ಬಿಸಿಲು ನಾಡಿನ ಮಿಂಚೇರಿ ನೀಡ್ತಿದೆ ಮಲೆನಾಡಿನ ಅನುಭವ, ಪ್ರಕೃತಿ ಸೌಂದರ್ಯಕ್ಕೆ ಪ್ರವಾಸಿಗರು ಮಂತ್ರಮುಗ್ಧ

| Updated By: ಸಾಧು ಶ್ರೀನಾಥ್​

Updated on: Oct 14, 2020 | 10:46 AM

ಬಳ್ಳಾರಿ: ಗಣಿನಾಡು ಬಳ್ಳಾರಿ ಅಂದ್ರೆ ಥಟ್ ಅಂತ ನೆನಪಾಗೋದು ಗಣಿ ಧೂಳು. ಅಲ್ಲಿನ ಗುಡ್ಡಗಾಡು ಪ್ರದೇಶದಲ್ಲಿ ಜೆಸಿಬಿ, ಲಾರಿಗಳು ಸದ್ದು ಮಾಡೋದನ್ನ ನೀವು ನೋಡಿದ್ದೀರಾ. ಆದ್ರೆ ಈಗ ಅಲ್ಲಿನ ಆ ಅರಣ್ಯ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿದೆ. ಮಲೆನಾಡಿನಂತೆ ಗಣಿನಾಡಾಗಿದೆ. ಗಣಿನಾಡು ಬಳ್ಳಾರಿಯಲ್ಲಿ ಮಲೆನಾಡಿನ ಸೌಂದರ್ಯ ಮನೆ ಮಾಡಿದೆ. ಬಳ್ಳಾರಿ ತಾಲೂಕಿನಿಂದ 18 ಕಿಮೀ ದೂರದಲ್ಲಿರುವ ಮಿಂಚೇರಿ ಅರಣ್ಯ ಪ್ರದೇಶ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. ಈ ವರ್ಷ ಹೆಚ್ಚು ಮಳೆಯಾಗಿದ್ದರಿಂದ ಮಿಂಚೇರಿ ಅರಣ್ಯ ಪ್ರದೇಶ ಈಗ ಪ್ರವಾಸಿಗರನ್ನ […]

ಬಿಸಿಲು ನಾಡಿನ ಮಿಂಚೇರಿ ನೀಡ್ತಿದೆ ಮಲೆನಾಡಿನ ಅನುಭವ, ಪ್ರಕೃತಿ ಸೌಂದರ್ಯಕ್ಕೆ ಪ್ರವಾಸಿಗರು ಮಂತ್ರಮುಗ್ಧ
Follow us on

ಬಳ್ಳಾರಿ: ಗಣಿನಾಡು ಬಳ್ಳಾರಿ ಅಂದ್ರೆ ಥಟ್ ಅಂತ ನೆನಪಾಗೋದು ಗಣಿ ಧೂಳು. ಅಲ್ಲಿನ ಗುಡ್ಡಗಾಡು ಪ್ರದೇಶದಲ್ಲಿ ಜೆಸಿಬಿ, ಲಾರಿಗಳು ಸದ್ದು ಮಾಡೋದನ್ನ ನೀವು ನೋಡಿದ್ದೀರಾ. ಆದ್ರೆ ಈಗ ಅಲ್ಲಿನ ಆ ಅರಣ್ಯ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿದೆ. ಮಲೆನಾಡಿನಂತೆ ಗಣಿನಾಡಾಗಿದೆ.

ಗಣಿನಾಡು ಬಳ್ಳಾರಿಯಲ್ಲಿ ಮಲೆನಾಡಿನ ಸೌಂದರ್ಯ ಮನೆ ಮಾಡಿದೆ. ಬಳ್ಳಾರಿ ತಾಲೂಕಿನಿಂದ 18 ಕಿಮೀ ದೂರದಲ್ಲಿರುವ ಮಿಂಚೇರಿ ಅರಣ್ಯ ಪ್ರದೇಶ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. ಈ ವರ್ಷ ಹೆಚ್ಚು ಮಳೆಯಾಗಿದ್ದರಿಂದ ಮಿಂಚೇರಿ ಅರಣ್ಯ ಪ್ರದೇಶ ಈಗ ಪ್ರವಾಸಿಗರನ್ನ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಸುಮಾರು 2625 ಎಕರೆ ವಿಸ್ತೀರ್ಣದ ಈ ಅರಣ್ಯ ಪ್ರದೇಶದಲ್ಲಿ ಬೆಟ್ಟಗುಡ್ಡಗಳು, ಇಲ್ಲಿನ ಪ್ರಕೃತಿ ಸೌಂದರ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ.

ಬ್ರಿಟಿಷ್ ಕಾಲದ ಜಡ್ಜ್​ ಮನೆ ಪ್ರವಾಸಿಗರಿಗೆ ಅಚ್ಚುಮೆಚ್ಚು 
ದಿನದಿಂದ ದಿನಕ್ಕೆ ಹೆಚ್ಚು ಪ್ರಸಿದ್ಧಿ ಪಡೆಯುತ್ತಿರುವ ಮಿಂಚೇರಿ ಅರಣ್ಯ ಪ್ರದೇಶದ ಸೌಂದರ್ಯ ವೀಕ್ಷಿಸಲು ನಿತ್ಯ ಸಾವಿರಾರು ಜನರು ಬರುತ್ತಿದ್ದಾರೆ. ಅದರಲ್ಲೂ ಈ ಅರಣ್ಯ ಪ್ರದೇಶದಲ್ಲಿ ಬ್ರಿಟಿಷ್ ಕಾಲದಲ್ಲಿ ನಿರ್ಮಾಣಗೊಂಡಿದ್ದ ನ್ಯಾಯಾಧೀಶರ ವಾಸಸ್ಥಳದ ಬಂಗಲೆಯೂ ಕೂಡ ಪ್ರವಾಸಿಗರಿಗೆ ಹೊಸ ಅನುಭವ ನೀಡುತ್ತಿದೆ. ಮಲೆನಾಡಿನ ಅನುಭವ ನೀಡುತ್ತಿರುವ ಬಿಸಿಲನಾಡಿನ ಈ ಪ್ರದೇಶವನ್ನ ಅಭಿವೃದ್ಧಿ ಮಾಡಬೇಕು ಅನ್ನೋದು ಪ್ರವಾಸಿಗರ ಮಾತು.

ಪ್ರತಿ ವರ್ಷ ಸಮರ್ಪಕ ಮಳೆ ಇಲ್ಲದೇ ಇಲ್ಲಿನ ಗುಡ್ಡಬೆಟ್ಟಗಳು, ಇಲ್ಲಿನ ಪರಿಸರ ಬೆಂದು ಹೋಗುತ್ತಿತ್ತು. ಆದ್ರೆ ಈ ವರ್ಷ ನಿರಂತರ ಮಳೆಯಿಂದ ಮಿಂಚೇರಿ ಅರಣ್ಯ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಾ ಪ್ರವಾಸಿಗರನ್ನ ಕೈಬಿಸಿ ಕರೆಯುತ್ತಿದೆ.

Published On - 2:51 pm, Tue, 13 October 20