MP makes absurd statements on 5 guarantees: ಪ್ರತಾಪ್ ಸಿಂಹ ತನ್ನ ಹಿರಿಯ ನಾಯಕರಿಂದ ಕಲಿಯಬೇಕಿರುವುದು ಬಹಳಷ್ಟಿದೆ!
ಇಬ್ಬರು-ಮೂವರು ಪತ್ನಿಯರನ್ನು ಹೊಂದಿರುವ ಎಷ್ಟು ಮುಸಲ್ಮಾನರನ್ನು ಪ್ರತಾಪ್ ನೋಡಿದ್ದಾರೆ?
ಮೈಸೂರು: ಸಿದ್ದರಾಮಯ್ಯ ಸಾಹೇಬ್ರು ಮತ್ತು ಡಿಕೆ ಶಿವಕುಮಾರಣ್ಣ ತಿಪ್ಪರಲಾಗ ಹಾಕಿದರರೂ ಜನರಿಗೆ ನೀಡಿದ 5 ಗ್ಯಾರಂಟಿಗಳನ್ನು ಈಡೇರಿಸಲ್ಲ ಅಂತ ಹೇಳುತ್ತಿದ್ದ ಪ್ರತಾಪ್ ಸಿಂಹ (Pratap Simha), ಅವುಗಳ ಜಾರಿ ಕುರಿತು ಸರ್ಕಾರ ಘೋಷಣೆ ಮಾಡುತ್ತಿದ್ದಂತೆಯೇ ಹೊಸ ವರಾತ ಶುರುವಿಟ್ಟುಕೊಂಡಿದ್ದಾರೆ. ಅವರಾಡುವ ಮಾತು ಒಬ್ಬ ಸಂಸದನಿಗೆ ಶೋಭೆ ನೀಡುವಂಥದಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಸರ್ಕಾರದ ಘೋಷಣೆಯನ್ನು ಸ್ವಾಗತಿಸಿದ್ದರೆ ಪ್ರತಾಪ್ ಸಿಂಹ ವಿವೇಚನೆರಹಿತ ಹೇಳಿಕೆ ನೀಡುತ್ತಿದ್ದಾರೆ. ಸೋಲನ್ನು ಸ್ಪೋರ್ಟ್ ಆಗಿ ತೆಗೆದುಕೊಳ್ಳುವವನೇ ನಿಜವಾದ ನಾಯಕ. ಪ್ರತಾಪ್ ಮಾತಾಡುವ ರೀತಿ ಹಾಸ್ಯಾಸ್ಪದವಾಗಿದೆ. ಗೃಹಲಕ್ಷ್ಮಿ ಯೋಜನೆ ಮನೆಗಳಲ್ಲಿ ಅತ್ತೆ-ಸೊಸೆ ನಡುವೆ ಜಗಳ ತಂದಿಡುತ್ತದೆ ಅನ್ನುತ್ತಾರೆ. ಅಲ್ಪಸಂಖ್ಯಾತರನ್ನು ತುಚ್ಛೀಕರಿಸಿ ಮಾತಾಡೋದು ಒಬ್ಬ ಸಂಸದನಿಗೆ ತರವಲ್ಲ. ಇಬ್ಬರು-ಮೂವರು ಪತ್ನಿಯರನ್ನು ಹೊಂದಿರುವ ಎಷ್ಟು ಮುಸಲ್ಮಾನರನ್ನು ಪ್ರತಾಪ್ ನೋಡಿದ್ದಾರೆ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ