ಬಿಪಿ ಚೆಕ್ ಮಾಡಿದ ವೈದ್ಯ ನಾರ್ಮಲ್ ಆಗಿದೆ ಎಂದಾಗ ಡಿಕೆ ಶಿವಕುಮಾರ್ ಮುಗುಳ್ನಗೆ ಬೀರಿದರು!

ಬಿಪಿ ಚೆಕ್ ಮಾಡಿದ ವೈದ್ಯ ನಾರ್ಮಲ್ ಆಗಿದೆ ಎಂದಾಗ ಡಿಕೆ ಶಿವಕುಮಾರ್ ಮುಗುಳ್ನಗೆ ಬೀರಿದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: May 21, 2024 | 5:24 PM

ರಾಜ್ಯದಲ್ಲಿ ಚುನಾವಣೆ ಮುಗಿದ ಮೇಲೆ ಪ್ರಜ್ವಲ್ ರೇವಣ್ಣ ಪ್ರಕರಣ ಬೆಳಕಿಗೆ ಬಂತು. ಅದು ಬಂದಾದ ಮೇಲೆ ಹೆಚ್ ಡಿ ಕುಮಾರಸ್ವಾಮಿ ಪ್ರತಿದಿನ ಶಿವಕುಮಾರ್ ಮೇಲೆ ವಾಗ್ದಾಳಿ ನಡೆಸಿದರು. ಹಾಗಾಗಿ ಶಿವಕುಮಾರ್ ರಕ್ತದೊತ್ತಡದಲ್ಲಿ ಏರುಪೇರಾಗಿದ್ದರೆ ಆಶ್ಚರ್ಯಪಡುವಂಥದ್ದೇನೂ ಇಲ್ಲ. ಅವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಸಂಗತಿಯನ್ನು ನಾವು ಈ ಮೊದಲು ವರದಿ ಮಾಡಿದ್ದೇವೆ.

ಬೆಂಗಳೂರು: ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಇವತ್ತು ಆರೋಗ್ಯ ತಪಾಸಣೆ ಶಿಬಿರ (health camp) ಏರ್ಪಡಿಸಲಾಗಿತ್ತೇ? ನಮ್ಮಲ್ಲಿ ಅಂಥದೊಂದು ಸಂಶಯ ಹುಟ್ಟೋದಿಕ್ಕೆ ಕಾರಣವಿದೆ. ಇವತ್ತು ಕೆಪಿಸಿಸಿ ಕಚೇರಿಯಲ್ಲಿ ಡಿಕೆ ಶಿವಕುಮಾರ್ (DK Shivakumar) ಕಾರ್ಯಕರ್ತರ ಸಭೆ ನಡೆಸಿದರು. ನಂತರ ಪತ್ರಿಕಾ ಗೋಷ್ಠಿಯನ್ನೂ ನಡೆಸಿ ಮಾತಾಡಿದರು. ಅದರೆ ಇದೆಲ್ಲ ಮಾಡುವ ಮೊದಲು ಅವರು ಬೇರೆ ಕೆಲಸವೊಂದು ಮಾಡಿದ್ದು ತಡವಾಗಿ ಗೊತ್ತಾಗಿದೆ. ಅವರೇನು ಮಾಡಿದ್ದರು ಅಂತ ನೀವೇ ಗಮನಿಸಿ. ಹೌದು, ಶಿವಕುಮಾರ್ ತಮ್ಮ ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಂಡರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅವರು ಪ್ರಾಯಶಃ ತಮ್ಮ ಆರೋಗ್ಯದ ಕಡೆ ಗಮನ ನೀಡಿರಲಿಲ್ಲ ಅನಿಸುತ್ತೆ. ಎಲ್ಲ ರಾಜಕಾರಣಿಗಳು ಬ್ಯೂಸಿಯಾಗಿದ್ದರು ಅನ್ನೋದು ಬೇರೆ ವಿಚಾರ. ರಾಜ್ಯದಲ್ಲಿ ಚುನಾವಣೆ ಮುಗಿದ ಮೇಲೆ ಪ್ರಜ್ವಲ್ ರೇವಣ್ಣ ಪ್ರಕರಣ ಬೆಳಕಿಗೆ ಬಂತು. ಅದು ಬಂದಾದ ಮೇಲೆ ಹೆಚ್ ಡಿ ಕುಮಾರಸ್ವಾಮಿ ಪ್ರತಿದಿನ ಶಿವಕುಮಾರ್ ಮೇಲೆ ವಾಗ್ದಾಳಿ ನಡೆಸಿದರು. ಹಾಗಾಗಿ ಶಿವಕುಮಾರ್ ರಕ್ತದೊತ್ತಡದಲ್ಲಿ ಏರುಪೇರಾಗಿದ್ದರೆ ಆಶ್ಚರ್ಯಪಡುವಂಥದ್ದೇನೂ ಇಲ್ಲ. ಅವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಸಂಗತಿಯನ್ನು ನಾವು ಈ ಮೊದಲು ವರದಿ ಮಾಡಿದ್ದೇವೆ. ಅದರೆ ಇಂದು ಅವರ ಬಿಪಿ ಚೆಕ್ ಮಾಡಿದ ವೈದ್ಯರೊಬ್ಬರು ನಾರ್ಮಲ್ ಆಗಿದೆ ಎಂದು ಹೇಳಿದರು. ಕಚೇರಿಯಲ್ಲಿ ಬೇರೆ ಕಾರ್ಯಕರ್ತರು ಸಹ ತಮ್ಮ ಬಿಪಿ ಚೆಕ್ ಮಾಡಿಸಿಕೊಳ್ಳುತ್ತಿರುವುದನ್ನು ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಅಶ್ಲೀಲ ವಿಡಿಯೋಗಳ ಪ್ರಕರಣ; ತಪ್ಪಿತಸ್ಥನಾಗಿರುವ ಡಿಕೆ ಶಿವಕುಮಾರ್ ರನ್ನು ಸಂಪುಟದಿಂದ ವಜಾ ಮಾಡಬೇಕು: ಜಿಟಿ ದೇವೇಗೌಡ