Bengaluru Bandh: ಸಚಿವ ರಾಮಲಿಂಗಾರೆಡ್ಡಿ ಕರೆದ ಸಭೆ ಕಾದಾಟದಲ್ಲಿ ಪರ್ಯಾವಸನಗೊಂಡಿತು!
ಅವರನ್ನು ಸಮಾಧಾನ ಪಡಿಸಲು ಸಚಿವ, ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಹರಸಾಹಸ ಪಡಬೇಕಾಯಿತು.
ಬೆಂಗಳೂರು: ಖಾಸಗಿ ಬಸ್, ಆಟೋ ಮತ್ತು ಕ್ಯಾಬ್ ಆಪರೇಟರ್ ಗಳು, ಕರ್ನಾಟಕ ಖಾಸಗಿ ಸಾರಿಗೆ ಸಂಸ್ಥಗೆಳ ಒಕ್ಕೂಟದ ನೇತೃತ್ವದಲ್ಲಿ ಜುಲೈ 27 ರಂದು ಬೆಂಗಳೂರು ಬಂದ್ ಗೆ (Bengaluru Bandh) ಕರೆ ನೀಡಿರುವ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಇಂದು ಸಾರಿಗೆ ವಿಭಾಗ ಕಚೇರಿಯಲ್ಲಿ ಕರೆದಿದ್ದ ಸಭೆ ಕೋಲಾಹಲ (chaos), ಗಲಾಟೆಯಲ್ಲಿ ಮಾರ್ಪಟ್ಟಿತ್ತು. ಎಲ್ಲ ಖಾಸಗಿ ಸಾರಿಗೆ ಸಂಸ್ಥೆಗಳ ಪ್ರತಿನಿಧಿಗಳನ್ನು ಅವರವರ ಸಮಸ್ಯೆ ಆಲಿಸಲು ಮತ್ತು ಉದ್ದೇಶಿತ ಬೆಂಗಳೂರು ಬಂದ್ ಕೈ ಬಿಡುವಂತೆ ಮನವಿ ಮಾಡಲು ಸಚಿವ ಸಭೆ ಕರೆದಿದ್ದರು. ಆದರೆ, ರಾಜ್ಯ ಸಾರಿಗೆ ಸಂಸ್ಥೆಯ ಚಾಲಕರು ಮತ್ತು ಸಿಬ್ಬಂದಿ ಹಾಗೂ ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳ ನಡುವೆ ಜಗಳ ತಲೆದೋರಿ ಕಚೇರಿ ಆವರಣದಲ್ಲಿ ದೊಂಬಿ ಶುರುವಾಯಿತು. ಸಚಿವ ರಾಮಲಿಂಗಾರೆಡ್ಡಿ ಶಾಂತರಾಗಿ, ನನ್ನ ಮಾತು ಕೇಳಿ ಅಂತ ಮೈಕ್ ಹಿಡಿದು ಮನವಿ ಸಲ್ಲಿಸುತ್ತಿದ್ದರೂ ಜಗಳ ನಿಲ್ಲಲಿಲ್ಲ. ಅವರನ್ನು ಸಮಾಧಾನ ಪಡಿಸಲು ಸಚಿವ, ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಹರಸಾಹಸ ಪಡಬೇಕಾಯಿತು.
ಮತ್ತಷ್ಟು ವಿಡಿಯೋಅ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ