Karnataka Budget Session: ಸ್ಪೀಕರ್ ಯುಟಿ ಖಾದರ್ ಮತ್ತು ಶಾಸಕ ಸುನೀಲ ಕುಮಾರ ತುಳು ಭಾಷೆಯಲ್ಲಿ ಮಾತಾಡಿದಾಗ ಸದನ ಕಕ್ಕಾಬಿಕ್ಕಿ!

|

Updated on: Mar 13, 2025 | 6:52 PM

ಕರಾವಳಿ ಭಾಗದ ಮೂರು ಜಿಲ್ಲೆಗಳು-ಮಂಗಳೂರು, ಉಡುಪಿ ಮತ್ತು ಉತ್ತರ ಕನ್ನಡಗಳ ಸಮಗ್ರ ಅಭಿವೃದ್ಧಿಗೆ ಎಲ್ಲ ಸರ್ಕಾರಗಳು ಸ್ಪಂದಿಸಿವೆ, ಇಲ್ಲ ಅಂತೇನೂ ಇಲ್ಲ, ಆದರೆ ಸರ್ಕಾರ ಮತ್ತು ಅಧಿಕಾರಿ ವರ್ಗ ಕೆಲಸಗಳ ವೇಗವನ್ನು ಹೆಚ್ಚಿಸಬೇಕಿದೆ, ಕರಾವಳಿ ಪ್ರಾಂತ್ಯವು ಸುಮಾರು 330ಕಿಮೀಗಳಷ್ಟು ವಿಸ್ತೃತವಾಗಿದೆ, ಈ ಭಾಗದ ಸಮಸ್ಯೆಗಳು ಮತ್ತು ಪರಿಹಾರ ಭಿನ್ನವಾಗಿವೆ ಎಂದು ಸುನೀಲ ಕುಮಾರ ಹೇಳುತ್ತಾರೆ.

ಬೆಂಗಳೂರು, 13 ಮಾರ್ಚ್: ನಿಯಮ 69ರ ಅಡಿ ಸಭಾಧ್ಯಕ್ಷ ಯುಟಿ ಖಾದರ್ (Speaker UT Khader) ಅವರು ಕರಾವಳಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಚರ್ಚೆಗೆ ಅವಕಾಶ ಮಾಡಿಕೊಡುತ್ತಾರೆ. ಕಾರ್ಕಳದ ಶಾಸಕ ಸುನೀಲ ಕುಮಾರ ಮಾತಾಡಲು ಎದ್ದು ನಿಲ್ಲುತ್ತಿದ್ದಂತೆಯೇ ಸ್ಪೀಕರ್ ಬೇಗ ಮಾತಾಡಿ ಅನ್ನುತ್ತಾರೆ. ಅವರ ಮಾತಿಂದ ಅಸಮಾಧಾನಗೊಳ್ಳುವ ಸುನೀಲ, ಸ್ವಲ್ಪ ರಿಲ್ಯಾಕ್ಸ್ ಮಾಡಿ, ಅಸನಕ್ಕೆ ಒರಗಿ ಕೂತ್ಕೊಳ್ಳಿ ಅನ್ನುತ್ತಾರೆ. ಆಗ ಕರಾವಳಿ ಭಾಗದ ಸದಸ್ಯರೊಬ್ಬರು ತುಳು ಭಾಷೆಯಲ್ಲಿ ಏನೋ ಹೇಳುತ್ತಾರೆ. ಆಮೇಲೆ ಖಾದರ್ ಮತ್ತು ಸುನೀಲ ನಡುವೆ ತುಳುನಲ್ಲೇ ಸಂಭಾಷಣೆ ನಡೆಯುತ್ತದೆ. ಒಬ್ಬ ಸದಸ್ಯರು, ಕರಾವಳಿ ಜಿಲ್ಲೆಯವರನ್ನು ಬಿಟ್ಟು ಉಳಿದವರು ಹೊರಗಡೆ ಹೋಗ್ತೀವಿ ಅನ್ನುತ್ತಾರೆ!

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಶಿವಕುಮಾರ್​ಗೆ ಸಿಎಂ ಹುದ್ದೆ ಸುಮ್ಮನೆ ಸಿಗಲ್ಲ ಅದನ್ನವರು ಒದ್ದೇ ಪಡೆಯಬೇಕಾದ ಅನಿವಾರ್ಯತೆ ಇದೆ: ಸುನೀಲ ಕುಮಾರ್, ಶಾಸಕ