Mandya: ಯುವತಿಯೊಬ್ಬಳಿಂದ ಕಾಮಣ್ಣನಿಗೆ ಬಸ್ನಲ್ಲೇ ಚಪ್ಪಲಿ ಸೇವೆ, ಕೊಸರಿಕೊಳ್ಳಲು ಪ್ರಯತ್ನಿಸಿದಂತೆಲ್ಲ ಬಿದ್ದವು ಏಟು!
ಮನೆ ತಲುಪಿದ ಮೇಲೆ ಅವನಿಗೆ ತನ್ನಮ್ಮನ ಮುಖ ನೋಡಲೂ ಧೈರ್ಯ ಸಾಕಾಗಿರುವುದಿಲ್ಲ.
ಮಂಡ್ಯ: ಬೀದಿ ಕಾಮಣ್ಣರ (road Romeo) ಬಗ್ಗೆ ನೀವು ಕೇಳಿರುತ್ತೀರಿ ಅದರೆ ಬಸ್ ಕಾಮಣ್ಣರ ಬಗ್ಗೆ ಪ್ರಾಯಶ: ಕೇಳಿರಲಾರಿರಿ. ಅಂಥವನೊಬ್ಬನನ್ನು ಈ ವಿಡಿಯೋದ ಮೂಲಕ ನಿಮಗೆ ಪರಿಚಯಿಸುವಾಗ ಅವನನ್ನು ಬಸ್ಸಲ್ಲಿ ಚೆನ್ನಾಗಿ ಥಳಿಸಿದ ಯುವತಿಯ ಬಗ್ಗೆ ಹೆಮ್ಮೆಯೆನಿಸುತ್ತಿದೆ. ಅಸಲಿಗೆ ನಡೆದಿದ್ದೇನು ಅಂತ ನಿಮಗೆ ಮೊದಲು ಹೇಳ್ತೀವಿ. ಯುವತಿ ಪ್ರಾಯಶಃ ಕಾಲೇಜು ವಿದ್ಯಾರ್ಥಿನಿಯಿರಬಹುದು (college student) ಅನಿಸುತ್ತೆ; ಕೆಎಸ್ಆರ್ ಟಿಸಿ ಬಸ್ಸಲ್ಲಿ ಮಂಡ್ಯದಿಂದ (Mandya) ಪಾಂಡವಪುರಕ್ಕೆ (Panadavapura) ಹೋಗುವಾಗ ಖಾಲಿಯಿದ್ದ ಆಕೆಯ ಹಿಂಬದಿ ಸೀಟಲ್ಲಿ ಯುವಕ ಹೋಗಿ ಕೂತಿದ್ದಾನೆ. ಬರೀ ಕೂತಿದ್ದರೆ ಇದನ್ನೆಲ್ಲ ಬರೆಯುವ ಪ್ರಮೇಯ ಉದ್ಭವಿಸುತ್ತರಲಿಲ್ಲ. ಲಂಪಟ ಯುವಕ ಆಕೆಯನ್ನು ಅಸಭ್ಯವಾಗಿ ಮುಟ್ಟಲಾರಂಭಿಸಿದ್ದಾನೆ. ಅವನ ಚೇಷ್ಟೆಯಿಂದ ಕೆರಳಿದ ಯುವತಿ ಸೀಟಿಂದ ಎದ್ದು ಚಪ್ಪಲಿಯಿಂದ ಬಾರಿಸಲಾರಂಭಿಸಿದ್ದಾಳೆ! ಅವನು ಕೊಸರಿಕೊಳ್ಳಲು ಪ್ರಯತ್ನಿಸಿದರೂ ಬಿಡದ ಯುವತಿ ಚೆನ್ನಾಗಿ ತದುಕಿದ್ದಾಳೆ. ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಚಪ್ಪಲಿ ಸೇವೆಯನ್ನು ಮೊಬೈಲ್ ನಲ್ಲಿ ಚಿತ್ರಿಸಿಕೊಂಡಿದ್ದಾರೆ. ಯುವತಿಯಿಂದ ಕಷ್ಟಪಟ್ಟು ತಪ್ಪಿಸಿಕೊಳ್ಳುವ ಕಾಮುಕನನ್ನು ಬಸ್ ನಿಲ್ದಾಣದಲ್ಲಿದ್ದ ಒಂದಿಬ್ಬರು ಹಿಡಿದು ಏನಾಯಿತು ಅಂತ ಯುವತಿಯನ್ನು ಕೇಳುತ್ತಿರುವಂತೆಯೇ ಕೊಸರಿಕೊಳ್ಳುವಲ್ಲಿ ಸಫಲನಾಗಿ ಅಲ್ಲಿಂದ ಓಡಿಬಿಡುತ್ತಾನೆ! ಮನೆ ತಲುಪಿದ ಮೇಲೆ ಅವನಿಗೆ ತನ್ನಮ್ಮನ ಮುಖ ನೋಡಲೂ ಧೈರ್ಯ ಸಾಕಾಗಿರುವುದಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ