ಯಡಿಯೂರಪ್ಪರನ್ನು ಸಾಮಾನ್ಯವಾಗಿ ಟೀಕಿಸದ ಎಂಬಿ ಪಾಟೀಲ್, ಹೋಗಿ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲಿ ಅಂದರು!

|

Updated on: Feb 17, 2024 | 5:01 PM

ಹಿಂದೆ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಜನರಿಗೆ 606 ಭರವಸೆಗಳನ್ನು ನೀಡಿ ಕೇವಲ 55 ಅನ್ನು ಮಾತ್ರ ಈಡೇರಿಸಿತ್ತು. ಆದರೆ 2013ರಲ್ಲಿ ಸಿದ್ದರಾಮಯ್ಯ ತಾವು ನೀಡಿದ 165 ಭರವಸೆಗಳಲ್ಲಿ 158 ಈಡೇರಿಸಿದ್ದಲ್ಲದೆ, 30 ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದರು, ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡುವ ಯಡಿಯೂರಪ್ಪ ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳಲಿ ಎಂದು ಪಾಟೀಲ್ ಖಾರವಾಗಿ ಟೀಕಿಸಿದರು.

ವಿಜಯಪುರ: ಕೈಗಾರಿಕೆಗಳ ಸಚಿವ ಎಂಬಿ ಪಾಟೀಲ್ (MB Patil) ಸಾಮಾನ್ಯವಾಗಿ ರಾಜ್ಯದ ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪರನ್ನು (BS Yediyurappa) ತೀವ್ರವಾಗಿ ಟೀಕಿಸುವುದಿಲ್ಲ. ಬೇರೆ ಬೇರೆ ಪಕ್ಷಗಳಲ್ಲಿದ್ದರೂ ಅವರಿಬ್ಬರ ನಡುವೆ ಗೌರವಾದರಗಳಿವೆ. ನಿಮಗೆ ನೆನಪಿರಬಹುದು, ಬಿವೈ ವಿಜಯೇಂದ್ರರನ್ನು (BY Vijayendra) ಬಿಜೆಪಿ ವರಿಷ್ಠರು ರಾಜ್ಯ ಘಟಕದ ಅಧ್ಯಕ್ಷ ಮಾಡಿದಾಗ ಪಾಟೀಲ್, ಬೆಂಗಳೂರು ನಗರದ ಡಾಲರ್ಸ್ ಕಾಲೊನಿಯಲ್ಲಿರುವ ಯಡಿಯೂರಪ್ಪನವರ ಮನೆಗೆ ತೆರಳಿ ಅವರನ್ನು ಅಭಿನಂದಿಸಿದ್ದರು. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿರುವವರೆಲ್ಲ ಧೋರಣೆಯನ್ನು ನೀವು ಗಮನಿಸಿರಬಹುದು. ಬೇರೆ ಪಕ್ಷದ ನಾಯಕರು ಸಿದ್ದರಾಮಯ್ಯರನ್ನು ಟೀಕಿಸಿದರೆ ಉರಿದುಬೀಳುತ್ತಾರೆ. ಪಾಟೀಲ್ ಅದಕ್ಕೆ ಹೊರತಾದವರಲ್ಲ. ನಿನ್ನೆ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅನ್ನು ಯಡಿಯೂರಪ್ಪ ಟೀಕಿಸಿರುವುದಕ್ಕೆ ಪಾಟೀಲ ಪ್ರತಿಕ್ರಿಯೆ ಕೇಳಿಸಿಕೊಳ್ಳಿ. ಹಿಂದೆ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಜನರಿಗೆ 606 ಭರವಸೆಗಳನ್ನು ನೀಡಿ ಕೇವಲ 55 ಅನ್ನು ಮಾತ್ರ ಈಡೇರಿಸಿತ್ತು. ಆದರೆ 2013ರಲ್ಲಿ ಸಿದ್ದರಾಮಯ್ಯ ತಾವು ನೀಡಿದ 165 ಭರವಸೆಗಳಲ್ಲಿ 158 ಈಡೇರಿಸಿದ್ದಲ್ಲದೆ, 30 ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದರು, ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡುವ ಯಡಿಯೂರಪ್ಪ ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳಲಿ ಎಂದು ಪಾಟೀಲ್ ಖಾರವಾಗಿ ಟೀಕಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ