AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿಲು ನಾಡಿನ ಮಿಂಚೇರಿ ನೀಡ್ತಿದೆ ಮಲೆನಾಡಿನ ಅನುಭವ, ಪ್ರಕೃತಿ ಸೌಂದರ್ಯಕ್ಕೆ ಪ್ರವಾಸಿಗರು ಮಂತ್ರಮುಗ್ಧ

ಬಳ್ಳಾರಿ: ಗಣಿನಾಡು ಬಳ್ಳಾರಿ ಅಂದ್ರೆ ಥಟ್ ಅಂತ ನೆನಪಾಗೋದು ಗಣಿ ಧೂಳು. ಅಲ್ಲಿನ ಗುಡ್ಡಗಾಡು ಪ್ರದೇಶದಲ್ಲಿ ಜೆಸಿಬಿ, ಲಾರಿಗಳು ಸದ್ದು ಮಾಡೋದನ್ನ ನೀವು ನೋಡಿದ್ದೀರಾ. ಆದ್ರೆ ಈಗ ಅಲ್ಲಿನ ಆ ಅರಣ್ಯ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿದೆ. ಮಲೆನಾಡಿನಂತೆ ಗಣಿನಾಡಾಗಿದೆ. ಗಣಿನಾಡು ಬಳ್ಳಾರಿಯಲ್ಲಿ ಮಲೆನಾಡಿನ ಸೌಂದರ್ಯ ಮನೆ ಮಾಡಿದೆ. ಬಳ್ಳಾರಿ ತಾಲೂಕಿನಿಂದ 18 ಕಿಮೀ ದೂರದಲ್ಲಿರುವ ಮಿಂಚೇರಿ ಅರಣ್ಯ ಪ್ರದೇಶ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. ಈ ವರ್ಷ ಹೆಚ್ಚು ಮಳೆಯಾಗಿದ್ದರಿಂದ ಮಿಂಚೇರಿ ಅರಣ್ಯ ಪ್ರದೇಶ ಈಗ ಪ್ರವಾಸಿಗರನ್ನ […]

ಬಿಸಿಲು ನಾಡಿನ ಮಿಂಚೇರಿ ನೀಡ್ತಿದೆ ಮಲೆನಾಡಿನ ಅನುಭವ, ಪ್ರಕೃತಿ ಸೌಂದರ್ಯಕ್ಕೆ ಪ್ರವಾಸಿಗರು ಮಂತ್ರಮುಗ್ಧ
ಆಯೇಷಾ ಬಾನು
ಆಯೇಷಾ ಬಾನು| Edited By: ಸಾಧು ಶ್ರೀನಾಥ್​|

Updated on:Oct 14, 2020 | 10:46 AM

Share

ಬಳ್ಳಾರಿ: ಗಣಿನಾಡು ಬಳ್ಳಾರಿ ಅಂದ್ರೆ ಥಟ್ ಅಂತ ನೆನಪಾಗೋದು ಗಣಿ ಧೂಳು. ಅಲ್ಲಿನ ಗುಡ್ಡಗಾಡು ಪ್ರದೇಶದಲ್ಲಿ ಜೆಸಿಬಿ, ಲಾರಿಗಳು ಸದ್ದು ಮಾಡೋದನ್ನ ನೀವು ನೋಡಿದ್ದೀರಾ. ಆದ್ರೆ ಈಗ ಅಲ್ಲಿನ ಆ ಅರಣ್ಯ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿದೆ. ಮಲೆನಾಡಿನಂತೆ ಗಣಿನಾಡಾಗಿದೆ.

ಗಣಿನಾಡು ಬಳ್ಳಾರಿಯಲ್ಲಿ ಮಲೆನಾಡಿನ ಸೌಂದರ್ಯ ಮನೆ ಮಾಡಿದೆ. ಬಳ್ಳಾರಿ ತಾಲೂಕಿನಿಂದ 18 ಕಿಮೀ ದೂರದಲ್ಲಿರುವ ಮಿಂಚೇರಿ ಅರಣ್ಯ ಪ್ರದೇಶ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. ಈ ವರ್ಷ ಹೆಚ್ಚು ಮಳೆಯಾಗಿದ್ದರಿಂದ ಮಿಂಚೇರಿ ಅರಣ್ಯ ಪ್ರದೇಶ ಈಗ ಪ್ರವಾಸಿಗರನ್ನ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಸುಮಾರು 2625 ಎಕರೆ ವಿಸ್ತೀರ್ಣದ ಈ ಅರಣ್ಯ ಪ್ರದೇಶದಲ್ಲಿ ಬೆಟ್ಟಗುಡ್ಡಗಳು, ಇಲ್ಲಿನ ಪ್ರಕೃತಿ ಸೌಂದರ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ.

ಬ್ರಿಟಿಷ್ ಕಾಲದ ಜಡ್ಜ್​ ಮನೆ ಪ್ರವಾಸಿಗರಿಗೆ ಅಚ್ಚುಮೆಚ್ಚು  ದಿನದಿಂದ ದಿನಕ್ಕೆ ಹೆಚ್ಚು ಪ್ರಸಿದ್ಧಿ ಪಡೆಯುತ್ತಿರುವ ಮಿಂಚೇರಿ ಅರಣ್ಯ ಪ್ರದೇಶದ ಸೌಂದರ್ಯ ವೀಕ್ಷಿಸಲು ನಿತ್ಯ ಸಾವಿರಾರು ಜನರು ಬರುತ್ತಿದ್ದಾರೆ. ಅದರಲ್ಲೂ ಈ ಅರಣ್ಯ ಪ್ರದೇಶದಲ್ಲಿ ಬ್ರಿಟಿಷ್ ಕಾಲದಲ್ಲಿ ನಿರ್ಮಾಣಗೊಂಡಿದ್ದ ನ್ಯಾಯಾಧೀಶರ ವಾಸಸ್ಥಳದ ಬಂಗಲೆಯೂ ಕೂಡ ಪ್ರವಾಸಿಗರಿಗೆ ಹೊಸ ಅನುಭವ ನೀಡುತ್ತಿದೆ. ಮಲೆನಾಡಿನ ಅನುಭವ ನೀಡುತ್ತಿರುವ ಬಿಸಿಲನಾಡಿನ ಈ ಪ್ರದೇಶವನ್ನ ಅಭಿವೃದ್ಧಿ ಮಾಡಬೇಕು ಅನ್ನೋದು ಪ್ರವಾಸಿಗರ ಮಾತು.

ಪ್ರತಿ ವರ್ಷ ಸಮರ್ಪಕ ಮಳೆ ಇಲ್ಲದೇ ಇಲ್ಲಿನ ಗುಡ್ಡಬೆಟ್ಟಗಳು, ಇಲ್ಲಿನ ಪರಿಸರ ಬೆಂದು ಹೋಗುತ್ತಿತ್ತು. ಆದ್ರೆ ಈ ವರ್ಷ ನಿರಂತರ ಮಳೆಯಿಂದ ಮಿಂಚೇರಿ ಅರಣ್ಯ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಾ ಪ್ರವಾಸಿಗರನ್ನ ಕೈಬಿಸಿ ಕರೆಯುತ್ತಿದೆ.

Published On - 2:51 pm, Tue, 13 October 20

Follow Us
ಮೂವರ ಶೂಟೌಟ್​​ ಕೇಸ್​​: ಅಂದು ನಡೆದದ್ದೇನು? ಇಂಚಿಂಚೂ ಮಾಹಿತಿ ನೀಡಿದ RFO
ಮೂವರ ಶೂಟೌಟ್​​ ಕೇಸ್​​: ಅಂದು ನಡೆದದ್ದೇನು? ಇಂಚಿಂಚೂ ಮಾಹಿತಿ ನೀಡಿದ RFO
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ