರಿ 13 ಭಾಷೆಗಳಲ್ಲಿ ಟ್ರೇಲರ್ ರಿಲೀಸ್ ಆಗಲಿದೆ. ಚೈನೀಸ್, ಜಪಾನೀಸ್ ಸೇರಿ ಅನೇಕ ಭಾಷೆಗಳಲ್ಲಿ ಈಗಾಗಲೇ ಸಿನಿಮಾಗೆ ಬೇಡಿಕೆ ಸೃಷ್ಟಿ ಆಗಿದೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.