Dinesh Gundu Rao Press Meet: ಅಂಗಡಿಗಳಲ್ಲಿ ನೀರಿನ ಬಾಟಲ್ ಖರೀದಿಸುವ ಮುನ್ನ ಎಚ್ಚರ: ಶಾಕಿಂಗ್ ವಿಚಾರ ಬಹಿರಂಗಪಡಿಸಿದ ಸಚಿವ ಗುಂಡೂರಾವ್
ಕರ್ನಾಟಕ ಸರ್ಕಾರವು ಆಹಾರ ಕಲಬೆರಕೆ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಆಹಾರ ಇಲಾಖೆಯ ವರದಿಯ ಪ್ರಕಾರ, ಬಾಟಲ್ ನೀರಿನಲ್ಲಿ ಶೇ. 50ರಷ್ಟು ಅಸುರಕ್ಷಿತವಾಗಿದೆ. ಆರೋಗ್ಯ ಸಚಿವರು ಈ ಕುರಿತು ಸುದ್ದಿಗೋಷ್ಠಿ ನಡೆಸಿ, ಹಸಿರು ಬಟಾಣಿಗೆ ಹಸಿರು ಬಣ್ಣ ಬಳಸುವುದು ಸೇರಿದಂತೆ ಅನೇಕ ಆತಂಕಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಕುಡಿಯುವ ನೀರು, ಖಾರ ಮಿಕ್ಸ್ಚರ್, ಪನ್ನೀರ್ ಮತ್ತು ಐಸ್ ಕ್ರೀಮ್ ಘಟಕಗಳಿಗೆ ನೋಟೀಸ್ ಜಾರಿಗೊಳಿಸಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರ ಗೋಬಿ ಮಂಚೂರಿಗೆ, ಕಾಟನ್ ಕ್ಯಾಂಡಿಗಳಿಗೆ ಹಾಕುವ ಕೃತಕ ಬಣ್ಣಗಳು ಸೇರಿದಂತೆ ಪ್ರತಿನಿತ್ಯ ಸೇವಿಸುವ ಸಾಕಷ್ಟು ಆಹಾರಗಳಲ್ಲಿನ ಕಲಬೆರಕೆಗಳಿಗೆ ನಿಷೇಧ ಹೇರುತ್ತಲೇ ಇದೆ. ಇದೀಗ ಬಾಟಲ್ ಮೂಲಕ ಪೂರೈಕೆ ಆಗುವ ಕುಡಿಯುವ ನೀರು ಶೇಕಡ 50ರಷ್ಟು ಕಳಪೆ ಎಂದು ಆಹಾರ ಇಲಾಖೆಯ ವರದಿ ತಿಳಿಸಿದೆ. ಈ ಕುರಿತು ವಿಕಾಸಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಹತ್ತರ ಸುದ್ದಿಗೋಷ್ಠಿ ನಡೆಸಿದ್ದಾರೆ. ಈಗಾಗಲೇ 296 ಕುಡಿಯುವ ನೀರಿನ ಬಾಟಲ್ ಮಾದರಿಗಳ ಟೆಸ್ಟ್ ಮಾಡಿದ್ದು, ಇದರಲ್ಲಿ72 ಸುರಕ್ಷಿತ ಹಾಗೂ 95 ಮಾದರಿಗಳು ಅಸುರಕ್ಷಿತ ಎಂದು ವರದಿಯಾಗಿದೆ. ಇದಲ್ಲದೇ ಹಸಿರು ಬಟಾಣಿಗೆ ಹಸಿರು ಕಲರ್ ಬರಿಸಲು ಟೆಟಾರ್ಜಿನ್ ಕೆಮಿಕಲ್ ಬಳಸಿರುವ ಆತಂಕಕಾರಿ ವಿಷಯ ಹೊರಬಿದ್ದಿದೆ. ಕುಡಿಯುವ ನೀರಿನ ಬಾಲಿ ಮಾತ್ರವಲ್ಲದೇ ಖಾರ ಮಿಕ್ಚರ್, ಪನ್ನೀರ್ ಹಾಗೂ ಐಸ್ಕ್ರೀಂ ಘಟಕಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ತಯಾರಿಕಾ ಘಟಕಗಳಲ್ಲಿ ಲೋಪ ಕಂಡುಬಂದ ಹಿನ್ನೆಲೆ ನೋಟಿಸ್ ನೀಡಲಾಗಿರುವುದಾಗಿ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: LPG Cylinder Price: ದೇಶದ ಜನತೆಗೆ ಸಿಹಿ ಸುದ್ದಿ, ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆ !
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ