ಅಫಘಾನಿಸ್ತಾನದಿಂದ ಸುರಕ್ಷಿತವಾಗಿ ವಾಪಸ್ಸು ಬರಲು ನೆರವಾದ ಪ್ರಧಾನಿ ಮೋದಿಗೆ ಸಿಕ್ಖರು ಕೃತಜ್ಞತೆ ಸಮರ್ಪಿಸಿದರು
ಬುಧವಾರದಂದು ಅಫಫಾನಿಸ್ತಾನದಿಂದ ವಾಪಸ್ಸು ಬಂದಿರುವ ಸಿಕ್ಖರು ಭಾರತದಲ್ಲಿರುವ ತಮ್ಮ ಬಂಧು-ಬಳಗದವರೊಂದಿಗೆ ಸೇರಿ ಒಂದು ವಿಶಿಷ್ಟವಾದ ರೀತಿಯಲ್ಲಿ ಪ್ರಧಾನಿ ಮೋದಿ ಮತ್ತು ಶಾ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ತಾಲಿಬಾನಿಗಳು ಅಫಘಾನಿಸ್ತಾನದಲ್ಲಿ ಸರ್ಕಾರ ಹಾಗೂ ಆಡಳಿತವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡ ನಂತರ ಅಲ್ಲಿ ಸಿಲುಕಿದ್ದ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸ್ಸು ಕರೆತರುವ ಕಠಿಣ ಸವಾಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರದ ಮುಂದಿತ್ತು. ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅಧಿಕಾರಗಳ ನೆರವಿನಿಂದ ಒಂದು ಫೂಲ್ಪ್ರೂಫ್ ಯೋಜನೆಯನ್ನು ತಯಾರಿಸಿ ಅಫಘಾನಿಸ್ತಾನದಲ್ಲಿ ನೆಲೆಸಿದ್ದ ಎಲ್ಲ ಭಾರತೀಯರನ್ನು ಅವರ ಒಂದು ತಲೆಗೂದಲಿಗೂ ತೊಂದರೆಯಾಗದ ಹಾಗೆ ಸುರಕ್ಷಿತವಾಗಿ ವಾಪಸ್ಸು ಕರೆತಂದಿದ್ದಾರೆ.
ಅಫಘಾನಿಸ್ತಾನದಲ್ಲಿ ಹಿಂದೂಗಳ ಜೊತೆ ಸಿಖ್ ಸಮುದಾಯದ ಸಾಕಷ್ಟು ಜನ ವಾಸವಾಗಿದ್ದರು. ಅವರಲ್ಲಿ ಒಬ್ಬರಾಗಿರುವ ನರೆಂದರ್ ಸಿಂಗ್ ಖಾಲ್ಸಾ ಆಫಫಾನಿಸ್ತಾನ ಸಂಸತ್ತಿನ ಸದಸ್ಯರೂ ಆಗಿದ್ದಾರೆ. ಬುಧವಾರದಂದು ಅಫಫಾನಿಸ್ತಾನದಿಂದ ವಾಪಸ್ಸು ಬಂದಿರುವ ಸಿಕ್ಖರು ಭಾರತದಲ್ಲಿರುವ ತಮ್ಮ ಬಂಧು-ಬಳಗದವರೊಂದಿಗೆ ಸೇರಿ ಒಂದು ವಿಶಿಷ್ಟವಾದ ರೀತಿಯಲ್ಲಿ ಪ್ರಧಾನಿ ಮೋದಿ ಮತ್ತು ಶಾ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೊಡ್ಡ ಭಾವಚಿತ್ರದ ಎದುರು ಸಿಕ್ಖರು ಹಾಡು ಮತ್ತು ಭಜನೆಗಳ ಮೂಲಕ ದನ್ಯವಾದಗಳನ್ನು ಸಮರ್ಪಿಸಿದರು. ಹಾಡಿನ ನಂತರ ಮಾತಾಡಿದ ಒಬ್ಬರು, ‘ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ನಾವೆಂದೂ ಮರೆಯದಂಥ ಸಹಾಯ ಮಾಡಿರುವುದಕ್ಕೆ ಹೃತ್ಪೂರ್ಕವಾಗಿ ಧನ್ಯವಾದಗಳನ್ನು ಸಮರ್ಪಿಸುತ್ತೇವೆ. ಅವರು ಮಾಡಿರುವ ಸಹಾಯಕ್ಕೆ ನಾವು ಚಿರಋಣಿಯಾಗಿದ್ದೇವೆ. ಅನೇಕ ಹಿಂದೂಗಳ ಜೊತೆ ಸಾಕಷ್ಟು ಸಂಖ್ಯೆಯ ಸಿಕ್ಖರನ್ನು ಅಫಘಾನಿಸ್ತಾನದಿಂದ ವಾಪಸ್ಸು ಕರೆತರಲಾಗಿದೆ,’ ಎಂದು ಅವರು ಹೇಳಿದರು.
ಇದನ್ನೂ ಓದಿ: ಕಾಬೂಲ್ನಿಂದ ಭಾರತವನ್ನು ತಲುಪಿದ ಪುಟ್ಟ ಮಕ್ಕಳು ಖುಷಿಯಿಂದ ಮುದ್ದಾಡುತ್ತಿರುವ ದೃಶ್ಯ; ಹೃದಯಸ್ಪರ್ಶಿ ವಿಡಿಯೋ ವೈರಲ್