ವಾಟರ್ ಬಾಟಲ್ ಆರೋಗ್ಯಕ್ಕೆ ಮಾರಕ: ಆರೋಗ್ಯ ಸಚಿವರ ಸುದ್ದಿಗೋಷ್ಠಿ ಲೈವ್
ಆರೋಗ್ಯ ಇಲಾಖೆಯ ವರದಿಯ ಪ್ರಕಾರ, 296 ಮಿನರಲ್ ವಾಟರ್ ಬಾಟಲ್ ಮಾದರಿಗಳ ಪರೀಕ್ಷೆಯಲ್ಲಿ 95 ಮಾದರಿಗಳು ಅಸುರಕ್ಷಿತವಾಗಿವೆ ಎಂದು ಕಂಡುಬಂದಿದೆ. 72 ಮಾದರಿಗಳು ಸುರಕ್ಷಿತವಾಗಿದ್ದರೆ, 88 ಮಾದರಿಗಳು ಕಳಪೆ ಗುಣಮಟ್ಟದ್ದಾಗಿವೆ. ಈ ಬಗ್ಗೆ 115 ವಾಟರ್ ಬಾಟಲ್ ಕಂಪನಿಗಳಿಗೆ ನೋಟಿಸ್ ನೀಡಲಾಗಿದೆ. ಬಳಕೆದಾರರು ಸುರಕ್ಷಿತ ಬ್ರಾಂಡ್‌ಗಳನ್ನು ಆಯ್ಕೆ ಮಾಡುವುದು ಮುಖ್ಯ.
ಮಿನರಲ್ ವಾಟರ್ ಬಾಟಲ್ ಗಳಲ್ಲಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ವರದಿಯಿಂದ ಬಹಿರಂಗವಾಗಿದೆ. 296 ಕುಡಿಯುವ ನೀರಿನ ಬಾಟಲ್ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 72 ಸುರಕ್ಷಿತ, 95 ಮಾದರಿಗಳು ಅಸುರಕ್ಷಿತ, 88 ಮಾದರಿಗಳು ಕಳಪೆ ಗುಣಮಟ್ಟದ್ದಾಗಿವೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ 115 ವಾಟರ್ ಬಾಟಲ್ ಕಂಪನಿಗಳಿಗೆ ನೋಟಿಸ್ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.
Latest Videos

