Odisha train accident: ಶಿಕರ್ಜಿ ಯಾತ್ರೆಗೆ ತೆರಳಿದ ಶೃಂಗೇರಿ ಜೈನ್ ಸಮುದಾಯದ 110 ಜನ ಬದುಕುಳಿದಿದ್ದು ಪವಾಡವಲ್ಲದೆ ಮತ್ತೇನೂ ಅಲ್ಲ!
ಪ್ರಕಾಶ್ ಅವರ ಸಹೋದರ ಹರ್ಷವರ್ಧನ್ ಜೈನ್ ಪತ್ರಿಕಾ ಪ್ರತಿನಿಧಿಗಳಿಗೆ ಅಷ್ಟು ಭೀಕರ ಅಪಘಾತ ನಡೆದರೂ ಈ 110 ಜನ ಹೇಗೆ ಅಪಾಯದಿಂದ ಪಾರಾದರು ಅನ್ನೋದನ್ನು ವಿವರಿಸಿದ್ದಾರೆ.
ಹಾಸನ: ನಿನ್ನೆ ರಾತ್ರಿ ಒಡಿಷಾ ಬಾಲಸೋರ್ ನ (Balasore) ಬಹನಾಗ ರೇಲ್ವೇ ನಿಲ್ದಾಣದ ಬಳಿ ಸಂಭವಿಸಿd ಭೀಕರ ರೈಲು ದುರಂತ ಇಡೀ ತತ್ತರಿಸುವಂತೆ ಮಾಡಿದೆ. ಅಪಘಾತದಲ್ಲಿ 300 ಕ್ಕೂ ಹೆಚ್ಚು ಜನ ಸತ್ತಿದ್ದಾರೆಂದು ಹೇಳಲಾಗುತ್ತಿದೆ ಮತ್ತು ರಕ್ಷಣಾ ಕಾರ್ಯ ಯುದ್ಧೋಪಾದಿಯಲ್ಲಿ (war footing) ಜಾರಿಯಲ್ಲಿದೆ. ಅಪಘಾತಕ್ಕೀಡಾದ ಬೆಂಗಳೂರು-ಹೌರಾ ರೈಲಿನ ಎಸ್-5, ಎಸ್-6 ಮತ್ತು ಎಸ್-7 ಬೋಗಿಗಳಲ್ಲಿ ಶಿಕರ್ಜಿ ಕ್ಷೇತ್ರಕ್ಕೆ (Shikharji pilgrimage) ಪ್ರವಾಸ ತೆರಳಿದ್ದ ಶೃಂಗೇರಿ ಮತ್ತು ಹೊರನಾಡು ಮೂಲದ ಜೈನ ಸಮುದಾಯದ ಎಲ್ಲ 110 ಜನ ಸುರಕ್ಷಿತವಾಗಿದ್ದಾರೆ. ಅವರಲ್ಲಿ ಮಾಳ ಪ್ರಕಾಶ್ ಜೈನ್ ಕುಟುಂಬವೂ ಇತ್ತು. ಪ್ರಕಾಶ್ ಅವರ ಸಹೋದರ ಹರ್ಷವರ್ಧನ್ ಜೈನ್ ಪತ್ರಿಕಾ ಪ್ರತಿನಿಧಿಗಳಿಗೆ ಅಷ್ಟು ಭೀಕರ ಅಪಘಾತ ನಡೆದರೂ ಈ 110 ಜನ ಹೇಗೆ ಅಪಾಯದಿಂದ ಪಾರಾದರು ಅನ್ನೋದನ್ನು ವಿವರಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ