ಫಿಟ್ನೆಸ್ ಫ್ರೀಕ್​ಗಳಾಗಿರುವ ಮಿಲಿಂದ್ ಸೋಮನ್ ಮತ್ತು ಅಂಕಿತಾ ಕೊನ್ವರ್ ದಂಪತಿಗಳಾಗಿಯೂ ಗಮನ ಸೆಳೆಯುತ್ತಿದ್ದಾರೆ!

ಫಿಟ್ನೆಸ್ ಫ್ರೀಕ್​ಗಳಾಗಿರುವ ಮಿಲಿಂದ್ ಸೋಮನ್ ಮತ್ತು ಅಂಕಿತಾ ಕೊನ್ವರ್ ದಂಪತಿಗಳಾಗಿಯೂ ಗಮನ ಸೆಳೆಯುತ್ತಿದ್ದಾರೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Sep 03, 2021 | 8:32 PM

ಆಗಸ್ಟ್ 30 ರಂದು 30ನೇ ಹುಟ್ಟುಹಬ್ಬ ಆಚರಿಸಿಕೊಂಡ ಅಂಕಿತಾ ತನ್ನ ಫ್ಯಾಮಿಲಿಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿ ಕೆಲ ಚಿತ್ರಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ

ಅಂಕಿತಾ ಕೊನ್ವರ್ ಅಂದಾಕ್ಷಣ ಯಾರೀಕೆ ಅಂತ ಕೂಡಲೇ ಗೊತ್ತಾಗಲಾರದು. ಸೂಪರ್ ಮಾಡೆಲ್, ಎಲ್ಲ ಮ್ಯಾರಥಾನ್ ಓಟಗಳಲ್ಲಿ ಭಾಗವಹಿಸುವ ಫಿಟ್ನೆಸ್ ಫ್ರೀಕ್, ನಟ ಮಿಲಿಂದ ಸೋಮನ್ ಅವರ ಪತ್ನಿ ಎಂದರೆ ಗೊತ್ತಾಗಿಬಿಡುತ್ತೆ, ಹೌದು ತಾನೆ? ಅಂದಹಾಗೆ, ಅಂಕಿತಾಗೆ ಈಗ 30 ಪ್ರಾಯವಾದರೆ ಮಿಲಿಂದ್ (55) ಹೆಚ್ಚು ಕಡಿಮೆ ಅಕೆಯ ಎರಡು ಪಟ್ಟು ವಯಸ್ಸಾಗಿರುವವರು. ಆದರೆ, ಎಲ್ಲೆಡೆ ಹೇಳುತ್ತಾರಲ್ಲ, ಪ್ರೇಮಕ್ಕೆ ಕಣ್ಣಿಲ್ಲ ಅಂತ; ಹಾಗೆಯೇ ಪ್ರೇಮಕ್ಕೆ ವಯಸ್ಸಿನ ಅಂತರದ ಬಗ್ಗೆಯೂ ಪರಿವೆಯಿಲ್ಲ. ಇನ್ನೊಂದು ವಿಷಯವೇನು ಗೊತ್ತಾ? ಹೈ ಸೊಸೈಟಿಯವರು ವಯಸ್ಸಿಗೆ ಮಹತ್ವ ನೀಡುವುದಿಲ್ಲ ಮಾರಾಯ್ರೇ.

ಓಕೆ, ಮಿಲಿಂದ್ ಬಗ್ಗೆ ಎಲ್ಲರಿಗೂ ಗೊತ್ತಿರುವುದರಿಂದ ಅಂಕಿತಾರ ಅವರನ್ನು ಕುರಿತು ತಿಳಿದುಕೊಳ್ಳವ ಅಗತ್ಯವಿದೆ. ಅಸ್ಸಾಮಿನ ಅಂಕಿತಾ ಸಹ ಫಿಟ್ನೆಸ್ ಫ್ರೀಕ್. ಮ್ಯಾರಥಾನ್ ಗಳಲ್ಲಿ ತನ್ನ ಪತಿಯೊಂದಿಗೆ ಭಾಗವಹಿಸುತ್ತಾರೆ. ಅಂದಹಾಗೆ, ಈಕೆ ಮೊದಲು ಏರ್ ಏಷ್ಯಾ ಏರ್ಲೈನ್ಸ್ನಲ್ಲಿ ಗಗನ ಸಖಿಯಾಗಿ ಕೆಲಸ ಮಾಡುತ್ತಿದ್ದರು. ನೋಡಲು ಸುಂದರಿ ಮತ್ತು ಆಷ್ಟೇ ಆಕರ್ಷಕ ಮೈಮಾಟ ಅಂಕಿತಾಳದ್ದು. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನ್ನುವ ಸೌಂದರ್ಯ ಮತ್ತು ದೇಹಸಿರಿ. ಮಿಲಿಂದ್ ಆಕರ್ಷಣೆಗಳಗಾಗಿದ್ದರಲ್ಲಿ ಆಶ್ಚರ್ಯವಿಲ್ಲ. ಕೆಲ ಉತ್ಪಾದನೆಗಳಿಗೆ ಈಕೆ ರೂಪದರ್ಶಿಯಾಗಿಯೂ ಕಾಣಿಸಿಕೊಂಡಿದ್ದಾರೆ.

ಆಗಸ್ಟ್ 30 ರಂದು 30ನೇ ಹುಟ್ಟುಹಬ್ಬ ಆಚರಿಸಿಕೊಂಡ ಅಂಕಿತಾ ತನ್ನ ಫ್ಯಾಮಿಲಿಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿ ಕೆಲ ಚಿತ್ರಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ತನ್ನಕ್ಕನ ಮಗುವಿನೊಂದಿಗೆ ಈಜುಕೊಳವೊಂದರಲ್ಲಿನ ಈ ಚಿತ್ರ ಸುಂದರವಾಗಿದೆ.

 

View this post on Instagram

 

A post shared by Ankita Konwar (@ankita_earthy)

ಇದೇ ಸಂದರ್ಭದಲ್ಲಿ ಮಿಲಿಂದ್ ಆಕೆಗೆ ಹುಟ್ಟುಹಬ್ಬದ ಶುಭಾಷಯಗಳನ್ನು ಹೇಳುತ್ತಾ ತಮ್ಮ ಇನ್​ಸ್ಟಾ ನಲ್ಲಿ ಏನೆಲ್ಲ ಬರೆದುಕೊಂಡಿದ್ದಾರೆ. ‘ಹ್ಯಾಪಿ ಬರ್ತ್​ಡೇ ಶೋನೂ!!! 30 ನೇ ಹುಟ್ಟು ಹಬ್ಬದಂದು ನಾವು ಯೋಚಿಸಿದ್ದ ಪ್ಲಾನ್ ಪ್ರಕಾರ ನೀನು ತೀವ್ರ ಉಷ್ಣಾಂಶ ಮತ್ತು ತೇವಾಂಶದ ಹೊರತಾಗಿಯೂ 30 ಕಿಮೀ ಓಟದಲ್ಲಿ ಬಾಗವಹಿಸಿ 30 ಸೂರ್ಯ ನಮಸ್ಕಾರಗಳನ್ನು ಮಾಡಿದ ಬಗ್ಗೆ ನನಗೆ ಬಹಳ ಹೆಮ್ಮೆಯೆನಿಸುತ್ತಿದೆ,’ ಎಂದು ಮಿಲಿಂದ್ ಹೇಳಿದ್ದಾರೆ.

ಈ ಸುಂದರ ಜೋಡಿಗೆ ನಾವೂ ಶುಭ ಹಾರೈಸೋಣ.

ಇದನ್ನೂ ಓದಿ:  Viral Video: ಒಳ ಉಡುಪಿನಲ್ಲಿ ರೈಲಿನೊಳಗೆ ಓಡಾಡಿದ ಶಾಸಕನ ವಿಡಿಯೋ ವೈರಲ್; ಹೊಟ್ಟೆ ಕೆಟ್ಟಿತ್ತು ಎಂದ ಗೋಪಾಲ್ ಮಂಡಲ್

Published on: Sep 03, 2021 08:19 PM