‘ನಿಧಿಮಾ’ಗಿಂತಲೂ ಹೆಚ್ಚಿನ ನಟನೆ ಬೇಡುವ ಪಾತ್ರ ಕೌಸಲ್ಯ ಸುಪ್ರಜಾ ರಾಮ ಸಿನಿಮಾದ್ದು: ಮಿಲನಾ

|

Updated on: Jul 29, 2023 | 10:41 PM

Kausalya Supraja Rama: 'ಲವ್ ಮಾಕ್ಟೆಲ್'ನ ಜನಪ್ರಿಯ ಪಾತ್ರ ನಿಧಿಮಾಗಿಂತಲೂ ಕ್ಲಿಷ್ಟಕರವಾದ ಪಾತ್ರವನ್ನು 'ಕೌಸಲ್ಯ ಸುಪ್ರಜಾ ರಾಮ' ಸಿನಿಮಾದಲ್ಲಿ ನಿರ್ವಹಿಸಿರುವುದಾಗಿ ಮಿಲನಾ ಹೇಳಿದ್ದಾರೆ.

ಲವ್ ಮಾಕ್ಟೆಲ್‘ (Love Mocktail) ಸಿನಿಮಾದ ನಿಧಿಮಾ ಪಾತ್ರದಲ್ಲಿ ಕನ್ನಡ ಸಿನಿ ಪ್ರೇಕ್ಷಕರ ಎದೆಯಲ್ಲಿ ನೆಲೆ ನಿಂತಿರುವ ಮಿಲನಾ ನಾಗರಾಜ್ (Milana Nagaraj), ಇದೀಗ ‘ಕೌಸಲ್ಯ ಸುಪ್ರಜಾ ರಾಮ‘ (Kausalya Supraja Rama) ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಗ್ಗೆ ಮಾತನಾಡಿರುವ ಮಿಲನಾ ನಾಗರಾಜ್, ‘ನಿಧಿಮಾ’ ಪಾತ್ರಕ್ಕಿಂತಲೂ ಹೆಚ್ಚು ನಟನೆ ಬೇಡುವ ಪಾತ್ರ ಇದಾಗಿತ್ತು, ಕೃಷ್ಣ ಹಾಗೂ ಶಶಾಂಕ್ ಅವರೇ ಬಲವಂತ ಮಾಡಿ ಒಪ್ಪಿಸಿ ನಟಿಸುವಂತೆ ಮಾಡಿದರು ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ