ಕಣ್ಣೀರು ತರಿಸಿತ್ತು ಸುಂದರ್​ ರಾಜ್ ಬದುಕಿನ ನೈಜ ಲವ್​ ಸ್ಟೋರಿ​; ಹಲವು ವರ್ಷಗಳ ಬಳಿಕ ಆ ಹುಡುಗಿ ಸಿಕ್ಕಾಗ..

| Updated By: ಮದನ್​ ಕುಮಾರ್​

Updated on: Jun 01, 2022 | 3:59 PM

ತಮ್ಮದೇ ಲವ್​ ಸ್ಟೋರಿ ಬಗ್ಗೆ ಸುಂದರ್​ ರಾಜ್​ ಮಾತನಾಡಿದ್ದಾರೆ. ಸಿನಿಮಾದ ಕಥೆಯಂತೆ ಇರುವ ಘಟನೆಯನ್ನು ಅವರು​ ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ನಟ ಸುಂದರ್​ ರಾಜ್​ (Sundar Raj) ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳ ಅನುಭವ ಹೊಂದಿದ್ದಾರೆ. ಅನೇಕ ಗಮನಾರ್ಹ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಅವರ ಬದುಕಿನಲ್ಲಿ ಒಂದು ಲವ್​ ಸ್ಟೋರಿ ಇದೆ. ತಮ್ಮ ನಿಜ ಜೀವನದ ಆ ಒನ್​ ಸೈಡ್​ ಲವ್​ ಸ್ಟೋರಿಯನ್ನು ಅವರು ಟಿವಿ9 ಜೊತೆ ಹಂಚಿಕೊಂಡಿದ್ದಾರೆ. ಕಾಲೇಜಿನಲ್ಲಿ ಸುಂದರ್​ ರಾಜ್​ ಅವರು ಓರ್ವ ಹುಡುಗಿಯನ್ನು ಪ್ರೀತಿಸಿದ್ದರು. ಆದರೆ ಆ ಹುಡುಗಿ ಒಪ್ಪಿಕೊಳ್ಳಲಿಲ್ಲ. ಆ ಘಟನೆಯನ್ನು ಅವರೀಗ ಮೆಲುಕು ಹಾಕಿದ್ದಾರೆ. ಅಷ್ಟೇ ಅಲ್ಲ, ಎಷ್ಟೋ ವರ್ಷಗಳ ಬಳಿಕ ಆ ಹುಡುಗಿಯನ್ನು ಮತ್ತೆ ಆಕಸ್ಮಿಕವಾಗಿ ಭೇಟಿ ಆದಾಗ ಇಬ್ಬರೂ ಕಣ್ಣೀರು ಹಾಕಿದ್ದರು. ಸಿನಿಮಾದ ಕಥೆಯಂತೆ ಇರುವ ರಿಯಲ್​ ಲೈಫ್​ ಸ್ಟೋರಿಯನ್ನು ಸುಂದರ್ ರಾಜ್​ ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Jun 01, 2022 03:58 PM