2nd PUC Result 2025; ಪಾಸಾದವರಲ್ಲಿ ಶೇಕಡ 70-80 ವಿದ್ಯಾರ್ಥಿಗಳು ಶೇಕಡ 50ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ: ಮಧು ಬಂಗಾರಪ್ಪ
ರಾಜ್ಯದಲ್ಲಿ 2ನೇ ಪಿಯು ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ ಶೇಕಡ 73.45 ರಷ್ಟು ಪಾಸಾಗಿದ್ದಾರೆ, ಗಮನಾರ್ಹ ಸಂಗತಿಯೆಂದರೆ 2nd PUC Result 2025; ಪಾಸಾದವರಲ್ಲಿ ಶೇಕಡ 70-80ರಷ್ಟು ವಿದ್ಯಾರ್ಥಿಗಳು ಶೇಕಡ 50ಕ್ಕಿಂತ ಹೆಚ್ಚು ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ. ಅನುದಾನಿತ ಮತ್ತು ಸರ್ಕಾರೀ ಕಾಲೇಜುಗಳ ಫಲಿತಾಂಶವನ್ನು ವಿಶ್ಲೇಷಣೆ ಮಾಡಿ ಸರಕಾರೀ ಕಾಲೇಜುಗಳಲ್ಲೂ ಗುಣಮಟ್ಟದ ಶಿಕ್ಷಣ ನೀಡಲು ತಮ್ಮ ಇಲಾಖೆ ಪ್ರಯತ್ನಿಸುವುದಾಗಿ ಸಚಿವ ಹೇಳಿದರು.
ಬೆಂಗಳೂರು, ಏಪ್ರಿಲ್ 8: ಸೆಕೆಂಡ್ ಪಿಯು ಪರೀಕ್ಷಾ ಫಲಿತಾಂಶದ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಸಂತಸ ವ್ಯಕ್ತಪಡಿಸಿದರು. ಫಲಿತಾಂಶ ಪ್ರಕಟವಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಈ ಬಾರಿ ಒಟ್ಟಾರೆ ಫಲಿತಾಂಶ ಶೇಕಡ 73.45 ರಷ್ಟು ಬಂದಿದೆ ಎಂದು ಹೇಳಿ ಯಾವ್ಯಾವ ಕಾಲೇಜುಗಳಲ್ಲಿ ಎಷ್ಟೆಷ್ಟು ಪ್ರತಿಶತ ಫಲಿತಾಂಶ ಬಂದಿದೆ ಅನ್ನೋದನ್ನು ವಿವರಿಸಿದರು, ಸರ್ಕಾರೀ ಕಾಲೇಜುಗಳಲ್ಲಿ ಶೇಕಡ 57, ಅನುದಾನಿತ ಕಾಲೇಜುಗಳಲ್ಲಿ ಶೇಕಡ 66, ಅನುದಾನರಹಿತ ಕಾಲೇಜುಗಳಲ್ಲಿ ಶೇಕಡ 82, ಬಿಬಿಎಂಪಿ ಕಾಲೇಜುಗಳಲ್ಲಿನ ಶೇಕಡ 68, ಸರ್ಕಾರೀ ಪದವಿ ಪೂರ್ವ ಕಾಲೇಜುಗಳಲ್ಲಿ ಶೇಕಡ 78ರಷ್ಟು ಫಲಿತಾಂಶ ಬಂದಿದೆಯೆಂದು ಸಚಿವ ಹೇಳಿದರು.
ಇದನ್ನೂ ಓದಿ: KCET Exam 2025: ಸಿಇಟಿ ಪರೀಕ್ಷೆ ಹಾಲ್ ಟಿಕೆಟ್ ಬಿಡುಗಡೆ, ಆನ್ಲೈನ್ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ?
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ