ಗ್ಯಾಸ್ ಸಿಲಿಂಡರ್ ಅಭಾವ ಬಗ್ಗೆ ಭಕ್ತರಿಗೆ ಸಿದ್ಧಗಂಗಾಶ್ರೀ ಮಹತ್ವದ ಕರೆ
ಸಿಲಿಂಡರ್ ಅಭಾವದ ಕುರಿತು ಪ್ರತಿಕ್ರಿಯಿಸಿದ ಸಿದ್ದಲಿಂಗ ಮಹಾಸ್ವಾಮೀಜಿ, ಸಂಪನ್ಮೂಲಗಳ ಮಿತ ಬಳಕೆ ಮತ್ತು ಪರ್ಯಾಯಗಳ ಅವಶ್ಯಕತೆಯನ್ನು ಒತ್ತಿ ಹೇಳಿದರು. ಮಠದಲ್ಲಿ ಸೌದೆ, ಉಬ್ಬುಲ ಮತ್ತು ಅಡಿಕೆ ಸಿಪ್ಪೆಯನ್ನು ಇಂಧನವಾಗಿ ಬಳಸುವ ಪದ್ಧತಿ ಬಗ್ಗೆ ತಿಳಿಸಿದರು. ಸಂಪನ್ಮೂಲಗಳನ್ನು ಸಮರ್ಥವಾಗಿ ನಿರ್ವಹಿಸುವ ಸಂದೇಶ ನೀಡಿದರು.
ತುಮಕೂರು, ಮಾರ್ಚ್ 29: ನಿಮ್ಮ ಬಳಿಯಿರುವ ಗ್ಯಾಸ್ನ್ನು ವ್ಯರ್ಥ ಮಾಡಬೇಡಿ, 5 ಬಾರಿ ಚಿಂತಿಸಿ ಬಳಸಿ ಎಂದು ಸಿದ್ದಲಿಂಗಶ್ರೀ ಮನವಿ ಮಾಡಿದರು. ನಗರದ ಸಿದ್ಧಗಂಗಾ ಮಠದಲ್ಲಿ ನಡೆದ ಸುದ್ದಿಗೋಷ್ಠಿ ಮಾತನಾಡಿದ ಅವರು, ವಿದ್ಯುತ್, ನೀರು, ಎಲ್ಪಿಜಿ, ತೈಲ ಅತ್ಯಂತ ಅಮೂಲ್ಯವಾದುದು. ನಮಗೆ ಸಿಕ್ಕಿದ್ದು ಮತ್ತೊಬ್ಬರಿಗೂ ಸಿಗಲಿ ಎಂದು ಉದಾರತೆ ಇರಲಿ. ಪ್ರತಿಯೊಂದು ವಸ್ತು ಬಳಸುವಾಗ 5 ಬಾರಿ ಯೋಚಿಸಿ ಬಳಸಿ. ನಮ್ಮ ಬಳಿ ಅಧಿಕವಾಗಿದ್ದರೂ ಮುಂದಿನ ದಿನಗಳಲ್ಲಿ ಕೊರತೆಯಾಗಬಹುದು. ಸಿದ್ಧಗಂಗಾ ಮಠದಲ್ಲಿ ಸೌದೆ, ಅಡಕೆ ಸಿಪ್ಪೆಯನ್ನು ಇಂಧನವಾಗಿ ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗೋಬರ್ ಗ್ಯಾಸ್ ಘಟಕ ಅಳವಡಿಸುವ ಚಿಂತನೆಯಿದೆ. ಯುದ್ಧದಂತಹ ಅನಿಶ್ಚಿತ ಪರಿಸ್ಥಿತಿಯಲ್ಲಿ ಲಭ್ಯವಿರುವ ಸಂಪನ್ಮೂಲ ಮಿತವಾಗಿ ಬಳಸುವ ಮೂಲಕ ಸಂಕಷ್ಟ ಎದುರಿಸಲು ನಾವೆಲ್ಲರೂ ಸಿದ್ಧರಿರಬೇಕು ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
