Megha Shetty: ‘ಇವ್ರು ವಿಷ ಕೊಟ್ಟು ಅಮೃತ ಅಂತ ಹೇಳಿದ್ರೂ ಕುಡಿತೀನಿ’: ಮೇಘಾ ಶೆಟ್ಟಿ ಹೀಗೆ ಹೇಳಿದ್ದೇಕೆ?

Dil Pasand: ‘ದಿಲ್​ ಪಸಂದ್​’ ಚಿತ್ರದಲ್ಲಿ ಮೇಘಾ ಶೆಟ್ಟಿ, ಡಾರ್ಲಿಂಗ್​ ಕೃಷ್ಣ, ನಿಶ್ವಿಕಾ ನಾಯ್ಡು ನಟಿಸಿದ್ದಾರೆ. ನವೆಂಬರ್​ 11ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

Megha Shetty: ‘ಇವ್ರು ವಿಷ ಕೊಟ್ಟು ಅಮೃತ ಅಂತ ಹೇಳಿದ್ರೂ ಕುಡಿತೀನಿ’: ಮೇಘಾ ಶೆಟ್ಟಿ ಹೀಗೆ ಹೇಳಿದ್ದೇಕೆ?
| Updated By: ಮದನ್​ ಕುಮಾರ್​

Updated on:Oct 04, 2022 | 9:21 AM

ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ನಟಿ ಮೇಘಾ ಶೆಟ್ಟಿ ಗುರುತಿಸಿಕೊಂಡಿದ್ದಾರೆ. ಅವರು ನಟಿಸಿರುವ ‘ದಿಲ್​ ಪಸಂದ್​’ (Dil Pasand) ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರದಲ್ಲಿ ಅವರು ಡಾರ್ಲಿಂಗ್​ ಕೃಷ್ಣ (Darling Krishna) ಜೊತೆ ನಟಿಸಿದ್ದಾರೆ. ಚಿತ್ರದಲ್ಲಿ ತಮ್ಮ ಪಾತ್ರ ಹೇಗಿದೆ ಎಂಬುದನ್ನು ಮೇಘಾ ಶೆಟ್ಟಿ ವಿವರಿಸಿದ್ದಾರೆ. ‘ನನ್ನದು ಮುಗ್ಧ ಹುಡುಗಿಯ ಪಾತ್ರ. ಇವರು (ಡಾರ್ಲಿಂಗ್​ ಕೃಷ್ಣ) ಬಂದು ವಿಷ ಕೊಟ್ಟು ಇದು ಅಮೃತ ಅಂತ ಹೇಳಿದ್ರೆ ಕುಡಿದುಬಿಡ್ತೀನಿ. ಖಂಡಿತವಾಗಿಯೂ ನೀವೆಲ್ಲ ಈ ಚಿತ್ರವನ್ನು ಎಂಜಾಯ್​ ಮಾಡ್ತೀರ ಎಂಬ ನಂಬಿಕೆ ಇದೆ’ ಎಂದು ಮೇಘಾ ಶೆಟ್ಟಿ (Megha Shetty) ಹೇಳಿದ್ದಾರೆ. ಈ ಸಿನಿಮಾಗೆ ಸುಮಂತ್​ ಕ್ರಾಂತಿ ಬಂಡವಾಳ ಹೂಡಿದ್ದು, ಶಿವ ತೇಜಸ್​ ನಿರ್ದೇಶನ ಮಾಡಿದ್ದಾರೆ. ನವೆಂಬರ್​ 11ಕ್ಕೆ ಈ ಚಿತ್ರ ಬಿಡುಗಡೆ ಆಗಲಿದೆ.

 

Published On - 9:21 am, Tue, 4 October 22

Follow us