AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

DKS on missing CM post; ಮುಖ್ಯಮಂತ್ರಿಯಾಗುವ ಅವಕಾಶ ಈಗ ತಪ್ಪಿರಬಹುದು ಆದರೆ ಮುಂದೆ ಸಿಕ್ಕೇ ಸಿಗುತ್ತೆ, ತಾಳ್ಮೆಯಿಂದಿರಬೇಕು: ಡಿಕೆ ಶಿವಕುಮಾರ್

DKS on missing CM post; ಮುಖ್ಯಮಂತ್ರಿಯಾಗುವ ಅವಕಾಶ ಈಗ ತಪ್ಪಿರಬಹುದು ಆದರೆ ಮುಂದೆ ಸಿಕ್ಕೇ ಸಿಗುತ್ತೆ, ತಾಳ್ಮೆಯಿಂದಿರಬೇಕು: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 03, 2023 | 3:04 PM

Share

ತಮ್ಮನ್ನು ವಿಧಾನ ಸಭೆಗೆ ಅರಿಸಿ ಕಳಿಸಿದ ಜನರಿಗೆ ಕೃತಜ್ಞತೆ ಸಲ್ಲಿಸಲು ಅವರು ಕ್ಷೇತ್ರದಲ್ಲಿ ಸುತ್ತುತ್ತಿದ್ದಾರೆ.

ರಾಮನಗರ: ಮುಖ್ಯಮಂತ್ರಿಯಾಗದ ಕೊರಗು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಈಗಲೂ ಕಾಡುತ್ತಿದೆ ಮತ್ತು ಅವರ ಆಸೆ ಈಡೇರುವವರೆಗೆ ಅದು ಕಾಡುತ್ತಿರುತ್ತದೆ. ಉಪ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿ ತಮ್ಮ ಕ್ಷೇತ್ರಕ್ಕೆ ಆಗಮಿಸಿದ ಅವರು ತಮ್ಮನ್ನು ಪ್ರಚಂಡ ಬಹುಮತದೊಂದಿಗೆ ಗೆಲ್ಲಿಸಿದ ಜನಕ್ಕೆ ಅದನ್ನೇ ಹೇಳಿದರು. ಮುಖ್ಯಮಂತ್ರಿಯಾಗಲೆಂಬ ಉದ್ದೇಶದಿಂದ ಜನ ತನಗೆ ಭರ್ಜರಿ ಗೆಲುವು ಕೊಡಿಸಿದರು, ಆದರೆ ಸ್ಥಾನ ಸಿಗಲಿಲ್ಲ. ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಸೋನಿಯಾ ಗಾಂಧಿ (Sonia Gandhi) ಮತ್ತು ರಾಹುಲ್ ಗಾಂಧಿಯವರ (Rahul Gandhi) ಮಾತಿಗೆ ತಲೆಬಾಗಬೇಕಾಯಿತು ಎಂದ ಶಿವಕುಮಾರ್, ಮುಂದೆ ಅವಕಾಶ ಸಿಕ್ಕೇ ಸಿಗುತ್ತದೆ ಅಲ್ಲಿಯವರೆಗೆ ತಾವೆಲ್ಲ ತಾಳ್ಮೆಯಿಂದ ಕಾಯಬೇಕು ಎಂದರು. ತಮ್ಮನ್ನು ವಿಧಾನ ಸಭೆಗೆ ಅರಿಸಿ ಕಳಿಸಿದ ಜನರಿಗೆ ಕೃತಜ್ಞತೆ ಸಲ್ಲಿಸಲು ಅವರು ಕ್ಷೇತ್ರದಲ್ಲಿ ಸುತ್ತುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ