Maruti Alto K10 CNG: ಮಾರುತಿ ಸುಜುಕಿ ಆಲ್ಟೋ ಕೆ10 ಸಿಎನ್ಜಿ ವರ್ಷನ್ ಬಿಡುಗಡೆ
ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಕಾರು ಆಲ್ಟೋ ಕೆ10 ಮಾದರಿಯಲ್ಲಿ ಸಿಎನ್ ಜಿ ವರ್ಷನ್ ಬಿಡುಗಡೆ ಮಾಡಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ.5.49 ಲಕ್ಷ ಬೆಲೆ ಹೊಂದಿದೆ.
ಸಿಎನ್ ಜಿ ಕಾರುಗಳ(CNG Cars) ಮಾರಾಟದಲ್ಲಿ ಮಾರುತಿ ಸುಜುಕಿ(Maruti Suzuki) ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಮಾರುಕಟ್ಟೆಯಲ್ಲಿರುವ ತನ್ನ ಬಹತೇಕ ಕಾರು ಮಾದರಿಗಳಲ್ಲಿ ಸಿಎನ್ ಜಿ ವರ್ಷನ್ ಬಿಡುಗಡೆ ಮಾಡುತ್ತಿದ್ದು, ಇದೀಗ ಹೊಸದಾಗಿ ಆಲ್ಟೋ ಕೆ10(Alto K10) ಮಾದರಿಯಲ್ಲಿ ಹೊಸ ವರ್ಷನ್ ಪರಿಚಯಿಸಿದೆ. ಹೊಸ ಕಾರು ಮಾದರಿಯು ಹ್ಯಾಚ್ ಬ್ಯಾಕ್ ವಿಭಾಗದಲ್ಲಿಯೇ ಅತಿ ಹೆಚ್ಚು ಮೈಲೇಜ್ ಹೊಂದಿದ್ದು, ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಆಲ್ಟೊ ಕೆ10 ಸಿಎನ್ ಜಿ ಮಾದರಿಯು ಸಾಮಾನ್ಯ ಪೆಟ್ರೋಲ್ ಮಾದರಿಯ ವಿಎಕ್ಸ್ಐ ವೆರಿಯೆಂಟ್ ಆಧರಿಸಿ ಬಿಡುಗಡೆಯಾಗಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ.5.49 ಲಕ್ಷ ಬೆಲೆ ಹೊಂದಿದೆ. ಮಾರುತಿ ಸುಜುಕಿ ಕಂಪನಿಯು ಭಾರತದಲ್ಲಿ ಮಾರಾಟ ಮಾಡುತ್ತಿರುವ 13ನೇ ಸಿಎನ್ ಜಿ ಕಾರು ಇದಾಗಿದ್ದು, ಇದು ಫ್ಯಾಕ್ಟರಿ ಫಿಟೆಡ್ ಸಿಎನ್ ಜಿ ಕಿಟ್ ಹೊಂದಿರಲಿದೆ.