ಆಗ್ರಾ ಬಳಿ ಮಿಗ್-29 ಯುದ್ಧ ವಿಮಾನ ಪತನ; ಪೈಲಟ್‌ಗಳು ಪಾರು

ಆಗ್ರಾ ಬಳಿ ಮಿಗ್-29 ಯುದ್ಧ ವಿಮಾನ ಪತನ; ಪೈಲಟ್‌ಗಳು ಪಾರು

ಸುಷ್ಮಾ ಚಕ್ರೆ
|

Updated on: Nov 04, 2024 | 6:28 PM

ಈ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಮಿಗ್-29 ಫೈಟರ್ ಜೆಟ್ ಬೆಂಕಿಯ ಜ್ವಾಲೆಯಲ್ಲಿ ಮುಳುಗಿದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡವು. ಫೈಟರ್ ಜೆಟ್ ನೆಲಕ್ಕೆ ಅಪ್ಪಳಿಸಿದ ಕೂಡಲೇ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿತು. ಪೈಲಟ್ ಸೇರಿದಂತೆ ಇಬ್ಬರು ಜೆಟ್​ನಿಂದ ಹಾರುವ ಮೂಲಕ ತಮ್ಮ ಪ್ರಾಣವನ್ನು ಉಳಿಸಿಕೊಂಡರು.

ಆಗ್ರಾ: ಉತ್ತರ ಪ್ರದೇಶದ ಆಗ್ರಾ ಬಳಿ ಇಂದು (ಸೋಮವಾರ) ಮಿಗ್-29 ಯುದ್ಧ ವಿಮಾನ ಪತನಗೊಂಡಿದೆ. ಇಬ್ಬರು ಪೈಲಟ್‌ಗಳು ಸುರಕ್ಷಿತವಾಗಿ ವಿಮಾನದಿಂದ ಹೊರಬಿದ್ದಿದ್ದಾರೆ. ಇದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಯುದ್ಧ ವಿಮಾನವು ಪಂಜಾಬ್‌ನ ಆದಂಪುರದಿಂದ ಟೇಕ್ ಆಫ್ ಆಗಿದ್ದು, ಆಗ್ರಾಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಫೈಟರ್ ಜೆಟ್ ನೆಲಕ್ಕೆ ಅಪ್ಪಳಿಸಿದ ಕೂಡಲೇ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿತು. ಪೈಲಟ್ ಸೇರಿದಂತೆ ಇಬ್ಬರು ಜೆಟ್​ನಿಂದ ಹಾರುವ ಮೂಲಕ ತಮ್ಮ ಪ್ರಾಣವನ್ನು ಉಳಿಸಿಕೊಂಡರು. ಇಬ್ಬರೂ ಪೈಲಟ್‌ಗಳು ಅಪಘಾತದ ಸ್ಥಳದಿಂದ 2 ಕಿಲೋಮೀಟರ್ ದೂರದಲ್ಲಿ ತಮ್ಮನ್ನು ತಾವು ಹೊರಹಾಕಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ