ಮುಂಬೈನಲ್ಲಿ ಸಭೆ ನಡೆಸಿದ ಎಂಇಎಸ್ ಸದಸ್ಯರು, ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ತಗಾದೆ ತೆಗೆಯುವ ಹುನ್ನಾರವೇ?
ರಾಜ್ಯೋತ್ಸವ ಹತ್ತಿರದಲ್ಲಿದೆ, ಹಾಗಾಗೇ ಮಹರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯರು ತಗಾದೆ ಶುರುಮಾಡಲು ಕಾರ್ಯಪ್ರವೃತ್ತರಾಗಿದ್ದಾರೆ. ಈ ವಿಡಿಯೋ ನಮಗೆ ಮುಂಬೈ ಮಹಾನಗರದಿಂದ ಲಭ್ಯವಾಗಿದೆ. ಮಹಾರಾಷ್ಟ್ರ ಗಡಿ ಉನ್ನತಮಟ್ಟದ ಸಮಿತಿ ಅಧ್ಯಕ್ಷ ಧೈರ್ಯಶೀಲ ಮಾನೆ ಎನ್ನುವ ವ್ಯಕ್ತಿ ಇತ್ತೀಚಿಗೆ ಮುಂಬೈನಲ್ಲಿ ಎಂಇಎಸ್ ಸದಸ್ಯರೊಂದಿಗೆ ಒಂದು ಸಭೆ ನಡೆಸಿದ್ದಾನೆ.
ಬೆಳಗಾವಿ: ಕಾವೇರಿ ನದಿ ನೀರಿನ ವಿವಾದ (Cauvery water issue) ಮತ್ತು ಬೆಳಗಾವಿ ಗಡಿ ವಿವಾದ (Belagavi border issue)-ಕನ್ನಡಿಗರನ್ನು ಎಡೆಬಿಡದೆ ಕಾಡುತ್ತಿರುವ ಸಮಸ್ಯೆಗಳು. ಕಾವೇರಿ ನದಿಯಲ್ಲಿ ಪ್ರತಿವರ್ಷ ಸಾಕಷ್ಟು ನೀರು ಹರಿದುಹೋಗುತ್ತದೆ, ಸರ್ಕಾರಗಳು ಬದಲಾಗುತ್ತವೆ ಆದರೆ ಸಂಘರ್ಷ ಮಾತ್ರ ಹಾಗೆಯೇ ಉಳಿದುಬಿಡುತ್ತದೆ. ಬೆಳಗಾವಿಯಲ್ಲಿರುವ ಮರಾಠಿ ಮಾತಾಡುವ ಜನ (Marathi-speaking people) ವಿಶೇಷವಾಗಿ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಶುರುವಿಟ್ಟುಕೊಳ್ಳುವ ರಗಳೆ ಕೂಡ ಅದೇ ತೆರನಾದದ್ದು. ರಾಜ್ಯೋತ್ಸವ ಹತ್ತಿರದಲ್ಲಿದೆ, ಹಾಗಾಗೇ ಮಹರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯರು ತಗಾದೆ ಶುರುಮಾಡಲು ಕಾರ್ಯಪ್ರವೃತ್ತರಾಗಿದ್ದಾರೆ. ಈ ವಿಡಿಯೋ ನಮಗೆ ಮುಂಬೈ ಮಹಾನಗರದಿಂದ ಲಭ್ಯವಾಗಿದೆ. ಮಹಾರಾಷ್ಟ್ರ ಗಡಿ ಉನ್ನತಮಟ್ಟದ ಸಮಿತಿ ಅಧ್ಯಕ್ಷ ಧೈರ್ಯಶೀಲ ಮಾನೆ ಎನ್ನುವ ವ್ಯಕ್ತಿ ಇತ್ತೀಚಿಗೆ ಮುಂಬೈನಲ್ಲಿ ಎಂಇಎಸ್ ಸದಸ್ಯರೊಂದಿಗೆ ಒಂದು ಸಭೆ ನಡೆಸಿದ್ದಾನೆ. ಎಲ್ಲರೂ ಮರಾಠಿಯಲ್ಲಿ ಮಾತಾಡುತ್ತಿರುವುದರಿಂದ ಏನು ಮಾತುಕತೆ ನಡೆಯುತ್ತಿದೆ ಅಂತ ಗೊತ್ತಾಗುತ್ತಿಲ್ಲ. ಆದರೆ ಕರ್ನಾಟಕದ ಹೆಸರು ಪ್ರಸ್ತಾಪವಾಗುತ್ತಿರುವುದನ್ನು ಕೇಳಿಸಿಕೊಳ್ಳಬಹುದು. ಗಡಿಭಾಗದಲ್ಲಿರುವ ಮರಾಠಿ ಭಾಷಿಕನ್ನು ಒಗ್ಗೂಡಿಸುವ ಬಗ್ಗೆಯೂ ಅವರು ಮಾತಾಡುತ್ತಿರುವಂತಿದೆ. ತೀಟೆ ಮಾಡಿದರೆ ಎಂದಿನ ಹಾಗೆ ಕನ್ಡಡಿಗರು ತಕ್ಕ ಜಬಾಬು ನೀಡೋದು ಮಾತ್ರ ನಿಶ್ಚಿತ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ