ಲೋಕಸಭಾ ಚುನಾವಣೆಗೆ ತಯಾರಿಗಳ ಬಗ್ಗೆ ಚರ್ಚಿಸಲು ದೆಹಲಿಗೆ ಹೊರಟ ರಾಜ್ಯ ಸಚಿವ ಸಂಪುಟ ಸದಸ್ಯರು

|

Updated on: Jan 11, 2024 | 10:47 AM

ಕೆಎಐನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ ಆರ್ ಬಿ ತಿಮ್ಮಾಪುರ, ಹೆಚ್ಚುವರಿ ಡಿಸಿಎಂಗಳ ನೇಮಕ ಹೈಕಮಾಂಡ್ ಗೆ ಬಿಟ್ಟ ವಿಚಾರ, ಅದರೆ ರಾಜ್ಯದ ಮಂತ್ರಿಗಳೆಲ್ಲ ಹೋಗುತ್ತಿರೋದು ಲೋಕಸಭಾ ಚುನಾವಣೆಗೆ ಸಂಬಂಧಿಸಿ ತಯಾರಿಗಳನ್ನು ಕುರಿತು ಚರ್ಚೆ ನಡೆಸಲು ಮತ್ತು ವ್ಯೂಹ ರಚನೆ ಬಗ್ಗೆ ವರಿಷ್ಠರಿಂದ ಸಲಹೆ ಪಡೆಯಲು ಎಂದು ಹೇಳಿದರು.

ಬೆಂಗಳೂರು: ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ತಯಾರಿಗಳನ್ನು ಆರಂಭಿಸಿದೆ. ನಾವು ನಿನ್ನೆ ವರದಿ ಮಾಡಿದ ಹಾಗೆ ಕರ್ನಾಟಕದ ಎಐಸಿಸಿ ಉಸ್ತುವಾರಿ ರಂದೀಪ್ ಸುರ್ಜೆವಾಲಾ (Randeep Surjewala), ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದ ಕಾರ್ಯಕರ್ತರ ಸಭೆಯನ್ನು ಕೆಪಿಸಿಸಿ ಕಚೇರಿಯಲ್ಲಿ ನಡೆಸಲಾಯಿತು. ಗೃಹ ಸಚಿವ ಜಿ ಪರಮೇಶ್ವರ್ ಬುಧವಾರ ಮಾಧ್ಯಮಗಳಿಗೆ ಹೇಳಿದಂತೆ, ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಉಸ್ತುವಾರಿಯನ್ನು ಸಿದ್ದರಾಮಯ್ಯ ಸಂಪುಟದ 28 ಸಚಿವರಿಗೆ ವಹಿಸಲಾಗಿದ್ದು ಅವರೆಲ್ಲರನ್ನು ಚರ್ಚೆಗಾಗಿ ಇಂದು ದೆಹಲಿಗೆ ಕರೆಯಲಾಗಿದೆ. ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna) ಮತ್ತು ಅಬ್ಕಾರಿ ಸಚಿವ ಆರ್ ಬಿ ತಿಮ್ಮಾಪುರ (RB Timmapur) ಅವರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೋಡಬಹುದು. ಟಿವಿ9 ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಇವರೊಂದಿಗೆ ಬೇರೆ ಕೆಲ ಸಚಿವರು ಬೆಂಗಳೂರಿನಿಂದ 7.30ಕ್ಕೆ ಹೊರಟ ವಿಮಾನದಲ್ಲಿ ದೆಹಲಿಗೆ ತೆರಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ