ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮತ್ತು ಬಸನಗೌಡ ಯತ್ನಾಳ್ ನಡುವಿನ ಚರ್ಚೆ ಸದನದ ಗಮನ ಸೆಳೆಯಿತು
ಯೋಜನೆಗೆ ಅವಶ್ಯವಿರುವ ರೂ. 52 ಕೋಟಿಯನ್ನು ಎರಡು ಮೂರು ವಾರಗಳಲ್ಲಿ ಬಿಡುಗಡೆ ಮಾಡುವುದು ಎಂದು ಹೇಳಿದರು. ಬೇಸಿಗೆ ಹತ್ತಿರವಾಗುತ್ತಿರುವದರಿಂದ ಪೈಪ್ ಗಳನ್ನು ಬದಲಾಯಿಸುವ ಕಾರ್ಯ ಆದಷ್ಟು ಬೇಗ ಪೂರ್ಣಗೊಳ್ಳಬೇಕೆಂದು ವಿಜಯಪುರ ಶಾಸಕ ನಗರಾಭುವೃದ್ಧಿ ಸಚಿವರ ಮೇಲೆ ಒತ್ತಡ ಹಾಕಿದರಲ್ಲದೆ, ಗುತ್ತಿಗೆದಾರರೊಬ್ಬರ ಬಾಕಿಯಿರುವ ಹಣವನ್ನು ಬಿಡುಗಡೆ ಮಾಡುವಂತೆಯೂ ಬೈರತಿ ಸುರೇಶ್ ಅವರಿಗೆ ಹೇಳಿದರು.
ಬೆಳಗಾವಿ: ಫಾರ್ ಎ ಚೇಂಜ್ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮತ್ತು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ (Byrathi Suresh) ನಡುವೆ ಇಂದು ಸೌಹಾರ್ದಯುತ ಚರ್ಚೆ ನಡೆಯಿತು. ವಿಜಯಪುರ ನಗರದ 24/7 ಕುಡಿಯುವ ನೀರಿನ ಸಮಸ್ಯೆಯನ್ನು (drinking water issue) ಪ್ರಸ್ತಾಪಿಸಿದ ಯತ್ನಾಳ್ ಕೋಲಾರದಿಂದ ವಿಜಯಪುರ ನಗರಕ್ಕೆ ಪೂರೈಸಲು ಪಿಎಸ್ ಯು ಪೈಪ್ ಗಳನ್ನು ಅಳವಡಿಸಲಾಗಿದ್ದು ಅವುಗಳ ಪದೇಪದೆ ಒಡೆದು ನೀರು ಸರಬರಾಜಿಗೆ ಸಮಸ್ಯೆಯಾಗುತ್ತಿದೆ, ಪೈಪ್ ಗಳನ್ನು ಬದಲಾಯಿಸುವ ಯೋಜನೆ ನೆನೆಗಿದಿಗೆ ಬಿದ್ದಿದೆ, ಅದನ್ನು ಆರಂಭಿಸಿ ಕಾಮಗಾರಿಯನ್ನು ಪೂರ್ಣಗೊಳಿಸಲು 52 ಕೋಟಿ ರೂ. ಪರಿಷ್ಕೃತ ಅಂದಾಜು ಪಟ್ಟಿಯನ್ನು ಇಲಾಖೆಗೆ ಸಲ್ಲಿಸಲಾಗಿದೆ ಮತ್ತು ಸಚಿವರು ಅದನ್ನು ಬಿಡುಗಡೆ ಮಾಡಬೇಕೆಂದು ಹೇಳಿದರು. ಉತ್ತರಿಸಲು ಎದ್ದು ನಿಂತ ಸಚಿವ ಸುರೇಶ್, ಪೈಪ್ ಬದಲಾವಣೆ ಕಾಮಗಾರಿಗೆ ಹೆಚ್ಚುವರಿಯಾಗಿ ಪ್ರಸ್ತಾಪವಾಗಿರುವ 20 ಕೋಟಿ ರೂ. ಗಳನ್ನು ಮಂಜೂರು ಮಾಡಲು ಅವಕಾಶವಿಲ್ಲ, ಸಾಲ ಪಡೆದು ಕೆಲಸ ಪೂರ್ಣಗೊಳಿಸಿಕೊಳ್ಳಲು ಆರ್ಥಿಕ ಇಲಾಖೆ ಹೇಳಿದೆ. ಆದರೆ ತಮ್ಮ ಇಲಾಖೆಯು ಬೇರೆ ಮೂಲಗಳಿಂದ
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ