ಬಸನಗೌಡ ಯತ್ನಾಳ್ ವಿರುದ್ಧ ಶಿವಾನಂದ ಪಾಟೀಲ್ ಸಮರ ಸಾರಿದ್ದು ಎಂಬಿ ಪಾಟೀಲ್ ಗೆ ಇಷ್ಟವಾಗುತ್ತಿಲ್ಲವೇ?
ಮುಸ್ಲಿಂ ಸಮುದಾಯದವರು, ಯತ್ನಾಳ್ ವಿರುದ್ಧ ವಿಜಯಪುರದಲ್ಲಿ ಪ್ರತಿಭಟನೆ ಮಾಡಿದಾಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಎಂಬಿ ಪಾಟೀಲ್ ಇರಬೇಕಿತ್ತು ಎಂದು ಶಿವಾನಂದ ಹೇಳಿದ್ದಾರೆ. ಅವತ್ತು ಬೆಲೆಯೇರಿಕೆ ಹಿನ್ನೆಲೆ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೆ ಅಂತ ಅವರಿಗೆ ಗೊತ್ತಿತ್ತು, ತಾನು ಅಲ್ಲಿದ್ದೆ ಅಂತ ಗೊತ್ತಿದ್ದರೂ ಪಾಟೀಲ್ ಇರಬೇಕಿತ್ತು ಅಂತ ಶಿವಾನಂದ ಹೇಳುತ್ತಾರೆ ಎಂದು ಪಾಟೀಲ್ ಹೇಳಿದರು.
ಬೆಂಗಳೂರು, ಮೇ 3: ಬೃಹತ್ ಕೈಗಾರಿಕೆಗಳ ಸಚಿವ ಎಂಬಿ ಪಾಟೀಲ್ ಮಾಧ್ಯಮಗಳ ಜೊತೆ ಮಾತಾಡುವಾಗ, ಶಿವಾನಂದ ಪಾಟೀಲ್ (Shivanand Patil) ತಮ್ಮ ವಿಷಯದಲ್ಲಿ ಮಾತಾಡಿದ್ದು ತಪ್ಪು ಅಂತ ಹೇಳಿದರು. ಅವರು ರಾಜೀನಾಮೆ ವಿಷಯವನ್ನು ಪ್ರಸ್ತಾಪಿಸುವುದಿಲ್ಲ. ಮೊದಲಿಗೆ ಅವರು ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಮಾತಾಡಿದ್ದು ತಪ್ಪು ಎನ್ನುತ್ತಾರೆ. ನಂತರ ನಡೆದ ಮುಸಲ್ಮಾನರ ಸಭೆಯಲ್ಲಿ ಕೆಲ ಮುಸ್ಲಿಂ ಮುಖಂಡರು ಯತ್ನಾಳ್ ವಿರುದ್ಧ ಅಶ್ಲೀಲ ಪದಗಳನ್ನು ಬಳಸಿದರು ಅವುಗಳನ್ನು ಉಲ್ಲೇಖಿಸುವುದು ಸಾಧ್ಯವಿಲ್ಲ. ಅದರೆ ಇದಕ್ಕೆಲ್ಲ ಮೂಲ ಕಾರಣೀಕರ್ತ ಯತ್ನಾಳ್ ಅಲ್ಲದೆ ಬೇರಾರೂ ಅಲ್ಲ ಅವರು ಪೈಗಂಬರ್ ಬಗ್ಗೆ ಕೆಟ್ಟದ್ದಾಗಿ ಮಾತಾಡಿರದಿದ್ದರೆ ಇದೆಲ್ಲ ಸಂಭವಿಸುತ್ತಿರಲಿಲ್ಲ ಎಂದು ಪಾಟೀಲ್ ಹೇಳಿದರು.
ಇದನ್ನೂ ಓದಿ: ನನ್ನ ಉತ್ತಮ ಸ್ನೇಹಿತ ಬಸನಗೌಡ ಯತ್ನಾಳ್ ಮಾತಾಡುವಾಗ ಹದ್ದು ಮೀರುತ್ತಿದ್ದಾರೆ: ಡಾ ಎಂಸಿ ಸುಧಾಕರ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us