ಕೊಪ್ಪಳದ ತುಂಗಭದ್ರಾ ಜಲಾಶಯ ಹಿನ್ನೀರಿನಲ್ಲಿ ಭಾರಿ ಗಾತ್ರದ ಮೀನು ಸ್ಥಳೀಯರ ಫೋನ್​ಗಳಲ್ಲಿ ಸೆರೆಯಾಯಿತು

ಶನಿವಾರ ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಒಂದು ಭಾರಿ ಗಾತ್ರದ ಮೀನು ಕಾಣಿಸಿದೆ ಮತ್ತು ಸ್ಥಳೀಯರು ಅದನ್ನು ತಮ್ಮ ಫೋನ್ ಗಳಲ್ಲಿ ಸೆರೆ ಹಿಡಿಯುವಲ್ಲಿ ಯಶ ಕಂಡಿದ್ದಾರೆ.

TV9kannada Web Team

| Edited By: Arun Belly

May 21, 2022 | 4:04 PM

Koppal: ಜಲಾಶಯಗಳಲ್ಲಿ (reservoirs) ಮೀನುಗಳು ಸಾಕಷ್ಟು ಸಂಖ್ಯೆಯಲ್ಲಿ ಇರುತ್ತವೆ, ಅದರಲ್ಲಿ ವಿಶೇಷವೇನೂ ಇಲ್ಲ. ಆದರೆ ಸಾಮಾನ್ಯವಾಗಿ ದೊಡ್ಡಗಾತ್ರದ ಮೀನುಗಳು ಮೀನುಗಳು ರಿಜರ್ವಾಯರ್ ಗಳಲ್ಲಿ ಕಾಣಿಸೋದು ಅಪರೂಪ. ಒಂದುಪಕ್ಷ ದೊಡ್ಡ ಅಂದರೆ ಬೃಹತ್ ಗಾತ್ರದ ಮೀನುಗಳು ಕಂಡರೆ ಅದು ದೊಡ್ಡ ಸುದ್ದಿಯಾಗೋದಂತೂ ಸತ್ಯ. ಈಗ ಆಗಿರೋದು ಅದೇ. ಶನಿವಾರ ತುಂಗಭದ್ರಾ (Tungabhadra) ಹಿನ್ನೀರು (backwaters) ಪ್ರದೇಶದಲ್ಲಿ ಒಂದು ಭಾರಿ ಗಾತ್ರದ ಮೀನು ಕಾಣಿಸಿದೆ ಮತ್ತು ಸ್ಥಳೀಯರು ಅದನ್ನು ತಮ್ಮ ಫೋನ್ ಗಳಲ್ಲಿ ಸೆರೆ ಹಿಡಿಯುವಲ್ಲಿ ಯಶ ಕಂಡಿದ್ದಾರೆ. ನೀವದನ್ನು ಈ ವಿಡಿಯೋನಲ್ಲಿ ನೋಡಬಹುದು. ಮೀನು ಎಷ್ಟು ದೊಡ್ಡದಾಗಿದೆಯೆಂದರೆ ನೋಡಲು ತಿಮಿಂಗಲದ ಮರಿಯ ಹಾಗೆ ಕಾಣುತ್ತದೆ.

ತಿಮಿಂಗಲ ಬಿಡಿ, ಅದು ಸೃಷ್ಟಿಯ ಅತಿ ದೊಡ್ಡ ಪ್ರಾಣಿ ಅನಿಸಿಕೊಳ್ಳುತ್ತದೆ. ಮೀನು ಎಷ್ಟೇ ದೊಡ್ಡದಾಗಿದ್ದರೂ ಅದನ್ನು ದೈತ್ಯ ಪ್ರಾಣಿಗೆ ಹೋಲಿಸಲಾಗಿಲ್ಲ. ಆದರೆ ತಿಮಿಂಗಲ ಪದವನ್ನು ನಾವಿಲ್ಲಿ ಮೆಟಾಫರ್ ರೂಪದಲ್ಲಿ ಬಳಸುತ್ತಿದ್ದೇವೆ. ಅಂದಹಾಗೆ ಜಂಬೋ ಮೀನು ಕಾಣಿಸಿರೋದು ಕೊಪ್ಪಳ ತಾಲ್ಲೂಕಿನ ತಿಗರಿ ಹೆಸರಿನ ಗ್ರಾಮದ ಬಳಿ.

ದೊಡ್ಡ ಗಾತ್ರದ ಮೀನುಗಳು ಈ ಜಲಾಶಯದಲ್ಲಿ ಇದಕ್ಕೂ ಮೊದಲು ಸಹ ಸಿಕ್ಕಿವೆ ಮತ್ತು ಇಲ್ಲಿನ ಮೀನುಗಾರರು ಅವುಗಳನ್ನು ಹಿಡಿದು ಔತಣವೇರ್ಪಡಿಸಿ ತಿಂದಿದ್ದಾರೆ. ಸ್ಟಿಲ್ ಚಿತ್ರಗಳಲ್ಲಿ ನೀವು ಮೀನುಗಾರ ಸಮುದಾಯದವರು ದೊಡ್ಡ ಮೀನುಗಳನ್ನು ಕೈಯಲ್ಲಿ ಹಿಡಿದಿರುವುದನ್ನು ನೋಡಬಹುದು. ಆದರೆ ಜಲಾಶಯದಲ್ಲಿ ಕಂಡ ಮೀನು ಇದಕ್ಕಿಂತ 3-4 ಪಟ್ಟು ದೊಡ್ಡದಿದೆ ಅನ್ನೋದರಲ್ಲಿ ಅನುಮಾನವಿಲ್ಲ.

ಅಂದಹಾಗೆ, ಮೀನಿನ ಈ ವಿಡಿಯೋ ವೈರಲ್ ಆಗಿದೆ

ಇದನ್ನೂ ಓದಿ:   ಮಸ್ಕಿ ನಾಲಾ ಜಲಾಶಯ ಭರ್ತಿ; 150 ಕ್ಯುಸೆಕ್ಸ್ ನೀರು ಹರಿಬಿಟ್ಟ ನಂತರ ಜಲಾನಯನ ಪ್ರದೇಶದಲ್ಲಿ ಪ್ರವಾಹದ ಭೀತಿ

Follow us on

Click on your DTH Provider to Add TV9 Kannada