ಎಲ್ಲದಕ್ಕೂ ಸಿದ್ಧರಾಗಿ, ಖಾಸಗಿ ಕಾರಿನಲ್ಲಿ ಸಿಎಂ ಮನೆಗೆ ಬಂದ ರಾಮುಲು

ಎಲ್ಲದಕ್ಕೂ ಸಿದ್ಧರಾಗಿ, ಖಾಸಗಿ ಕಾರಿನಲ್ಲಿ ಸಿಎಂ ಮನೆಗೆ ಬಂದ ರಾಮುಲು

ಬೆಂಗಳೂರು: ಸಚಿವ ಬಿ. ಶ್ರೀರಾಮುಲು ಖಾತೆ ಬದಲಾವಣೆ ವಿಚಾರಕ್ಕೆ ಸಂಬಂಧಿಸಿ ಸಿಎಂ ಬಿಎಸ್​ವೈ ಮತ್ತು ರಾಮುಲು ಮಹತ್ವದ ಭೇಟಿಗೆ ಕೌಂಟ್​ಡೌನ್ ಶುರುವಾಗಿದೆ. ಚಿಕ್ಕಜಾಲ ಬಳಿಯ ಫಾರ್ಮ್​ಹೌಸ್​ನಿಂದ ನೇರವಾಗಿ ಸಿಎಂ ನಿವಾಸಕ್ಕೆ ರಾಮುಲು ಹೊರಟುಬಂದಿದ್ದಾರೆ. ಇನ್ನೂ ಗರಂ ಆಗಿರೋ ಶ್ರೀರಾಮುಲು ಅವರನ್ನ ಮಾತುಕತೆ ನಡೆಸಿ ಮನವೊಲಿಕೆ ಮಾಡ್ತಾರಾ ಸಿಎಂ ಎಂದು ಕಾದು ನೋಡಬೇಕಿದೆ. ಇನ್ನು ಸಿಎಂ ಭೇಟಿ ವೇಳೆ 2 ಖಾತೆ ಬೇಕು ಅಂತಾ ರಾಮುಲು ಪಟ್ಟು ಹಿಡೀತಾರಾ? ಅಥವಾ ಸಿಎಂ ಬಿಎಸ್​ವೈ ಒಂದೇ ಖಾತೆ ಕೊಟ್ಟು ಮುಂದೆ […]

Ayesha Banu

| Edited By: sadhu srinath

Oct 14, 2020 | 10:49 AM

ಬೆಂಗಳೂರು: ಸಚಿವ ಬಿ. ಶ್ರೀರಾಮುಲು ಖಾತೆ ಬದಲಾವಣೆ ವಿಚಾರಕ್ಕೆ ಸಂಬಂಧಿಸಿ ಸಿಎಂ ಬಿಎಸ್​ವೈ ಮತ್ತು ರಾಮುಲು ಮಹತ್ವದ ಭೇಟಿಗೆ ಕೌಂಟ್​ಡೌನ್ ಶುರುವಾಗಿದೆ. ಚಿಕ್ಕಜಾಲ ಬಳಿಯ ಫಾರ್ಮ್​ಹೌಸ್​ನಿಂದ ನೇರವಾಗಿ ಸಿಎಂ ನಿವಾಸಕ್ಕೆ ರಾಮುಲು ಹೊರಟುಬಂದಿದ್ದಾರೆ. ಇನ್ನೂ ಗರಂ ಆಗಿರೋ ಶ್ರೀರಾಮುಲು ಅವರನ್ನ ಮಾತುಕತೆ ನಡೆಸಿ ಮನವೊಲಿಕೆ ಮಾಡ್ತಾರಾ ಸಿಎಂ ಎಂದು ಕಾದು ನೋಡಬೇಕಿದೆ.

ಇನ್ನು ಸಿಎಂ ಭೇಟಿ ವೇಳೆ 2 ಖಾತೆ ಬೇಕು ಅಂತಾ ರಾಮುಲು ಪಟ್ಟು ಹಿಡೀತಾರಾ? ಅಥವಾ ಸಿಎಂ ಬಿಎಸ್​ವೈ ಒಂದೇ ಖಾತೆ ಕೊಟ್ಟು ಮುಂದೆ ಒಳ್ಳೇದಾಗುತ್ತೆ ಅಂತಾರಾ? ಏನು ಚರ್ಚೆಗಳಾಗಬಹುದು ಎಂಬುವುದರ ಬಗ್ಗೆ ರಾಜ್ಯ ರಾಜಕೀಯದಲ್ಲಿ ಕುತೂಹಲ ಉಂಟಾಗಿದೆ.

ಸುಧಾಕರ್ ಜೊತೆ ಸಂಧಾನ? ಇದೇ ಸಂದರ್ಭದಲ್ಲಿ ಸಚಿವ ಸುಧಾಕರ್ ಕೂಡ ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಇದರೊಂದಿಗೆ ರಾಮುಲು-ಸುಧಾಕರ್​ ಮಧ್ಯೆ ಸಂಧಾನ ನಡೆಸುತ್ತಾರಾ ಸಿಎಂ ಯಡಿಯೂರಪ್ಪ ಎಂಬ ಉತೂಹಲವೂ ಮೂಡಿದೆ.

Follow us on

Related Stories

Most Read Stories

Click on your DTH Provider to Add TV9 Kannada