AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramayana Movie Trailer: ‘ರಾಮಾಯಣ’ ಟ್ರೇಲರ್​ನಲ್ಲಿ ರಾವಣನಾಗಿ ಅಬ್ಬರಿಸಿದ ನಟ ರಾಕಿಂಗ್ ಸ್ಟಾರ್ ಯಶ್

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ, ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರದ ಭವ್ಯ ಟ್ರೇಲರ್ ಬಿಡುಗಡೆಯಾಗಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ನಟನೆಯ ಈ ಸಿನಿಮಾ, ಹಾಲಿವುಡ್ ಮಟ್ಟದ ದೃಶ್ಯ ವೈಭವ ಹಾಗೂ ಅದ್ಭುತ ಸಂಗೀತವನ್ನೊಳಗೊಂಡಿದೆ. 2026ರ ದೀಪಾವಳಿಗೆ ಜಾಗತಿಕವಾಗಿ ಸಿನಿಮಾ ತೆರೆಕಾಣಲು ಸಜ್ಜಾಗಿದೆ.

Ramayana Movie Trailer: ‘ರಾಮಾಯಣ’ ಟ್ರೇಲರ್​ನಲ್ಲಿ ರಾವಣನಾಗಿ ಅಬ್ಬರಿಸಿದ ನಟ ರಾಕಿಂಗ್ ಸ್ಟಾರ್ ಯಶ್
ಯಶ್
ರಾಜೇಶ್ ದುಗ್ಗುಮನೆ
|

Updated on:Jul 30, 2026 | 10:01 AM

Share

ಮುಖ್ಯಾಂಶಗಳು

  • ರಾಮಾಯಣ ಟ್ರೇಲರ್ ರಿಲೀಸ್
  • ರಾವಣನಾಗಿ ಯಶ್ ಅಬ್ಬರ
  • ಗಮನ ಸೆಳೆದ ಸಿನಿಮಾ ಟ್ರೇಲರ್

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ನಿರೀಕ್ಷೆ ಮೂಡಿಸಿರುವ, ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ವಿಶ್ವದಾದ್ಯಂತ ಸಿನಿಮಾ ಪ್ರೇಕ್ಷಕರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಹಾಲಿವುಡ್ ಮಟ್ಟದ ದೃಶ್ಯ ವೈಭವ ಹಾಗೂ ಭಾರತದ ಶ್ರೇಷ್ಠ ಮಹಾಕಾವ್ಯದ ಭವ್ಯತೆಯನ್ನು ಮೇಳೈಸಿಕೊಂಡಿರುವ ಈ ಟ್ರೇಲರ್, ಗಮನ ಸೆಳೆಯುತ್ತಿದೆ.

ಕಣ್ಣು ಕೋರೈಸುವ ದೃಶ್ಯ ವೈಭವ ಹಾಗೂ ಅದ್ಭುತ ವಿಎಫ್​​ಎಕ್ಸ್

ಇಂದು (ಜುಲೈ 30) ಮುಂಜಾನೆ 4.15ಕ್ಕೆ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್‌ನ ಪ್ರತಿಯೊಂದು ಫ್ರೇಮ್ ಕೂಡ ಕಲಾತ್ಮಕವಾಗಿ ಮೂಡಿಬಂದಿದ್ದು, ಪ್ರೇಕ್ಷಕರನ್ನು ತ್ರೇತಾಯುಗದ ಕಾಲಕ್ಕೆ ಕರೆದೊಯ್ಯುತ್ತದೆ. ಅಯೋಧ್ಯೆಯ ಭವ್ಯ ಅರಮನೆಗಳು, ದಂಡಕಾರಣ್ಯದ ರಮಣೀಯ ಹಾಗೂ ರೌದ್ರ ಪರಿಸರ ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತವೆ. ಆಸ್ಕರ್ ಪ್ರಶಸ್ತಿ ವಿಜೇತ DNEG ಸಂಸ್ಥೆಯ ಅತ್ಯಾಧುನಿಕ ಗ್ರಾಫಿಕ್ಸ್ ತಂತ್ರಜ್ಞಾನ ಬಳಕೆಯಾಗಿರುವುದು ಪ್ರತಿಯೊಂದು ದೃಶ್ಯದಲ್ಲೂ ಎದ್ದು ಕಾಣುತ್ತಿದ್ದು, ಹಾಲಿವುಡ್‌ನ ‘ಅವತಾರ್’ ಹಾಗೂ ‘ಲಾರ್ಡ್ ಆಫ್ ದಿ ರಿಂಗ್ಸ್’ ಚಿತ್ರಗಳ ದೃಶ್ಯ ಗುಣಮಟ್ಟಕ್ಕೆ ಸರಿಸಾಟಿಯಾಗಿ ನಿಲ್ಲುವಂತಿದೆ.

ಪಾತ್ರಧಾರಿಗಳ ರಾಜ ಗಾಂಭೀರ್ಯ

ಪ್ರಭು ಶ್ರೀರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಅವರ ಶಾಂತ, ದಿವ್ಯ ಹಾಗೂ ಗಂಭೀರ ನೋಟ ಪ್ರೇಕ್ಷಕರ ಮನ ಗೆದ್ದಿದ್ದರೆ, ಸೀತೆಯಾಗಿ ಸಾಯಿ ಪಲ್ಲವಿ ಅವರ ಸೌಮ್ಯತೆ ಕಣ್ಣು ತುಂಬಿಕೊಳ್ಳುವಂತಿದೆ. ಇನ್ನು ಲಂಕಾಧಿಪತಿ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅವರ ರೌದ್ರಾವತಾರ ಮತ್ತು ಗಡಸು ಧ್ವನಿ ಇಡೀ ಟ್ರೇಲರ್‌ನ ಹೈಲೈಟ್ ಆಗಿದ್ದು, ರೋಮಾಂಚನ ಉಂಟುಮಾಡುತ್ತದೆ. ಅವರಿಂದಲೇ ಟ್ರೇಲರ್ ಓಪನಿಂಗ್ ಕಾಣುತ್ತದೆ. ಅವರೇ ಇಡೀ ಟ್ರೇಲರ್​ನ ಹೈಲೈಟ್.

ಹಿನ್ನೆಲೆ ಸಂಗೀತದ ಮಾಂತ್ರಿಕತೆ

ಚಿತ್ರಕ್ಕೆ ಆಸ್ಕರ್ ವಿಜೇತರಾದ ಎ.ಆರ್. ರೆಹಮಾನ್ ಮತ್ತು ಹಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಹ್ಯಾನ್ಸ್ ಝಿಮ್ಮರ್ ಜಂಟಿಯಾಗಿ ಸಂಗೀತ ನೀಡಿದ್ದು, ಟ್ರೇಲರ್‌ನ ಬ್ಯಾಕ್‌ಗ್ರೌಂಡ್ ಸ್ಕೋರ್ ಪ್ರತಿ ದೃಶ್ಯದ ತೀವ್ರತೆಯನ್ನು ದುಪ್ಪಟ್ಟು ಮಾಡಿದೆ. ಮೈನವಿರೇಳಿಸುವ ಶ್ಲೋಕಗಳು ಮತ್ತು ವಾದ್ಯಗಳ ನಾದವು ಸಿನಿಮಾದ ದಿವ್ಯತೆಗೆ ದನಿಯಾಗಿದೆ.

ಒಟ್ಟಾರೆಯಾಗಿ, ‘ರಾಮಾಯಣ’ ಕೇವಲ ಒಂದು ಸಿನಿಮಾವಲ್ಲ, ಬದಲಿಗೆ ಭಾರತೀಯ ಸಂಸ್ಕೃತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಮಹಾ ದೃಶ್ಯ ಕಾವ್ಯ ಎಂಬುದು ಟ್ರೇಲರ್ ಮೂಲಕ ಸಾಬೀತಾಗಿದೆ. ಸೋನಿ ಪಿಕ್ಚರ್ಸ್ ಸಹಯೋಗದೊಂದಿಗೆ ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾಗಿರುವ ಈ ಚಿತ್ರದ ಮೊದಲ ಭಾಗವು 2026ರ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ವಿಶ್ವಾದ್ಯಂತ ತೆರೆಕಾಣಲಿದೆ. ಪ್ರೇಕ್ಷಕರು ಈಗಾಗಲೇ ಚಿತ್ರಮಂದಿರದಲ್ಲಿ ಈ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ನಮಿತ್ ಮಲ್ಹೋತ್ರಾ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಪ್ರಶ್ನೆ: ರಾಮಾಯಣ ರಿಲೀಸ್ ಯಾವಾಗ?  ಉತ್ತರ: ದೀಪಾವಳಿ

ಪ್ರಶ್ನೆ: ರಾಮಾಯಣ ಟ್ರೇಲರ್ ರಿಲೀಸ್ ಯಾವಾಗ? ಉತ್ತರ: ಜುಲೈ 30

ಪ್ರಶ್ನೆ: ರಾಮಾಯಣದಲ್ಲಿ ರಾವಣನ ಪಾತ್ರಧಾರಿ ಯಾರು? ಉತ್ತರ: ಯಶ್

Published On - 4:25 am, Thu, 30 July 26

Follow Us
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್