AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಡಿಗೆ ಮನೆಯಲ್ಲಿರುವವರು ಗೃಹ ಜ್ಯೋತಿ ಯೋಜನೆ ಫಲಾನುಭವಿಗಳಾ? ಜನರ ಗೊಂದಲ ಬಗೆಹರಿಸಿದ ಡಿಸಿಎಂ ಡಿಕೆ ಶಿವಕುಮಾರ್

ಸರ್ಕಾರದ ಗ್ಯಾರಂಟಿಗಳ ಬಗ್ಗೆ ಗೊಂದಲ ಬೇಡ. ಬಾಡಿಗೆ ಮನೆಯಲ್ಲಿ ಇರುವವನು ಬಡವನಲ್ವಾ? ಓನರ್ ಹೆಸರಿನಲ್ಲಿ ಮೀಟರ್ ಇರಬಹುದು. ಬಾಡಿಗೆ ಮನೆ ಇರಲಿ ಸ್ವಂತ ಮನೆ ಇರಲಿ. ನಾವು ಏನು ಹೇಳಿದ್ದೇವೋ ನಮ್ಮ ಮಾತು ಖಚಿತ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಬಾಡಿಗೆ ಮನೆಯಲ್ಲಿರುವವರು ಗೃಹ ಜ್ಯೋತಿ ಯೋಜನೆ ಫಲಾನುಭವಿಗಳಾ? ಜನರ ಗೊಂದಲ ಬಗೆಹರಿಸಿದ ಡಿಸಿಎಂ ಡಿಕೆ ಶಿವಕುಮಾರ್
ಡಿಸಿಎಂ ಡಿ.ಕೆ.ಶಿವಕುಮಾರ್
ಆಯೇಷಾ ಬಾನು
| Updated By: ರಶ್ಮಿ ಕಲ್ಲಕಟ್ಟ|

Updated on:Jun 03, 2023 | 1:18 PM

Share

ಬೆಂಗಳೂರು: ಕಾಂಗ್ರೆಸ್ ಪಕ್ಷ(Congress) ಅಧಿಕಾರಕ್ಕೆ ಬಂದ ದಿನದಿಂದಲೇ ಐದು ಗ್ಯಾರಂಟಿ ಯೋಜನೆಗಳ(Congress Guarantee) ಜಾರಿ ಯಾವಾಗ ಎಂಬ ಚರ್ಚೆ ರಾಜ್ಯಾದ್ಯಂತ ಶುರುವಾಗಿತ್ತು. ಸದ್ಯ ಈಗ ರಾಜ್ಯ ಸರ್ಕಾರ ಯೋಜನೆ ಘೋಷಿಸಿದೆ. ಈ ಯೋಜನೆಯ ಫಲಾನುಭವಿಗಳ ಬಗ್ಗೆ ಇದ್ದ ಅನುಮಾನಗಳನೆಲ್ಲ ಬಗೆಹರಿಸಿದೆ. ಆದ್ರೆ ಮತ್ತೊಂದೆಡೆ ಗೃಹ ಜ್ಯೋತಿ ಯೋಜನೆ ಬಾಡಿಗೆ ಮನೆಯಲ್ಲಿರುವವರಿಗೆ ಯಾವ ರೀತಿ ಅನುಕೂಲ ಆಗುತ್ತೆ ಎಂಬ ಬಗ್ಗೆ ಅನೇಕ ಗೊಂದಲಗಳಿದ್ದವು. ಸದ್ಯ ಈಗ ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದಾರೆ.

ಸರ್ಕಾರದ ಗ್ಯಾರಂಟಿಗಳ ಬಗ್ಗೆ ಗೊಂದಲ ಬೇಡ. ಬಾಡಿಗೆ ಮನೆಯಲ್ಲಿ ಇರುವವನು ಬಡವನಲ್ವಾ? ಓನರ್ ಹೆಸರಿನಲ್ಲಿ ಮೀಟರ್ ಇರಬಹುದು. ಬಾಡಿಗೆ ಮನೆ ಇರಲಿ ಸ್ವಂತ ಮನೆ ಇರಲಿ. ನಾವು ಏನು ಹೇಳಿದ್ದೇವೋ ನಮ್ಮ ಮಾತು ಖಚಿತ. ಉಚಿತ ಅಂತ ಹೇಳಿದ್ದೇವೆ ಉಚಿತಾನೇ. 150 ಯೂನಿಟ್ ಬಳಸುತ್ತಿದ್ದವರು 200 ಯೂನಿಟ್ ಬಳಸ್ತಾರೆ. ಕರೆಂಟ್ ಏಕಾಏಕಿ ಬಳಸೋದು ಹೆಚ್ಚಳ ಆಗಬಾರದು 10% ಹೆಚ್ಚಳ ಕೊಟ್ಟಿದ್ದೇವೆ. ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ನೀಡಿರುವುದು ಬೆಲೆ ಏರಿಕೆ ತಗ್ಗಿಸಲು. ಯಾರಿಗೂ ಆದಾಯ ಜಾಸ್ತಿ ಆಗಿಲ್ಲ ಬೆಲೆ ಏರಿಕೆ ಆಗಿದೆ. ಯಾರಿಗೂ ತೊಂದರೆ ಆಗಬಾರದು.

ಇದನ್ನೂ ಓದಿ: ಡ್ರೋನ್ ಮೂಲಕ ಭೂಮಾಪನ, ಇತರ ವಿನೂತನ ವಿಧಾನಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ಚಿಂತನೆ: ಡಾ ವೀರೇಂದ್ರ ಹೆಗ್ಗಡೆ

ವಿರೋಧ ಪಕ್ಷದವರು ಟೀಕೆ ಮಾಡಲಿ. ಮೊದಲು ಅವರು 15 ಲಕ್ಷ ನಮ್ಮ ಅಕೌಂಟ್ ಗೆ ಹಾಕಿಸಲಿ. ಕಪ್ಪು ಹಣ ತರಲಿ ಎರಡು ಕೋಟಿ ಉದ್ಯೋಗ ಕೊಡಲಿ. ಆದಾಯ ಡಬಲ್ ಮಾಡುತ್ತೇವೆ ಎಂದರು ಮಾಡಲಿ. ಈಗ ಅವರಿಗೆ ಟೈಮ್ ಇದೆ, ಅವರ ಪರೀಕ್ಷೆ ಬರ್ತಾ ಇದೆ. ಆ ಪರೀಕ್ಷೆಯಲ್ಲಿ ಅವರು ಪಾಸ್ ಆಗಲು ನಾವು ಹೇಗೆ ಮಾತು ಉಳಿಸಿಕೊಂಡೆವೊ ಅವರು ಉಳಿಸಿಕೊಳ್ಳಲಿ. ಸಾಕಷ್ಟು ಜನ ಐಎಎಸ್ ಆಫೀಸರ್, ಕೆಎಎಸ್ ಆಫೀಸರ್, ಸರ್ಕಾರಿ ನೌಕರರ ಪತ್ರ ಬರೆದಿದ್ದಾರೆ. ಹಿಂದೆ ಗ್ಯಾಸ್ ವಿಚಾರದಲ್ಲೂ ಕೂಡ ಕೆಲವರು ಸಬ್ಸಿಡಿ ಬೇಡ ಅಂದಿದ್ದರು. ಹಾಗೆ ಪತ್ರ ಬರೆದು ನಮಗೆ ಉಚಿತ ಬೇಡ ಅಂದಿದ್ದಾರೆ. ಮುಂದೆ ಸರ್ಕಾರದಿಂದಲೂ ಏನ್ ಮಾಡಬಹುದು ಅಂತ ನೋಡ್ತೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ಮಾತು ಮುಂದುವರೆಸಿದ ಡಿಕೆಶಿ, ನಾವು ನುಡಿದಂತೆ ನಡೆದಿದ್ದೇವೆ. ಗ್ಯಾರಂಟಿ ಯೋಜನೆಗಳ ಬಗ್ಗೆ ವಿಪಕ್ಷದವರು ಟೀಕೆ ಮಾಡ್ತಿದ್ದಾರೆ. ವಿರೋಧ ಪಕ್ಷದವರು ಟೀಕೆ ಮಾಡುವುದಕ್ಕೆ ಇರುವುದು. ವಿಪಕ್ಷ ಟೀಕೆ ಮಾಡಲಿ, ನಾವು ಜನರ ಪರ ಕೆಲಸ ಮಾಡುತ್ತೇವೆ ಎಂದರು.

ಒಡಿಶಾ ರೈಲು ದುರಂತಕ್ಕೆ ಕಾರಣ ಹುಡುಕಬೇಕು

ಒಡಿಶಾದ ಬಹನಾಗ ನಿಲ್ದಾಣದ ಬಳಿ 3 ರೈಲುಗಳ ನಡುವೆ ಡಿಕ್ಕಿ ಸಂಭವಿಸಿದೆ. ಒಡಿಶಾದಲ್ಲಿ ರೈಲುಗಳ ಅಪಘಾತ ದುರದೃಷ್ಟಕರ. ಒಡಿಶಾದಲ್ಲಿ ರೈಲು ಅಪಘಾತದ ಕಾರಣ ಹುಡುಕಬೇಕಿದೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲು ಕಾರಣ ಹುಡುಕಬೇಕು ಎಂದರು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:09 pm, Sat, 3 June 23