DK Shivakumar: ಒಡಿಶಾ ರೈಲು ದುರಂತದಲ್ಲಿ ಮಡಿದ ಮತ್ತು ಗಾಯಗೊಂಡವರಿಗೆ ಕಂಬನಿ ಮಿಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಮುಂದೆ ಇಂಥ ದುರಂತಗಳು ಜರುಗದಂತೆ ಮುನ್ನೆಚ್ಚರವಹಿಸಲು ಜರುಗಿದ ಪ್ರಮಾದವೇನು ಅನ್ನೋದು ತನಿಖೆ ಮಾಡಬೇಕಾಗುತ್ತದೆ ಎಂದು ಶಿವಕುಮಾರ್ ಹೇಳಿದರು.

Follow us
|

Updated on:Jun 03, 2023 | 1:21 PM

ಬೆಂಗಳೂರು: ಒಡಿಶಾದ ಬಹನಾಗ ಬಳಿ ಕಳೆದ ರಾತ್ರಿ ಸಂಭವಿಸಿದ ಭಯಾನಕ ರೈಲು ಅಪಘಾತದಲ್ಲಿ (Odisha Train Accident) ಮಡಿದವರ ಮತ್ತು ಗಾಯಗೊಂಡವರಿಗೆ ಕರ್ನಾಟಕದ ಪರವಾಗಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DK Shivakumar) ಸಂತಾಪ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಿವಕುಮಾರ್, ಅಷ್ಟು ದೊಡ್ಡ ಪ್ರಮಾಣದ ದುರಂತ ಸಂಭವಿಸಿದಾಗ ಕಾರಣಗಳನ್ನು ಕೆದಕುತ್ತ ಕೂರುವುದು ಸರಿಯಲ್ಲ. ಆದರೆ ಮುಂದೆ ಇಂಥ ದುರಂತಗಳು ಜರುಗದಂತೆ ಮುನ್ನೆಚ್ಚರವಹಿಸಲು ಜರುಗಿದ ಪ್ರಮಾದವೇನು ಅನ್ನೋದು ತನಿಖೆ ಮಾಡಬೇಕಾಗುತ್ತದೆ ಎಂದು ಶಿವಕುಮಾರ್ ಹೇಳಿದರು. ಮುಂದುವರಿದು ಮಾತಾಡಿದ ಉಪ ಮುಖ್ಯಮಂತ್ರಿ, ಇವತ್ತಿನ ದಿನವನ್ನು ವಿಧಾನ ಸಭಾ ಚುನಾವಣೆಯಲ್ಲಿ (assembly polls) ತಮ್ಮನ್ನು ಪ್ರಚಂಡ ಬಹುಮತದೊಂದಿಗೆ ಗೆಲ್ಲಿಸಿದ ಕನಕಪುರದ ಜನತೆಗೆ ಮೀಸಲಿಟ್ಟಿದ್ದು ಅವರನ್ನು ಭೇಟಿಯಾಗಲು ಹೋಗುತ್ತಿರುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:57 pm, Sat, 3 June 23