Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮತ್ತೆ ಮದುವೆ’ ಚಿತ್ರಕ್ಕೆ ತಾವೇ ಡಬ್ ಮಾಡಿದ ನರೇಶ್; ಕಾರಣ ತಿಳಿಸಿದ ಹೀರೋ

‘ಮತ್ತೆ ಮದುವೆ’ ಚಿತ್ರಕ್ಕೆ ತಾವೇ ಡಬ್ ಮಾಡಿದ ನರೇಶ್; ಕಾರಣ ತಿಳಿಸಿದ ಹೀರೋ

ರಾಜೇಶ್ ದುಗ್ಗುಮನೆ
|

Updated on:May 19, 2023 | 7:45 AM

ಪವಿತ್ರಾ ಲೋಕೇಶ್ ಹಾಗೂ ನರೇಶ್ ಜೀವನದ ವಿಚಾರಗಳನ್ನೇ ‘ಮತ್ತೆ ಮದುವೆ’ ಸಿನಿಮಾದಲ್ಲಿ ಹೇಳಲಾಗಿದೆಯೇ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಈ ಚಿತ್ರಕ್ಕೆ ನರೇಶ್ ಅವರೇ ಡಬ್ ಮಾಡಿದ್ದಾರೆ.

‘ಮತ್ತೆ ಮದುವೆ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನೀರಿಕ್ಷೆ ಇಟ್ಟುಕೊಂಡಿದ್ದಾರೆ. ಪವಿತ್ರಾ ಲೋಕೇಶ್ (Pavitra Lokesh) ಹಾಗೂ ನರೇಶ್ ಜೀವನದ ವಿಚಾರಗಳನ್ನೇ ಸಿನಿಮಾದಲ್ಲಿ ಹೇಳಲಾಗಿದೆಯೇ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಈ ಚಿತ್ರಕ್ಕೆ ನರೇಶ್ (Naresh) ಅವರೇ ಡಬ್ ಮಾಡಿದ್ದಾರೆ. ‘ಈ ಸಿನಿಮಾದಲ್ಲಿ ನಾನು ಮಾಡಿದ ಪಾತ್ರ ಹಾಗಿದೆ. ಸಿನಿಮಾದಲ್ಲೂ ನಾನು ಪರಭಾಷೆಯವನು. ಬೇರೆ ಭಾಷೆಯವರು ಎಂದಾಗ ಪರ್ಫೆಕ್ಟ್ ಕನ್ನಡ ಬರಲ್ಲ. ನನಗೂ ಅಷ್ಟೇ ಸ್ವಲ್ಪ ಸ್ವಲ್ಪ ಕನ್ನಡ ಬರುತ್ತದೆ. ಪಾತ್ರಕ್ಕೆ ಹೊಂದುತ್ತದೆ ಎನ್ನುವ ಕಾರಣಕ್ಕೆ ನಾನೇ ಡಬ್ ಮಾಡಿದೆ’ ಎಂದಿದ್ದಾರೆ ನರೇಶ್. ಏಪ್ರಿಲ್ 26ರಂದು ‘ಮತ್ತೆ ಮದುವೆ’ ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: May 19, 2023 07:45 AM