DK Shivakumar: ಕನಕಪುರದಲ್ಲಿ ಹಾರದಿಂದ ಸೇಬುಹಣ್ಣನ್ನು ಕಿತ್ತಿ ಜನರತ್ತ ಎಸೆಯುವ ಮೊದಲು ಡಿಕೆ ಶಿವಕುಮಾರ್ ಎರಡು ಬಾರಿ ಕಚ್ಚಿದರು!
ಚುನಾವಣೆ ಮುಗಿದು ರಾಜ್ಯದ ಉಪ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಕನಕಪುರಕ್ಕೆ ಆಗಮಿಸಿದ ತಮ್ಮ ನಾಯಕನನ್ನು ಕಂಡು ಜನ ಸಂಭ್ರಮಿಸಿದರು.
ರಾಮನಗರ: ಕನಕಪುರ ಕ್ಷೇತ್ರದಿಂದ ತಮಗೆ ಅಭೂತಪೂರ್ವ ಗೆಲವು ಕೊಡಿಸಿದ ಜನರಿಗೆ ಕೃತಜ್ಞತೆ ಸಲ್ಲಿಸಲು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಂದು ಕ್ಷೇತ್ರಕ್ಕೆ ಆಗಮಿಸಿದರು. ತಮ್ಮ ನೆಚ್ಚಿನ ನಾಯಕನಿಗೆ ಕ್ರೇನ್ ಮೂಲಕ ಸೇಬುಹಣ್ಣುಗಳ ಹಾರ (garland of apples) ಹಾಕಿ ಸ್ವಾಗತಿಸುವುದು ಈಗ ಹೊಸ ಸಾಮಾನ್ಯ ಅನಿಸಿಬಿಟ್ಟಿದೆ (new normal). ಶಿವಕುಮಾರ್ ಗೆ ದೊರೆತ ಸ್ವಾಗತ ಭಿನ್ನವಾಗಿರಲಿಲ್ಲ. ಆದರೆ ಅಸಾಮಾನ್ಯ ಅನಿಸಿದ್ದೆಂದರೆ, ಶಿವಕುಮಾರ್ ಹಾರದಿಂದ ಒಂದು ಸೇಬಿನ ಹಣ್ಣನ್ನು ಕಿತ್ತಿ ಅದರ ಮೇಲಿನ ಧೂಳನ್ನು ಹೆಗಲ ಮೇಲಿದ್ದ ಅಂಗವಸ್ತ್ರದಿಂದ ಒರೆಸಿ ಅದನ್ನು ಅಭಿಮಾನಿಗಳತ್ತ ಎಸೆಯುವ ಮೊದಲು ಎರಡು ಬಾರಿ ಕಚ್ಚಿ ತಿಂದಿದ್ದು! ಅವರು ಎಸೆದ ಸೇಬನ್ನು ಯಾರಾದರೂ ಕ್ಯಾಚ್ ಮಾಡಿದರೋ ಅಥವಾ ನೆಲಕ್ಕೆ ಬಿತ್ತೋ ಗೊತ್ತಾಗಿಲ್ಲ. ಒಟ್ಟಿನಲ್ಲಿ ಇವತ್ತು ಕನಕಪುರದಲ್ಲಿ ಉತ್ಸವದ ವಾತಾವರಣ ಸೃಷ್ಟಿಯಾಗಿದ್ದು ಮಾತ್ರ ಸತ್ಯ. ಚುನಾವಣೆ ಮುಗಿದು ರಾಜ್ಯದ ಉಪ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಕನಕಪುರಕ್ಕೆ ಆಗಮಿಸಿದ ತಮ್ಮ ನಾಯಕನನ್ನು ಕಂಡು ಜನ ಸಂಭ್ರಮಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ