Dil Pasand: ಡಾರ್ಲಿಂಗ್ ಕೃಷ್ಣ ಜತೆ ನಿಶ್ವಿಕಾ ಜೋಡಿ ಆದ್ರೆ ಮಿಲನಾಗೆ ಖುಷಿ ಯಾಕೆ? ವೇದಿಕೆಯಲ್ಲೇ ಉತ್ತರ ನೀಡಿದ ನಟಿ
Milana Nagaraj | Darling Krishna: ನಿಶ್ವಿಕಾ ಮತ್ತು ಕೃಷ್ಣ ಅವರನ್ನು ಜೋಡಿಯಾಗಿ ನೋಡಬೇಕು ಎಂಬುದು ಮಿಲನಾ ಆಸೆ. ಆ ಆಸೆ ಈಡೇರಿದ್ದಕ್ಕೆ ಮಿಲನಾ ಖುಷಿ ಆಗಿದ್ದಾರೆ. ‘ದಿಲ್ ಪಸಂದ್’ ಚಿತ್ರದ ಪ್ರೀ-ರಿಲೀಸ್ ಇವೆಂಟ್ನಲ್ಲಿ ಈ ಬಗ್ಗೆ ಅವರು ಮಾತಾಡಿದ್ದಾರೆ.
ನಟ ಡಾರ್ಲಿಂಗ್ ಕೃಷ್ಣ (Darling Krishna) ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಅವರು ನಟಿಸಿದ ಚಿತ್ರಗಳಲ್ಲಿ ಇಬ್ಬರು ಹೀರೋಯಿನ್ ಇರೋದು ಕಾಮನ್ ಎಂಬಂತಾಗಿದೆ. ನವೆಂಬರ್ 11ರಂದು ರಿಲೀಸ್ ಆಗಲಿರುವ ‘ದಿಲ್ ಪಸಂದ್’ ಚಿತ್ರದಲ್ಲೂ ಅದು ಮುಂದುವರಿದಿದೆ. ಈ ಚಿತ್ರದಲ್ಲಿ ಕೃಷ್ಣ ಜೊತೆ ನಿಶ್ವಿಕಾ ನಾಯ್ಡು (Nishvika Naidu) ಮತ್ತು ಮೇಘಾ ಶೆಟ್ಟಿ ನಟಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ಮತ್ತು ನಿಶ್ವಿಕಾ ನಾಯ್ಡು ಜೋಡಿ ಆಗಬೇಕು ಎಂಬುದು ಮಿಲನಾ ನಾಗರಾಜ್ (Milana Nagaraj) ಅವರ ಆಸೆ ಆಗಿತ್ತು. ಆ ಆಸೆ ಈಡೇರಿದ್ದಕ್ಕೆ ಮಿಲನಾ ಖುಷಿ ಆಗಿದ್ದಾರೆ. ಈ ಬಗ್ಗೆ ಅವರು ‘ದಿಲ್ ಪಸಂದ್’ ಪ್ರೀ-ರಿಲೀಸ್ ಇವೆಂಟ್ನಲ್ಲಿ ಮಾತಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.