Drunk Man at CM’s Residence? ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕಾಣಲು ಬಂದ ವ್ಯಕ್ತಿ ಮದ್ಯ ಸೇವಿಸಿದ್ದನೇ? ಪೊಲೀಸರು ತಡೆದಿದ್ದು ಯಾಕೆ?
ಕೊನೆಗೆ ವ್ಯಕ್ತಿ ಹ್ಯಾಪುಮೋರೆ ಹಾಕ್ಕೊಂಡು ರಸ್ತೆಯ ಇನ್ನೊಂದು ಬದಿಗೆ ಹೋಗಿ ಕೂರುತ್ತಾನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿಡಿಯೋ ನೋಡಿದರೆ ಪೊಲೀಸರನ್ನು ಪ್ರಶ್ನಿಸುವುದು ಗ್ಯಾರಂಟಿ!
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನಿವಾಸದ ಎದುರು ಜನ ತಮ್ಮ ದೂರು-ದುಮ್ಮಾನ ಹೇಳಿಕೊಳ್ಳಲು ನೆರೆದಿದ್ದಾರೆ. ವಿಡಿಯೋದಲ್ಲಿ ಕಾಣಿತ್ತಿರುವ ಹಾಗೆ ಪೊಲೀಸರು ಜನರನ್ನು ಒಬ್ಬೊಬ್ಬರಾಗಿ ಒಳಗೆ ಬಿಡುತ್ತಿದ್ದಾರೆ. ಅದರೆ, ಕೈಯಲ್ಲಿ ಒಂದಷ್ಟು ಪೇಪರ್ ಗಳನ್ನು ಹಿಡಿದಿರುವ ಬಡವ್ಯಕ್ತಿಯನ್ನು (poor man) ಪೊಲೀಸರು ತಡೆದು ವಾಪಸ್ಸು ಕಳಿಸುತ್ತಾರೆ, ಅಂದರೆ ಮುಖ್ಯಮಂತ್ರಿ ಭೇಟಿಗೆ ಅವಕಾಶ ನೀಡೋದಿಲ್ಲ. ವ್ಯಕ್ತಿ ಮದ್ಯ ಸೇವಿಸಿ ಆಗಮಿಸಿದ್ದ ಹಾಗಾಗಿ ಒಳಗೆ ಬಿಡಲಿಲ್ಲ ಅನ್ನೋದು ಪೊಲೀಸರ ವರ್ಷನ್. ಆದರೆ ಗಮನಿಸಬೇಕಾದ ಸಂಗತಿಯೇನಂದರೆ ವ್ಯಕ್ತಿ ಕುಡಿದು ಬಂದಂತೆ ಅನಿಸದು. ವ್ಯಕ್ತಿಯ ಬಟ್ಟೆ ಮತ್ತು ಮುಖ ನೋಡಿ ಪೊಲೀಸರು ತಡೆದ ಸಾಧ್ಯತೆಯೂ ಇದೆ. ಆ ವ್ಯಕ್ತಿ ತೂರಾಡುತ್ತಿಲ್ಲ ಮತ್ತು ಒಳಗೆ ಹೋಗಲು ರಂಪಾಟ ಸಹ ಮಾಡುತ್ತಿಲ್ಲ. ಪ್ರವೇಶ ನಿರಾಕರಿಸದ ಕೂಡಲೇ ಆತ ಮುಖ ಸಪ್ಪೆ ಮಾಡಿಕೊಂಡು ದೀನನಾಗಿ ಬೇಡಿಕೊಳ್ಳುತ್ತಾನೆ, ಅದರೆ ಪೊಲೀಸರು ಒಪ್ಪಲ್ಲ. ಕೊನೆಗೆ ವ್ಯಕ್ತಿ ಹ್ಯಾಪುಮೋರೆ ಹಾಕ್ಕೊಂಡು ರಸ್ತೆಯ ಇನ್ನೊಂದು ಬದಿಗೆ ಹೋಗಿ ಕೂರುತ್ತಾನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿಡಿಯೋ ನೋಡಿದರೆ ಪೊಲೀಸರನ್ನು ಪ್ರಶ್ನಿಸುವುದು ಗ್ಯಾರಂಟಿ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ