ನೆಲಮಂಗಲ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕಿಲೋಮೀಟರ್​ಗಟ್ಟಲೆ ಟ್ರಾಫಿಕ್ ಜಾಮ್, ಪೊಲೀಸರು ನಾಪತ್ತೆ!

|

Updated on: May 21, 2024 | 6:02 PM

ಮುಂದೆ ಎಲ್ಲೋ ನಡುರಸ್ತೆಯಲ್ಲಿ ಲಾರಿಯೊಂದು ಕೆಟ್ಟು ನಿಂತಿರುವ ಕಾರಣ ಹೆದ್ದಾರಿಯ ನೆಲಮಂಗಲ ಭಾಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಹಾಗಾದರೆ, ಪೊಲೀಸು ಏನು ಮಾಡುತ್ತಿದ್ದಾರೆ ಅನ್ನೋದು ನಿಮ್ಮ ಪ್ರಶ್ನೆಯಾಗಿರಬಹುದು. ನಮ್ಮ ವರದಿಗಾರ ಕೆಟ್ಟು ನಿಂತಿರುವ ಲಾರಿಯ ಜೊತೆ ಸಂಚಾರಿ ಪೊಲೀಸರನ್ನೂ ಹುಡುಕಿದ್ದಾರೆ. ಲಾರಿಯ ಹಾಗೆ ಅವರೂ ಸಿಕ್ಕಿಲ್ಲ!

ನೆಲಮಂಗಲ: ಇಲ್ಲಿಂದ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ (National Highway 75) ಸಂಚರಿಸುತ್ತಿರುವ ವಾಹನ ಸವಾರರು (motorists) ಯಾಕಾದರೂ ಈ ರಸ್ತೆಗೆ ಬಂದೆವೋ ಅಂತ ತಮ್ಮನ್ನು ತಾವು ಶಪಿಸಿಕೊಳ್ಳುತ್ತಿರಬಹುದು ಮಾರಾಯ್ರೇ. ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ (traffic jam) ಆಗಿತ್ತು ಅಂತ ಹೇಳೋದನ್ನು ಬರೀ ಕೇಳಿಸಿಕೊಂಡಿದ್ದ ನತದೃಷ್ಟರಿಗೆ ಇವತ್ತು ಅದನ್ನು ನೋಡುವ ಭಾಗ್ಯ! ಇಲ್ನೋಡಿ ನಮ್ಮ ವರದಿಗಾರ ಕೆಮೆರಾ ಆನ್ ಮಾಡಿಕೊಂಡು ಮುಂದೆ ಸಾಗುತ್ತಲೇ ಇದ್ದಾರೆ, ಆದರೆ ಜಾಮ್ ಆಗಿರುವುದಕ್ಕೆ ಕಾರಣವಾಗಿರುವ ಸ್ಥಳ ತಲುಪಲ್ಲ! ಇದನ್ನೇ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಅನ್ನೋದು. ಮುಂದೆ ಎಲ್ಲೋ ನಡುರಸ್ತೆಯಲ್ಲಿ ಲಾರಿಯೊಂದು ಕೆಟ್ಟು ನಿಂತಿರುವ ಕಾರಣ ಹೆದ್ದಾರಿಯ ನೆಲಮಂಗಲ ಭಾಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಹಾಗಾದರೆ, ಪೊಲೀಸು ಏನು ಮಾಡುತ್ತಿದ್ದಾರೆ ಅನ್ನೋದು ನಿಮ್ಮ ಪ್ರಶ್ನೆಯಾಗಿರಬಹುದು. ನಮ್ಮ ವರದಿಗಾರ ಕೆಟ್ಟು ನಿಂತಿರುವ ಲಾರಿಯ ಜೊತೆ ಸಂಚಾರಿ ಪೊಲೀಸರನ್ನೂ ಹುಡುಕಿದ್ದಾರೆ. ಲಾರಿಯ ಹಾಗೆ ಅವರೂ ಸಿಕ್ಕಿಲ್ಲ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಮೂರು ದಿನಗಳ ರಜೆ, ತಮ್ಮೂರುಗಳಿಗೆ ಹೊರಟ ಜನರು; ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಫುಲ್​ ಟ್ರಾಫಿಕ್​​ ಜಾಮ್​​