ನನ್ನ ಕಣ್ಣೆದುರೇ ನಂದೀಶ್ ಸುತ್ತಿಗೆಯಿಂದ ವಿದ್ಯಾ ತಲೆಗೆ ಬಲವಾಗಿ ಹೊಡೆದು ಸಾಯಿಸಿದ: ವಿದ್ಯಾ ಆಪ್ತೆ ಮತ್ತು ಪ್ರತ್ಯಕ್ಷದರ್ಶಿ

ನನ್ನ ಕಣ್ಣೆದುರೇ ನಂದೀಶ್ ಸುತ್ತಿಗೆಯಿಂದ ವಿದ್ಯಾ ತಲೆಗೆ ಬಲವಾಗಿ ಹೊಡೆದು ಸಾಯಿಸಿದ: ವಿದ್ಯಾ ಆಪ್ತೆ ಮತ್ತು ಪ್ರತ್ಯಕ್ಷದರ್ಶಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 21, 2024 | 7:34 PM

ಅವರು ಹೇಳುವ ಪ್ರಕಾರ ಗಂಡ ಹೆಂಡತಿ ನಡುವೆ ಬಹಳ ದಿನಗಳಿಂದ ಮನಸ್ತಾಪವಿತ್ತು ಮತ್ತು ವಿದ್ಯಾ ಕೊಲೆ ಪೂರ್ವನಿಯೋಜಿತವಾಗಿತ್ತು. ಕಾರಲ್ಲಿ ಊರು ತಲುಪಿ ಮನೆ ಸೇರಿದ ಕೂಡಲೇ ನಂದೀಶ್ ವಿದ್ಯಾರನ್ನು ಕೊಲೆ ಮಾಡಿದ್ದಾನೆ ಮತ್ತು ಅವನು ವಿದ್ಯಾರನ್ನು ರೂಮೊಂದರಲ್ಲಿ ಕೂದಲು ಹಿಡಿದು ಎಳೆದೊಯ್ಯುವರೆಗಿನ ದೃಶ್ಯವನ್ನು ಮಹಿಳೆ ಮೊಬೈಲ್ ಫೋನೊಂದರಲ್ಲಿ ರೆಕಾರ್ಡ್ ಮಾಡಿದ್ದಾರೆ, ಅ ಫೋನ್ ಈಗ ಪೊಲೀಸರ ವಶದಲ್ಲಿದೆಯಂತೆ.

ಮೈಸೂರು: ಮಾಧ್ಯಮಗಳಿಗೆ ಚಿತ್ರನಟಿ ವಿದ್ಯಾ (actor Vidya) ಕೊಲೆಯ ಬಗ್ಗೆ ವಿವರಣೆ ನೀಡುತ್ತಿರುವ ಈ ಮಹಿಳೆ ಹತ್ಯೆಯನ್ನು ಕಣ್ಣಾರೆ ನೋಡಿದ್ದಾಗಿ ಹೇಳುತ್ತಾರೆ. ರಾತ್ರಿ ಸುಮಾರು ಹನ್ನೊಂದು ಗಂಟೆಗೆ ವಿದ್ಯಾರ ಪತಿ ನಂದೀಶ್ (Nandish) ಆಕೆಯ ತಲೆಗೆ ಸುತ್ತಿಗೆಯಿಂದ (hammer) ಹೊಡೆದು ಕೊಲೆ ಮಾಡಿದನೆಂದು ಅವರು ಹೇಳುತ್ತಾರೆ. ಅಸಲಿಗೆ ಈ ಮಹಿಳೆ ಸಹ ವಿದ್ಯಾ ಜೊತೆ ಅದೇ ವಾಹನದಲ್ಲಿ ಟೀ ನರಸಸೀಪುರ ತಾಲ್ಲೂಕಿನ ತುರಗಾನೂರು ಗ್ರಾಮಕ್ಕೆ ಹೋಗಿದ್ದರಂತೆ. ಅವರು ಹೇಳುವ ಪ್ರಕಾರ ಗಂಡ ಹೆಂಡತಿ ನಡುವೆ ಬಹಳ ದಿನಗಳಿಂದ ಮನಸ್ತಾಪವಿತ್ತು ಮತ್ತು ವಿದ್ಯಾ ಕೊಲೆ ಪೂರ್ವನಿಯೋಜಿತವಾಗಿತ್ತು. ಕಾರಲ್ಲಿ ಊರು ತಲುಪಿ ಮನೆ ಸೇರಿದ ಕೂಡಲೇ ನಂದೀಶ್ ವಿದ್ಯಾರನ್ನು ಕೊಲೆ ಮಾಡಿದ್ದಾನೆ ಮತ್ತು ಅವನು ವಿದ್ಯಾರನ್ನು ರೂಮೊಂದರಲ್ಲಿ ಕೂದಲು ಹಿಡಿದು ಎಳೆದೊಯ್ಯುವರೆಗಿನ ದೃಶ್ಯವನ್ನು ಮಹಿಳೆ ಮೊಬೈಲ್ ಫೋನೊಂದರಲ್ಲಿ ರೆಕಾರ್ಡ್ ಮಾಡಿದ್ದಾರೆ, ಅ ಫೋನ್ ಈಗ ಪೊಲೀಸರ ವಶದಲ್ಲಿದೆಯಂತೆ. ಕೊಲೆಯಲ್ಲಿ ನಂದೀಶ್ ಮತ್ತು ಅವನ ತಾಯಿಯ ಪಾತ್ರವಿದೆ, ಅವನ ತಂದೆ ಒಬ್ಬ ಮೂಕ ಪ್ರೇಕ್ಷಕರಾಗಿದ್ದರಂತೆ. ತನ್ನ ಕಣ್ಣೆದುರೇ ನಂದೀಶ್ ಸುತ್ತಿಗೆಯಿಂದ ವಿದ್ಯಾ ತಲೆಗೆ ಹೊಡೆದು ಕೊಂದ ಎಂದು ಅವರು ಹೇಳುತ್ತಾರೆ. ವಿದ್ಯಾ ಕೊಲೆ ಪ್ರಕರಣದಲ್ಲಿ ಈ ಮಹಿಳೆ ಹೇಳಿಕೆ ಮಹತ್ವದ ಸಾಕ್ಷಿಯಾಗಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Actress Vidya: ಪತಿಯಿಂದಲೇ ಕೊಲೆಯಾದ ‘ಭಜರಂಗಿ’ ನಟಿ ವಿದ್ಯಾ ನಂದೀಶ್, ಗಂಡ ಪರಾರಿ