ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರು ನಿವಾಸಕ್ಕೂ ದೊಡ್ಡ ಪ್ರಮಾಣದ ಭದ್ರತೆ ಮತ್ತು ಪೊಲೀಸ್ ಎಸ್ಕಾರ್ಟ್
ರಾಜ್ಯ ಪೊಲೀಸ್ ಇಲಾಖೆಯ ವಾಹನಗನ್ನು ಸ್ಥಳದಲ್ಲಿ ನೋಡಬಹುದಾದರೂ, ರಾಜ್ಯ ಪೊಲೀಸ್ ಅಧಿಕಾರಿಗಳು ಕಾಣಿಸುವುದಿಲ್ಲ. ನಿವಾಸದ ಮುಂದೆ ಗನ್ ಗಳನ್ನು ಹಿಡಿದು ನಿಂತಿರುವರು ಬ್ಲ್ಯಾಕ್ ಕ್ಯಾಟ್ ಕಮಾಂಡೊ ಮತ್ತು ಎಸ್ ಪಿಜಿ ಆಗಿರುತ್ತಾರೆ. ಖರ್ಗೆ ಅವರ ಎಸ್ಕಾರ್ಟ್ ಗಾಗಿ ಪೊಲೀಸ್ ಜೀಪುಗಳು ಆಗಮಿಸಿರಬಹುದು.
ಬೆಂಗಳೂರು: ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮತ್ತು ರಾಜ್ಯದ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಬೆಂಗಳೂರಲ್ಲಿದ್ದಾರೆ. ಇಂದು ಮಂಗಳೂರಲ್ಲಿ ರಾಜ್ಯ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು (Congress convention) ಆಯೋಜಿಸಲಾಗಿದ್ದು ಅದರಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ನಾವು ಈಗಾಗಲೇ ವರದಿ ಮಾಡಿರುವ ಹಾಗೆ, ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಕರಾವಳಿ ನಗರಕ್ಕೆ (coastal city) ಭೇಟಿ ನೀಡುತ್ತಿರುವುದರಿಂದ ಅವರನ್ನು ಸತ್ಕರಿಸುವ ಕಾರ್ಯಕ್ರಮ ಸಹ ಇಟ್ಟುಕೊಳ್ಳಲಾಗಿದೆ. ನಿಮಗೆ ದೃಶ್ಯಗಳಲ್ಲಿ ಕಾಣುತ್ತಿರೋದು ಬೆಂಗಳೂರಿನ ಸದಾಶಿವನಗರದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರ ಮನೆ. ಅವರ ನಿವಾಸದ ಸುತ್ತ ಭದ್ರತಾ ಸಿಬ್ಬಂದಿಯನ್ನು ನೋಡಬಹುದು. ರಾಜ್ಯ ಪೊಲೀಸ್ ಇಲಾಖೆಯ ವಾಹನಗನ್ನು ಸ್ಥಳದಲ್ಲಿ ನೋಡಬಹುದಾದರೂ, ರಾಜ್ಯ ಪೊಲೀಸ್ ಅಧಿಕಾರಿಗಳು ಕಾಣಿಸುವುದಿಲ್ಲ. ನಿವಾಸದ ಮುಂದೆ ಗನ್ ಗಳನ್ನು ಹಿಡಿದು ನಿಂತಿರುವರು ಬ್ಲ್ಯಾಕ್ ಕ್ಯಾಟ್ ಕಮಾಂಡೊ ಮತ್ತು ಎಸ್ ಪಿಜಿ ಆಗಿರುತ್ತಾರೆ. ಖರ್ಗೆ ಅವರ ಎಸ್ಕಾರ್ಟ್ ಗಾಗಿ ಪೊಲೀಸ್ ಜೀಪುಗಳು ಆಗಮಿಸಿರಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ