ಬೆಳಗಾವಿ ಸೇರಿದಂತೆ ಕರ್ನಾಟಕದ ಕೆಲ ಜಿಲ್ಲೆಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂದು ಘೋಷಣೆ ಕೂಗಿದ ಎಂಇಎಸ್ ಪುಂಡರು

| Updated By: Digi Tech Desk

Updated on: Jun 28, 2023 | 3:59 PM

ಕೇದಾರನಾಥದಲ್ಲಿ ಹೋಗಿ ನಾಡದ್ರೋಹಿ ಘೋಷಣೆ ಕೂಗುವ ಮೂಲಕ ಎಂಇಎಸ್ ಪುಂಡರು ಉದ್ಧಟತನ ‌ಮೆರೆದಿದ್ದಾರೆ. ಕರ್ನಾಟಕದ ಕಾರವಾರ, ನಿಪ್ಪಾಣಿ ಬೀದರ್, ಬೆಳಗಾವಿ, ಭಾಲ್ಕಿ‌ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಘೋಷಣೆ ಕೂಗಿದ್ದಾರೆ.

ಬೆಳಗಾವಿ: ಎಂಇಎಸ್(MES) ಪುಂಡರ ಹಾವಳಿ ಇದೆ ಮೊದಲಲ್ಲ, ಮೊದಲಿನಿಂದಲೂ ನಡೆಯುತ್ತಾ ಬಂದಿದೆ. ಅದಕ್ಕೆ ತಕ್ಕ ಪ್ರತಿಕ್ರಿಯೆ ಕೂಡ ಕನ್ನಡಿಗರು ಕೊಡುತ್ತಾ ಬಂದಿದ್ದಾರೆ. ಇದೀಗ ಮತ್ತೆ ಗಡಿ ಕ್ಯಾತೆ ತೆಗೆದಿದ್ದಾರೆ. ಕೇದಾರನಾಥದಲ್ಲಿ ಹೋಗಿ ನಾಡದ್ರೋಹಿ ಘೋಷಣೆ ಕೂಗುವ ಮೂಲಕ ಉದ್ಧಟತನ ‌ಮೆರೆದಿದ್ದಾರೆ. ಕರ್ನಾಟಕದ ಕಾರವಾರ, ನಿಪ್ಪಾಣಿ ಬೀದರ್, ಬೆಳಗಾವಿ, ಭಾಲ್ಕಿ‌ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಘೋಷಣೆ ಕೂಗಿದ್ದಾರೆ. ಹೌದು ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದ ಯುವಕರು, ಕೇದಾರನಾಥ ‌ಪ್ರವಾಸ ಕೈಗೊಂಡಿದ್ದರು. ಅದರಲ್ಲಿ ಐವರು ಯುವಕರಿಂದ ಭಗವಾನ್​ ಧ್ವಜ ಹಿಡಿದು ನಾಡದ್ರೋಹಿ ‌ಘೋಷಣೆ ಕೂಗಿದ್ದಾರೆ. ಅಷ್ಟೇ ಅಲ್ಲದೇ ಆ ವಿಡಿಯೋವನ್ನ ಎಂಇಎಸ್ ಯುವ ಘಟಕದ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:15 am, Wed, 28 June 23