ಅನಾರೋಗ್ಯದಿಂದ ಬಳಲುತ್ತಿರುವ ಹುಡುಗಿಗೆ ವಿಡಿಯೋ ಕಾಲ್ ಮೂಲಕ ಧೈರ್ಯ ತುಂಬಿದರು ಸೂಪರ್ಸ್ಟಾರ್ ರಜಿನೀಕಾಂತ್
ಅವರ ಮನವಿಗೆ ಕೂಡಲೇ ಸ್ಪಂದಿಸಿದ ರಜಿನಿ ಆಕೆಗೆ ವಿಡಿಯೊ ಕಾಲ್ ಮಾತಾಡಿ ಮಾತಾಡಿದ್ದಾರೆ. ಸೂಪರ್ ಸ್ಟಾರ್ ನ ಹೃದಯವೂ ಸೂಪರ್ ಮಾರಾಯ್ರೇ!
ಕನ್ನಡನಾಡಿನಲ್ಲಿ ಹುಟ್ಟಿ ಬೆಂಗಳೂರು ಸಾರಿಗೆ ಸಂಸ್ಥೆಯಲ್ಲಿ (ಆಗಿನ ಬಿಟಿಎಸ್) ಕಂಡಕ್ಟರ್ ನೌಕರಿ ಮಾಡುತ್ತಲೇ ಕನ್ನಡ ಚಿತ್ರಗಳಲ್ಲಿ ನಟಿಸುತ್ತಾ ತಮಿಳು ಚಿತ್ರರಂಗಕ್ಕೆ ಹಾರಿ ಅಲ್ಲಿ ಸೂಪರ್ ಸ್ಟಾರ್, ಮೆಗಾ ಸ್ಟಾರ್ ಆಗಿ ಬೆಳೆದ ರಜಿನೀಕಾಂತ್ ಅವರಿಗೆ ಬೇರೆ ಗ್ರಹಗಳಲ್ಲೂ ಅಭಿಮಾನಿಗಳಿದ್ದಾರೆಂದು ಹೇಳುತ್ತಾರೆ. ಅವರ ಚಿತ್ರಗಳು ಜಪಾನಿನಲ್ಲಿ ಶತದಿನೋತ್ಸವ ಆಚರಿಸುತ್ತವೆ ಅಂದರೆ ಜನ ಹೇಳುವುದರಲ್ಲಿ ಉತ್ಪ್ರೇಕ್ಷೆ ಇರಲಿಕ್ಕಿಲ್ಲ ಮಾರಾಯ್ರೇ. ಈ ಮಹಾನ್ ನಟ ದೊಡ್ಡ ಹೃದಯವಂತನೂ ಹೌದು. ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ದೊಡ್ಡ ಗುಣ ಅವರಲ್ಲಿದೆ. ಇದನ್ನು ನಾವು ಹೇಳುತ್ತಿದ್ದೇವೆ ಅಂದರೆ, ಬೆಂಗಳೂರಿನಲ್ಲಿ ವಾಸವಾಗಿರುವ ಅವರ ಕಟ್ಟಾ ಅಭಿಮಾನಿಯೊಬ್ಬರ ಮಗಳು ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ಈಕೆಗೂ ರಜಿನನೀಕಾಂತ್ ಅಂದರೆ ಬೆಟ್ಟದಷ್ಟು ಅಭಿಮಾನ ಮತ್ತು ಪ್ರೀತಿ.
ಈ ಹುಡುಗಿ ಕೆಲದಿನಗಳಿಂದ ಹಾಸಿಗೆ ಹಿಡಿದಿದ್ದಾಳೆ. ಆಕೆಗೆ ರಜಿನಿ ಸಾರ್ ಜೊತೆ ಮಾತಾಡು ಉತ್ಕಟ ಆಸೆಯಾಗಿದೆ. ಹುಡುಗಿಯ ತಂದೆ (ಅವರ ಹೆಸರು ನಮಗೆ ಗೊತ್ತಾಗಿಲ್ಲ) ರಜಿನಿಕಾಂತ್ ಅವರನ್ನು ಕೆಲ ಸಲ ಭೇಟಿಯಾಗಿದ್ದಾರೆ. ಹಾಗಾಗಿ ಅವರಲ್ಲಿ ನಟನ ಫೋನ್ ನಂಬರ್. ಸರಿ, ಅವರು ತಮ್ಮ ಮಗಳ ಅನಾರೋಗ್ಯ ವಿವರಿಸುತ್ತಾ ಆಕೆ ಮೆಗಾಸ್ಟಾರ್ ನೊಂದಿಗೆ ಮಾತಾಡುವ ಆಸೆ ವ್ಯಕ್ತಪಡಿಸಿದ್ದಾಳೆ ಎಂದು ತಾನು ಹೇಳುತ್ತಿರುವುದನ್ನು ವಿಡಿಯೋ ಮಾಡಿ ರಜಿನಿಕಾಂತ್ ಅವರಿಗೆ ವಾಟ್ಸ್ಯಾಪ್ ಮಾಡಿದ್ದಾರೆ.
ಅವರ ಮನವಿಗೆ ಕೂಡಲೇ ಸ್ಪಂದಿಸಿದ ರಜಿನಿ ಆಕೆಗೆ ವಿಡಿಯೊ ಕಾಲ್ ಮಾತಾಡಿ ಮಾತಾಡಿದ್ದಾರೆ. ‘ಸೌಮ್ಯ, ಹೇಗಿದ್ದಿಯಮ್ಮ? ನಿನ್ನ ಅರೋಗ್ಯಕ್ಕೇನೂ ಆಗಿಲ್ಲ. ಆದಷ್ಟು ಬೇಗ ನೀನು ಗುಣಮುಖಳಾಗ್ತೀಯಾ, ನಿನ್ನ ನೋಡಲು ನಾನೇ ಬರಬೇಕು ಅಂದುಕೊಂಡೆ. ಆದರೆ ಈ ಕೊವಿಡ್-19 ಪಿಡುಗಿನಿಂದಾಗಿ ನಾನು ಬರಲಾಗುತ್ತಿಲ್ಲ. ಅದರೆ, ನಾನು ನಿನಗೋಸ್ಕರ ಪ್ರಾರ್ಥನೆ ಮಾಡ್ತಾ ಇರ್ತೀನಿ ಆಯ್ತಾ? ಚಿಂತೆ ಮಾಡಬೇಡ, ಬೇಗ ಗುಣ ಹೊಂದುತ್ತೀಯಾ,’ ಎಂದು ಅವರು ವಿಡಿಯೋ ಕಾಲ್ನಲ್ಲಿ ಹೇಳಿದ್ದಾರೆ.
ಸೂಪರ್ ಸ್ಟಾರ್ ನ ಹೃದಯವೂ ಸೂಪರ್ ಮಾರಾಯ್ರೇ!
ಇದನ್ನೂ ಓದಿ: Viral Video: ಭರ್ಜರಿ ನೃತ್ಯದ ಮೂಲಕ ನೆಟ್ಟಿಗರ ಮನಗೆದ್ದ 63 ವರ್ಷದ ಮಹಿಳೆ; ವಿಡಿಯೋ ನೋಡಿ